ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಭಕ್ತನೊಬ್ಬ (Udupi News) ಅಚಾನಕ್ ಆಗಿ ಬಾವಿಗೆ ಬಿದ್ದ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ಸಂತೋಷ್ ಬಾವಿಗೆ ಬಿದ್ದವರು.
ನಿನ್ನೆ ಗುರುವಾರ ಸಂಜೆ ವೇಳೆ ಶೀರಿಬೀಡು ಬಳಿ ಆವರಣದಲ್ಲಿರುವ ಬಾವಿ ಬಳಿ ಕುಳಿತಿದ್ದರು. ಈ ವೇಳೆ ಸಂತೋಷ್ ಆಯತಪ್ಪಿ ಬಾವಿಗೆ ಉರುಳಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಬಾವಿಗೆ ಬಿದ್ದವನ ರಕ್ಷಣೆಗೆ ಧಾವಿಸಿದ್ದಾರೆ.
ಬಾವಿಯಲ್ಲಿ ನೀರು ಕಡಿಮೆ ಇರುವ ಹಿನ್ನೆಲೆಯಲ್ಲಿ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾವಿಗೆ ಬಿದ್ದ ಸಂತೋಷ್‌ನ ರಕ್ಷಣೆ ಧಾವಿಸಿದ ನಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಬಾವಿಗೆ ಹಗ್ಗಇಳಿ ಬಿಟ್ಟು ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಬಾವಿಗೆ ರಭಸವಾಗಿ ಬಿದ್ದ ಪರಿಣಾಮ ಸಂತೋಷ್ ಗಾಯಗೊಂಡಿದ್ದು, ಕೂಡಲೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್ ಹೈಕಮಾಂಡ್ ಟಾಸ್ಕ್; ಲೋಕಸಭೆಯಲ್ಲಿ ಸ್ಪರ್ಧಿಸಿ, ಇಲ್ಲವೇ ಗೆಲ್ಲಿಸಿ; ಸೋತರೆ ತಲೆದಂಡ!
Road Accident : ಯಮನಂತೆ ಬಂದ ಸರ್ಕಾರಿ ಬಸ್; ಸ್ಮಶಾನ ಸೇರಿದ ಬೈಕ್ ಸವಾರರು
ಕಲಬುರಗಿ: ಭೀಕರ ರಸ್ತೆ ಅಪಘಾತದಲ್ಲಿ (Road Accident) ಇಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ (Bus and Bike Accident) ಅಪಘಾತ ಸಂಭವಿಸಿದೆ. ನಿನ್ನೆ ಗುರುವಾರ (ಜ.11) ರಾತ್ರಿಯಂದು ಕಲಬುರಗಿ ಜಿಲ್ಲೆಯ ಆಳಂದ್ ಪಟ್ಟಣದ ಮಿನಿ ಸೌಧದ ಬಳಿ ಅಪಘಾತ ನಡೆದಿದೆ.
ಸ್ಥಳದಲ್ಲೇ ಒಬ್ಬ ಮೃತಪಟ್ಟರೆ, ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಶುಕ್ರವಾರದಂದು ಮೃತಪಟ್ಟಿದ್ದಾರೆ. ಸಿದ್ದಲಿಂಗಯ್ಯ ಹಿರೇಮಠ(39), ಸಂಕೇತ ಮಹಾಂತಯ್ಯಾ ಹಿರೇಮಠ್(8) ಮೃತ ದುರ್ದೈವಿಗಳು.
ಕಲಬುರಗಿಯಿಂದ ಅಳಂದ ಕಡೆ ಹೊರಟಿದ್ದ ಸರ್ಕಾರಿ ಬಸ್ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಿಂದ ಕೆಳಗೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿತ್ತು. ಗಂಭೀರ ಗಾಯಗೊಂಡಿದ್ದ ಸಂಕೇತ ಸ್ಥಳದಲ್ಲೇ ಜೀವ ಬಿಟ್ಟರೆ, ಸಿದ್ದಲಿಂಗಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಸ್ ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ಸಂಭವಿಸಿ, ಬೈಕ್ ಸವಾರರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಹೆದ್ದಾರಿಯಲ್ಲಿ ಸರಣಿ ಅಪಘಾತ
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಹಲವು ಪ್ರಯಾಣಿಕರು ಪಾರಾಗಿದ್ದಾರೆ. ಇಬ್ಬರಿಗೆ ಗಾಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಘಟನೆ ನಡೆದಿದೆ.
ಐದು ಕಾರು, ಒಂದು ಬಸ್, ಒಂದು ಕ್ಯಾಂಟರ್ ನಡುವೆ ಅಪಘಾತವಾಗಿದ್ದು, ವಾಹನಗಳು ಜಖಂ ಆಗಿವೆ. ಅತೀಯಾದ ವೇಗದಿಂದ ಸರಣಿ ಅಪಘಾತವಾಗಿರುವ ಶಂಕೆ ಮೂಡಿದೆ. ಗಾಯಗೊಂಡ ಇಬ್ಬರು ಪ್ರಯಾಣಿಕರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದಿಂದ ಹೆದ್ದಾರಿಯಲ್ಲಿ ಸುಮಾರು ಎರಡು ಕಿ.ಮೀವರೆಗೂ ಟ್ರಾಫಿಕ್ ಜಾಂ ಉಂಟಾಯಿತು. ನೆಲಮಂಗಲ ಸಂಚಾರಿ ಪೊಲೀಸರು ಮತ್ತು ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಹೆದ್ದಾರು ಮಾಡಿಸಿದ್ದಾರೆ. ನೆಲಮಂಗಲ ಸಂಚಾರಿ ರಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ