Site icon Vistara News

Immoral activites | ಮಧ್ಯರಾತ್ರಿ ಕಾರ್ಯಾಚರಣೆಗಿಳಿದ ಉಡುಪಿ ಎಸ್‌ಪಿ; ಇಬ್ಬರು ಮಂಗಳಮುಖಿಯರು ಅರೆಸ್ಟ್‌

ಅನೈತಿಕ ದಂಧೆ ಉಡುಪಿ ಎಸ್‌ಪಿ

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದಲ್ಲಿ ಮಂಗಳ ಮುಖಿಯರ ಅನೈತಿಕ ದಂಧೆ (Immoral activites) ಮಿತಿಮೀರಿದ್ದು, ಮಧ್ಯರಾತ್ರಿ ಉಡುಪಿ ಎಸ್‌ಪಿ ಕಾರ್ಯಚರಣೆ ನಡೆಸಿದ್ದಾರೆ. ಎಸ್‌ಪಿ ಎಂದು ತಿಳಿಯದ ಮಂಗಳ ಮುಖಿಯರು ಎಸ್‌ಪಿ ಜತೆಗೆ ವಾಗ್ವಾದಕ್ಕಿಳಿದು, ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿರುವ ಘಟನೆ ನಡೆದಿದೆ.

ಅನೈತಿಕ ಕಾರ್ಯಾಚರಣೆ ವೇಳೆ ಕೆಲಕಾಲ ಬಿಗುವಿನ ವಾತಾವರಣವು ನಿರ್ಮಾಣವಾಗಿತ್ತು. ಗ್ರಾಹಕರನ್ನು ರಿಕ್ಷಾದಲ್ಲಿ ಕರೆ ತಂದು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇಬ್ಬರು ದಲ್ಲಾಳಿಗಳು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ವತಃ ಎಸ್‌ಪಿ ಅಕ್ಷಯ್ ಹಾಕೇ ಮಚ್ಚಿಂದ್ರ ಫೀಲ್ಡಿಗಿಳಿದಿದ್ದರು.

ವಾಹನ ಅಡ್ಡಗಟ್ಟಿ ತೊಂದರೆ
ನಗರದಲ್ಲಿ ಕೆಲವು ಮಂಗಳಮುಖಿಯರು ವಾಹನ ಸವಾರರನ್ನು ಅಡ್ಡ ಹಾಕಿ ತೊಂದರೆ ಕೊಡುವುದು. ಜತೆಗೆ ದಾರಿದೀಪವನ್ನು ಒಡೆದು ಹಾಕಿ, ಕತ್ತಲಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಾರೆ ಎನ್ನುವ ದೂರು ಬಂದಿತ್ತು. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ | Crime news | ಮೈಸೂರು ರಾಜವಂಶಸ್ಥನ ಸೋಗಿನಲ್ಲಿ ಸಾಫ್ಟ್‌ವೇರ್ ಕಂಪನಿ ಮಾಲೀಕನಿಗೆ 2 ಕೋಟಿ ರೂ. ವಂಚನೆ, ಹಲ್ಲೆ

Exit mobile version