Site icon Vistara News

Tourists Rescued | ಗೋಕರ್ಣ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

Gokarna tourists rescued

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳಿಗೆ ಸಿಕ್ಕು ಮುಳುಗುವ ಹಂತದಲ್ಲಿದ್ದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿ ನಡೆದಿದೆ (Tourists Rescued). ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಮೂಲದ ಮಾರುತಿ(20), ಚಂದನಾ(16) ಹಾಗೂ ಮಧುಸೂದನ(11) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ.

ಇಲ್ಲಿನ ಮುಖ್ಯಕಡಲತೀರದಲ್ಲಿ ಬೆಳಿಗ್ಗೆ ಪ್ರವಾಸಕ್ಕೆಂದು ಬಂದಿದ್ದ ಬಳ್ಳಾರಿ ಮೂಲದ ಕುಟುಂಬಸ್ಥರು ಸಮುದ್ರದಲ್ಲಿ ಈಜಲು ತೆರಳಿದ್ದರು. ಈ ವೇಳೆ ಅಲೆಗಳ ಅಬ್ಬರ ಹೆಚ್ಚಿದ್ದು ಇದನ್ನು ಗಮನಿಸದೇ ಮುಂದೆ ತೆರಳಿದ್ದ ಮಹಿಳೆ ಸೇರಿ ಮೂವರು ಅಪಾಯಕ್ಕೆ ಸಿಲುಕಿದ್ದರು.

ಪ್ರವಾಸಿಗರು ಮುಳುಗುತ್ತಿದ್ದುದನ್ನು ಗಮನಿಸಿದ ಕರ್ತವ್ಯನಿರತ ಲೈಫ್‌ಗಾರ್ಡ್ ಸಿಬ್ಬಂದಿ ಮೋಹನ್ ಅಂಬಿಗ, ಶಿವಪ್ರಸಾದ್ ಅಂಬಿಗ, ಬೀಚ್ ಸೂಪರ್‌ವೈಸರ್ ಹಾಗೂ ಬೋಟಿಂಗ್ ಸಿಬ್ಬಂದಿ ಪ್ರವಾಸಿಗರ ರಕ್ಷಣೆ ಮಾಡಿದ್ದಾರೆ. ಪ್ರವಾಸಿಗರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಕುರಿತು ಗೋಕರ್ಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ರಕ್ಷಣೆ ಮಾಡಿದ ಸಾಹಸಿಗಳಾದ ಮೋಹನ್ ಅಂಬಿಗ, ಶಿವಪ್ರಸಾದ್ ಅಂಬಿಗ, ರವಿ ನಾಯ್ಕ, ರಘುವೀರ್‌ ಅವರನ್ನು ಪ್ರವಾಸಿ ತಂಡ ಕಣ್ಣೀರಿನ ಮೂಲಕ ನೆನೆಪಿಕೊಂಡಿತು.

ಇದನ್ನೂ ಓದಿ | Suicide Case | ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ; ಒಬ್ಬ ಬಾಲಕಿಯ ರಕ್ಷಣೆ

Exit mobile version