Site icon Vistara News

Kudle beach | ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನೀರಲೆಗಳಿಗೆ ಸಿಲುಕಿ ಮುಳುಗೇಳುತ್ತಿದ್ದ ಐಟಿ ಉದ್ಯೋಗಿಗಳ ರಕ್ಷಣೆ

Kudle beach

ಕಾರವಾರ: ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ (Kudle beach) ನೀರಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದ ಇಬ್ಬರು ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೆಂಗಳೂರಿನ ಐಟಿ ಉದ್ಯೋಗಿಗಳಾದ ಯಶ್(25), ಶೇಜನ್(26) ರಕ್ಷಣೆಗೊಳಗಾದ ಪ್ರವಾಸಿಗರು.

ಬೆಂಗಳೂರು ಮೂಲದ ಐಟಿ ಕಂಪೆನಿ ಉದ್ಯೋಗಿಗಳು ಜತೆಯಾಗಿ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಇವರಲ್ಲಿ ಕೆಲವರು ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳಿಗೆ ಸಿಕ್ಕು ಮುಳುಗುವ ಹಂತದಲ್ಲಿದ್ದರು. ಕೆಲವರು ತಕ್ಷಣವೇ ಓಡಿ ಮೇಲೆ ಬಂದವರು. ಇಬ್ಬರು ನೀರಿನಲ್ಲಿ ಮುಳುಗಲು ಆರಂಭಿಸಿದರು. ಇವರನ್ನು ಗಮನಿಸಿದ ಲೈಫ್‌ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಧಾವಿಸಿದರು.

ಲೈಫ್‌ಗಾರ್ಡ್ ನಾಗೇಂದ್ರ ಹಾಗೂ ಹೋಂಗಾರ್ಡ್ ಶೇಖರ ಅವರ ಸಾಹಸದಿಂದಾಗಿ ಅದೃಷ್ಟವಶಾತ್ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾದರು. ಐಟಿ ಉದ್ಯೋಗಿಗಳ ತಂಡ ತಮ್ಮವರನ್ನು ಪಾರು ಮಾಡಿದ್ದಕ್ಕಾಗಿ ಈ ಸಿಬ್ಬಂದಿಯನ್ನು ಅಭಿನಂದಿಸಿದರು. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ | Drowned in Canal | ಕಾಲುವೆಯಲ್ಲಿ ಈಜಾಡಲು ಹೋಗಿ ನೀರು ಪಾಲಾದ ವಿದ್ಯಾರ್ಥಿಗಳು; ಕುಟುಂಬಸ್ಥರ ಆಕ್ರಂದನ

Exit mobile version