Site icon Vistara News

Anita Bhat: ಟಾಯ್ಲೆಟ್‌ನಲ್ಲಿ ಚಿತ್ರೀಕರಣ ಆದಂತೆ ನನಗೂ ಹೀಗೆ ಆಗಿತ್ತು, ʻಲವ್ ಜಿಹಾದ್ʼ ರೀತಿ ಎಂದ ನಟಿ ಅನಿತಾ ಭಟ್!

Anita Bhat In saree

ಬೆಂಗಳೂರು: ಉಡುಪಿಯ ಖಾಸಗಿ ಕಾಲೇಜ್‌ವೊಂದರ ಲೇಡಿಸ್ ಟಾಯ್ಲೆಟ್‌ನಲ್ಲಿ ವಿದ್ಯಾರ್ಥಿನಿಯರೇ ವಿಡಿಯೊ ಚಿತ್ರೀಕರಣ ಮಾಡಿದ ಪ್ರಕರಣ ಭಾರೀ ಚರ್ಚೆ ಹುಟ್ಟಾಕ್ಕಿದೆ . ಇದಾಗಿದ್ದು ಉಡುಪಿಯ ನೇತ್ರ ಜ್ಯೋತಿ ಎಂಬ ಕಾಲೇಜಿನಲ್ಲಿ . ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ಮಾಡುವ ದಂಧೆಯೊಂದು ನಡೆದಿತ್ತು. ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನು ಅಮಾನತು ಮಾಡಲಾಗಿತ್ತು. ಇದೇ ವಿಚಾರವಾಗಿ ನಟಿ ಅನಿತಾ ಭಟ್ (Anita Bhat) ಟ್ವೀಟ್ ಮಾಡಿದ್ದಾರೆ. ಆ ಸಂತ್ರಸ್ತ ವಿದ್ಯಾರ್ಥಿನಿಗೆ ಅವಮಾನವಾದಂತೆ ಹೈಸ್ಕೂಲಿನಲ್ಲಿ ಇದ್ದಾಗ ತಮಗೂ ಅನುಮಾನವಾಗಿತ್ತು ಎಂದಿದ್ದಾರೆ.

2008ರಲ್ಲಿ ‘ಸೈಕೊ’ ಸಿನಿಮಾ ಮೂಲಕ ನಟಿ ಅನಿತಾ ಭಟ್ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಬಳಿಕ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಉಡುಪಿ ಕಾಲೇಜಿನಲ್ಲಿ ನಡೆದಿರುವ ಘಟನೆ ಬಗ್ಗೆ ನೆಟ್ಟಿಗರೊಬ್ಬರ ಟ್ವೀಟ್‌ನ ರಿಟ್ವೀಟ್ ಮಾಡಿ ಅನಿತಾ ಭಟ್ಕಮೆಂಟ್ ಮಾಡಿದ್ದಾರೆ. “ನಾನು ಕೂಡ ಹೈಸ್ಕೂಲಿನಲ್ಲಿದ್ದಾಗ ಇಂತಹ ಅವಮಾನ ಎದುರಿಸಿದ್ದೆ. ಇದೇ ರೀತಿಯದ್ದು ಅಲ್ಲ. ಆದರೆ ‘ಕೇರಳ ಸ್ಟೋರಿ’ ಸಿನಿಮಾದಲ್ಲಿ ತೋರಿಸಿದಂತೆ ಅದು ʻಲವ್ ಜಿಹಾದ್ʼ ರೀತಿಯದ್ದಾಗಿತ್ತು. ನಾನು ಖಂಡಿತವಾಗಿಯೂ ಆ ಕಥೆಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Harrassment case : ಕಾಲೇಜಿನ ಲೇಡಿಸ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರು!

ಏನಿದು ದುಷ್ಟ ಜಾಲ?

ಉಡುಪಿಯಲ್ಲಿ ನೇತ್ರ ಜ್ಯೋತಿ ಎಂಬ ಕಾಲೇಜಿದೆ. ಈ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ಮಾಡುವ ದಂಧೆಯೊಂದು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.

ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ಶೂಟ್ ಮಾಡುತ್ತಿದ್ದ ಈ ವಿದ್ಯಾರ್ಥಿನಿಯರು ಶೂಟ್ ಮಾಡಿದ್ದ ವಿಡಿಯೊವನ್ನು ತಮ್ಮ ಕೋಮಿನ ಯುವಕನಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ. ಆ ಯುವಕ ವಿದ್ಯಾರ್ಥಿನಿಯರ ವಿಡಿಯೊವನ್ನು ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದ ಎನ್ನಲಾಗಿದೆ.

ಒಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವುದನ್ನು ಗಮನಿಸಿದ ಕೆಲವು ವಿದ್ಯಾರ್ಥಿನಿಯರು ಜತೆಗೂಡಿ ಸಂಶಯದಿಂದ ಕೆಲವರನ್ನು ವಾಚ್‌ ಮಾಡಲು ಆರಂಭಿಸಿದರು. ಆಗ ಮೂವರು ವಿದ್ಯಾರ್ಥಿನಿಯರು ಸಂಶಯಾಸ್ಪದವಾಗಿ ವರ್ತಿಸುತ್ತಿರುವುದು ಕಂಡಿತು. ಅವರು ಆಗಾಗ ಶೌಚಾಲಯಕ್ಕೆ ಹೋಗುತ್ತಿರುವುದು, ಯಾರಾದರೂ ಒಬ್ಬರು ಒಳಗೆ ಹೋಗಿ ಬಂದ ಕೂಡಲೇ ತಾವು ನುಗ್ಗುವುದನ್ನು ಗಮನಿಸಿ ಅವರನ್ನು ವಿಚಾರಿಸಲಾಗಿತ್ತು.

ಕೆಲವು ವಿದ್ಯಾರ್ಥಿನಿಯರು ಸೇರಿ ವಿಡಿಯೊ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರ ಜತೆ ಕಾಲೇಜಿನಲ್ಲಿ ವಾಗ್ವಾದ ಮಾಡಿದ್ದರು. ಈ ವಿಷಯ ಆಡಳಿತ ಮಂಡಳಿಯ ಗಮನಕ್ಕೆ ಬಂದ ಬಳಿಕ ವಿಚಾರಣೆ ನಡೆಸಲಾಯಿತು. ವಿಡಿಯೊ ಶೂಟ್‌ ಮಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಈಗ ಕಾಲೇಜಿನಿಂದ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: Love Jihad : ಸ್ನೇಹವನ್ನೇ ಬಳಸಿಕೊಂಡು ಸ್ನೇಹಿತನ ಹೆಂಡ್ತಿಯನ್ನೇ ಪಟಾಯಿಸಿದ ಸಲ್ಮಾನ್; ಲವ್‌ ಜಿಹಾದ್‌?

ಹಿಂದೂ ಸಂಘಟನೆಗಳ ಪ್ರವೇಶ

ಹಿಂದು ಹೆಣ್ಣುಮಕ್ಕಳ ವಿಡಿಯೊವನ್ನು ಈ ರೀತಿ ಚಿತ್ರೀಕರಿಸಿ ವೈರಲ್‌ ಮಾಡಿದ್ದರ ವಿರುದ್ಧ ಈಗ ಹಿಂದು ಸಂಘಟನೆಗಳು ಸಿಡಿದೆದ್ದಿವೆ. ಈ ವಿಚಾರ ಬೆಳಕಿ ಬಂದ ತಕ್ಷಣ ಕಾಲೇಜಿಗೆ ತೆರಳಿದ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿವೆ.

ಇದುವರೆಗೆ ಮುಸ್ಲಿಂ ಯುವಕರು ಹಿಂದು ಹೆಣ್ಮಕ್ಕಳನ್ನು ಕಾಡುತ್ತಿದ್ದರೆ, ಈಗ ಮುಸ್ಲಿಂ ಹೆಣ್ಮಕ್ಕಳು ಕೂಡಾ ಅವರಿಗೆ ಸಹಕಾರ ನೀಡುತ್ತಿರುವುದು ಭಾರಿ ಆತಂಕಕಾರಿ. ಹೀಗಾಗಿ ಬುಡಮಟ್ಟದಿಂದಲೇ ಈ ಕೃತ್ಯಗಳನ್ನು ನಿಲ್ಲಿಸಬೇಕು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾಲೇಜು ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಇದುವರೆಗೂ ಪೊಲೀಸರಿಗೆ ದೂರು ನೀಡಿಲ್ಲ. ಆದರೆ, ಪೊಲೀಸರೇ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

Exit mobile version