Site icon Vistara News

Drowned in Channel : ಕಾಲುವೆ ನೀರಿನಲ್ಲಿ ಮುಳುಗಿ ಇಬ್ಬರು ಮೃತ್ಯು, ಮೋಟಾರ್‌ ದುರಸ್ತಿ ವೇಳೆ ದುರಂತ

Two persons drowned in ganga river

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಕಾಲುವೆ ನೀರಿನಲ್ಲಿ ಮುಳುಗಿದ್ದ (Drowned in Channel) ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ಮಾವಿನಹಳ್ಳಿ ಗ್ರಾಮದ ಕಾಲುವೆಯಲ್ಲಿ ದುರಂತ ಸಂಭವಿಸಿದೆ.

ಮಾವಿನಹಳ್ಳಿ ಗ್ರಾಮದ ನಿವಾಸಿಗಳಾದ ಭೋಜರಾಜ್ ದಶವಂತ, ರಾಜಕುಮಾರ ದಶವಂತ ಮೃತ ದುರ್ದೈವಿಗಳು. ಇವರು ಕಾಲುವೆ ಪಕ್ಕದಲ್ಲಿ ಮೋಟಾರ್ ದುರಸ್ತಿ ಮಾಡುವ ವೇಳೆ ಕಾಲು ಜಾರಿ ನೀರು ಪಾಲಾಗಿದ್ದರು.

ಒಬ್ಬ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದಾಗ ಮತ್ತೊಬ್ಬ ಅವನ ರಕ್ಷಣೆಗೆಂದು ನೀರಿಗೆ ಹಾರಿದ್ದ. ಇಬ್ಬರೂ ಕೊಚ್ಚಿಕೊಂಡು ಹೋಗಿದ್ದರು. ಈಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.

ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

ಪ್ರೀತಿಗೆ ವಿರೋಧ; ರಾಮದೇವರ ಬೆಟ್ಟದಿಂದ ಜಿಗಿದು ಪ್ರೇಮಿಗಳ ಆತ್ಮಹತ್ಯೆ ಯತ್ನ

ರಾಮನಗರ: ಬೆಂಗಳೂರಿನ ಕತ್ರಿಗುಪ್ಪೆ ವಾಸಿಯಾಗಿರುವ ಪ್ರೇಮಿಗಳಿಬ್ಬರ ಪ್ರೀತಿಗೆ (Love Failure) ಪೋಷಕರ ತೀವ್ರವಾಗಿ ವಿರೋಧ ಮಾಡಿದ್ದಾರೆ. ಇದರಿಂದ ಬೇಸತ್ತ ಯುವ ಪ್ರೇಮಿಗಳು ಸೀದಾ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟಕ್ಕೆ ಬಂದಿದ್ದು, ಅಲ್ಲಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಸೀದಾ ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಂಡೆ ಮೇಲಿಂದ ಕೆಳಗೆ ಜಿಗಿದಿದ್ದ ಯುವಕ ಹಾಗೂ ಯುವತಿಗೆ ತೀವ್ರ ಗಾಯಗಳಾಗಿವೆ. ಈ ವೇಳೆ ಯುವಕನ ಸ್ಥಿತಿ ಗಂಭೀರವಾಗಿದ್ದು, ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿದೆ. ಕೆಳಗೆ ಬಿದ್ದು ಒದ್ದಾಟ ನಡೆಸುತ್ತಿದ್ದ ಇವರಿಬ್ಬರನ್ನು ಸ್ಥಳೀಯರು ನೋಡಿ ರಕ್ಷಣೆ ಮಾಡಿದ್ದಾರೆ.‌

ಗಾಯಗೊಂಡ ಯುವ ಪ್ರೇಮಿಗಳನ್ನು ರಕ್ಷಣೆ ಮಾಡಿರುವ ಸ್ಥಳೀಯ ನಿವಾಸಿಗಳು ಕೂಡಲೇ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಸಾಹಿತ್ಯ (19), ಚೇತನ್ (19) ಆತ್ಮಹತ್ಯೆಗೆ ಯತ್ನಿಸಿದ ಯುವ ಪ್ರೇಮಿಗಳು ಎಂದು ತಿಳಿದು ಬಂದಿದೆ. ಇವರಿಬ್ಬರೂ ಕತ್ರಿಗುಪ್ಪೆಯ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ಇವರ ಪ್ರೀತಿಯ ವಿಷಯ ಮನೆಯವರಿಗೆ ತಿಳಿದು ತೀವ್ರ ಆಕ್ರೋಶವನ್ನು ಹೊರಹಾಕಿದ್ದರು. ಪ್ರಥಮ ವರ್ಷದ ಬಿ.ಎ ಓದುತ್ತಿದ್ದ ಇವರಿಗೆ ಇದರಿಂದ ತೀವ್ರ ನೋವಾಗಿದೆ. ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ರಾಮದೇವರ ಬೆಟ್ಟಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಮನೆಗೆ ಕರೆ ಮಾಡಿದ್ದ ಪ್ರೇಮಿಗಳು

ರಾಮದೇವರ ಬೆಟ್ಟಕ್ಕೆ ಬಂದಿದ್ದ ಸಾಹಿತ್ಯ ಮತ್ತು ಚೇತನ್‌ ಸಾಯುವ ನಿರ್ಧಾರ ಮಾಡಿದವರು, ಅದಕ್ಕೂ ಮುಂಚೆ ಮನೆಯವರಿಗೆ ಕೊನೆಯದಾಗಿ ಕರೆ ಮಾಡಿ ತಾವು ಹೀಗೆ ರಾಮದೇವರ ಬೆಟ್ಟಕ್ಕೆ ಬಂದಿದ್ದೇವೆ. ನಾವು ಈಗ ಸಾಯುತ್ತಿದ್ದೇವೆ. ನಮ್ಮನ್ನು ಕ್ಷಮಿಸಿಬಿಡಿ ಎಂದು ಹೇಳಿ ಅಲ್ಲಿಂದ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ Bengaluru Murder case: ಕುಡಿತದ ಮತ್ತಿನಲ್ಲಿ ಸ್ನೇಹಿತರ ಭೀಕರ ಕೃತ್ಯ: ಕಲ್ಲಿನಿಂದ ವ್ಯಕ್ತಿಯ ತಲೆ ಜಜ್ಜಿ ಕೊಲೆ

Exit mobile version