Site icon Vistara News

Bellary News: ಸಿರುಗುಪ್ಪ ಬಳಿ ಬೊಲೆರೊ ವಾಹನದ ಟಯರ್ ಬ್ಲಾಸ್ಟ್, 37 ಜನರಿಗೆ ಗಾಯ

Tyre blast of Bolero near Siriguppa, 37 injured

ಬಳ್ಳಾರಿ: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಬಳಿ ಟಯರ್ ಬ್ಲಾಸ್ಟ್ ಬೊಲೆರೋ ವಾಹನ ರಸ್ತೆ ಪಕ್ಕದ ತಡೆಗೋಡೆಗೆ ಡಿಕ್ಕಿಯಾಗಿದ್ದರಿಂದ 37 ಕಾರ್ಮಿಕರಿಗೆ ಗಂಭಿರ ಗಾಯಗಳಾಗಿವೆ. ಮೆಣಸಿನಕಾಯಿ ಕಟಾವಿಗೆ ತೆರಳಿದ್ದ 40 ಜನ ಕೂಲಿ ಕಾರ್ಮಿಕರನ್ನು ವಾಹನದಲ್ಲಿ ಕರೆತರುವಾಗ ಅಪಘಾತ (Bellary News) ಸಂಭವಿಸಿದ್ದು, ವಾಹನದಲ್ಲಿದ್ದ 40 ಮಂದಿ ಪೈಕಿ 37 ಮಂದಿಗೆ ಗಾಯಗಳಾಗಿವೆ.

ವೇಗವಾಗಿ ತೆರಳುತ್ತಿದ್ದ ವಾಹನದ ಟಯರ್‌ ಬ್ಲಾಸ್ಟ್‌ ಆಗಿದ್ದರಿಂದ ಒಮ್ಮೆಲೆ ರಸ್ತೆಪಕ್ಕದ ತಡೆಗೋಡೆಗೆ ಡಿಕ್ಕಿಯಾಗಿದೆ. ಇದರಿಂದ ಕಾರ್ಮಿಕರು ಕೆಳಕ್ಕೆ ಬಿದ್ದಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಚುನಾವಣಾ ಕರ್ತವ್ಯ ಲೋಪ; ಎಂಆರ್‌ಬಿಸಿ ಜೆ.ಇ‌. ಮಹೇಶ್ ರಮಾವತ್‌ ಅಮಾನತು

ಗದಗ: ಚುನಾವಣಾ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಎಂಆರ್‌ಬಿಸಿ ಜೆ.ಇ‌. ಮಹೇಶ್ ರಮಾವತ್‌ ಅವರನ್ನು ಅಮಾನತು ಮಾಡಿ ಗದಗ ಡಿಸಿ ವೈಶಾಲಿ ಎಂ.ಎಲ್ ಆದೇಶ ಹೊರಡಿಸಿದ್ದಾರೆ.

ಮಹೇಶ್‌ ರಮಾವತ್‌ ಅವರನ್ನು ರೋಣ ವಿಧಾನಸಭಾ ಕ್ಷೇತ್ರದ‌ ಗಜೇಂದ್ರಗಡ, ಪುರ್ತಗೇರಿ, ರೋಣ ರಸ್ತೆ ಚೆಕ್ ಪೋಸ್ಟ್ ತನಿಖಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ, ಕಚೇರಿ ಮುಖ್ಯಸ್ಥರ ಅನುಮತಿಯಿಲ್ಲದೇ ಕೇಂದ್ರಸ್ಥಾನ ಬಿಟ್ಟಿರುವುದು ಹಾಗೂ ಜವಾಬ್ದಾರಿ ಮರೆತು ಕರ್ತವ್ಯಕ್ಕೆ ಗೈರು ಹಾಜರಾಗಿದ್ದಕ್ಕೆ, 1951ರ ಕಲಂ 134ರ ಉಲ್ಲಂಘನೆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ಎಇಇ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗ್ರಾಮೀಣ‌ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಇಇ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಇಇ ಜೆ.ಪಿ.ಶೆಟ್ಟಿ ಅವರ ಮುದ್ದೇಬಿಹಾಳದ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಅನಿತಾ ಹದ್ದಣ್ಣನವರ, ಸಿಪಿಐ ಆನಂದ ಠಕ್ಕಣ್ಣನವರ ಹಾಗೂ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಕಡೂರು ಬಳಿ 9 ಲಕ್ಷ ರೂಪಾಯಿ ಜಪ್ತಿ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬಸವನಹಳ್ಳಿ ದಿಬ್ಬದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ರೂ.ಗಳನ್ನು ಪಿಎಸ್‌ಐ ರಮ್ಯ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಕ್‌ಗಳು ಹಾಗೂ 1.18 ಲಕ್ಷ ರೂಪಾಯಿ ಮೌಲ್ಯದ ದವಸ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

Exit mobile version