Love Jihad : ಸ್ನೇಹವನ್ನೇ ಬಳಸಿಕೊಂಡು ಸ್ನೇಹಿತನ ಹೆಂಡ್ತಿಯನ್ನೇ ಪಟಾಯಿಸಿದ ಸಲ್ಮಾನ್; ಲವ್‌ ಜಿಹಾದ್‌? - Vistara News

ಕರ್ನಾಟಕ

Love Jihad : ಸ್ನೇಹವನ್ನೇ ಬಳಸಿಕೊಂಡು ಸ್ನೇಹಿತನ ಹೆಂಡ್ತಿಯನ್ನೇ ಪಟಾಯಿಸಿದ ಸಲ್ಮಾನ್; ಲವ್‌ ಜಿಹಾದ್‌?

Love Jihad : ಅವರಿಬ್ಬರು ಪ್ರೀತಿಸಿ ಮದುವೆಯಾದವರು. ಮದುವೆ ಬಳಿಕ ಹುಟ್ಟಿಕೊಂಡ ಅಸಮಾಧಾನಕ್ಕೆ ಸಂಧಾನ ಮಾಡಲು ಅವನು ಬಂದಿದ್ದ. ಈಗ ಅವಳು ಅವನ ಬೆನ್ನು ಬಿದ್ದಿದ್ದಾಳೆ. ಅವರಿಬ್ಬರ ನಡುವೆ ಅಕ್ರಮ ಸಂಬಂಧವೂ ಹುಟ್ಟಿಕೊಂಡಿದೆ. ಜತೆಗೆ ಲವ್‌ ಜಿಹಾದ್‌ ಎಂಬ ಆರೋಪ.

VISTARANEWS.COM


on

Love jihad case
ಅಜಿತ್‌ ಮತ್ತು ಸಲ್ಮಾನ್‌ ನಡುವೆ ಅಜಿತ್‌ ಪತ್ನಿ (ಮುಖ ಬ್ಲರ್‌ ಮಾಡಲಾಗಿದೆ)
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಎಂದು ಕುಟುಂಬದೊಳಗೆ ಪ್ರವೇಶ ಮಾಡಿದ ವ್ಯಕ್ತಿಯೊಬ್ಬ ತನ್ನ ಗೆಳೆಯನ ಹೆಂಡತಿಯನ್ನೇ ಹಾರಿಸಿಕೊಂಡು ಹೋಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಲ್ಮಾನ್‌ ಎಂಬಾತನ ಮೇಲೆ ಈಗ ಈ ಗಂಭೀರ ಆರೋಪ ಬಂದಿದ್ದು, ಇದೊಂದು ಲವ್‌ ಜಿಹಾದ್‌ (Love jihad) ಪ್ರಕರಣವೆಂಬ ಚರ್ಚೆಯೂ ಜೋರಾಗಿದೆ.

ಅಜಿತ್‌ ಎಂಬ ಯುವಕನಿಗೆ ಮೂರು ವರ್ಷದ ಹಿಂದೆ ಮದುವೆಯಾಗಿದೆ. ಅಜಿತ್‌ಗೆ ಬಾಲ್ಯದಿಂದಲೂ ಗೆಳೆಯನಾಗಿದ್ದವನು ಸಲ್ಮಾನ್‌. ಇದೀಗ ಅಜಿತ್‌ನ ಹೆಂಡತಿ ಸಲ್ಮಾನ್‌ನ ಮಾತು ಕೇಳಿ ಆತನ ಹಿಂದೆ ಹೋಗಿದ್ದಾಳೆ. ಸಲ್ಮಾನ್‌ ಬ್ರೇನ್‌ ವಾಷ್‌ ಮಾಡಿ ಆಕೆಯನ್ನು ಒಲಿಸಿಕೊಂಡಿದ್ದಾನೆ ಎನ್ನುವುದು ಅಜಿತ್‌ ಮಾಡುತ್ತಿರುವ ಆರೋಪ. ಆದರೆ, ಆತನ ಪತ್ನಿ ಮತ್ತು ಸಲ್ಮಾನ್‌ ಇಬ್ಬರೂ ʻʻಇದೆಲ್ಲವೂ ಸುಳ್ಳು, ಅಜಿತ್‌ನ ಹಿಂದೆ ತಡೆಯಲಾರದೆ ಪತ್ನಿ ದೂರವಾಗಿದ್ದನ್ನೇ ಮುಂದಿಟ್ಟು ತನ್ನ ಮೇಲೆ ಆರೋಪ ಮಾಡಲಾಗುತ್ತಿದೆʼʼ ಎನ್ನುತ್ತಿದ್ದಾರೆ. ಆದರೆ, ಸಲ್ಮಾನ್‌ನ ಎದೆಯಲ್ಲಿ ಅಜಿತ್‌ನ ಹೆಂಡತಿಯ ಹಚ್ಚೆ ಇರುವುದು ನಿಜ. ಅವರಿಬ್ಬರು ಬೆಡ್‌ ಮೇಲೆ ಇರುವ ಸೆಲ್ಫಿ ಬೇರೆಯೇ ಕಥೆ ಹೇಳುತ್ತಿದೆ. ಹೀಗಾಗಿ ಪ್ರಕರಣ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತಿದೆ.

ಅವನ ಎದೆಯಲ್ಲಿ ಅವಳ ಹೆಸರ ಹಚ್ಚೆ; ಏನಿದು ಲವ್‌ ಜಿಹಾದ್‌ ಆರೋಪ?

ಬೆಂಗಳೂರಿನ ಹೊಸಗುಡ್ಡದಹಳ್ಳಿ ನಿವಾಸಿ ಅಜಿತ್ ಹಾಗೂ ಕೆಂಗೇರಿ ಉಪನಗರ ಯುವತಿ ನಡುವೆ ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ಅವರಿಬ್ಬರು ಅಜಿತ್‌ ಮತ್ತು ಯುವತಿ ಶಾಲೆಯಲ್ಲಿ ಕಲಿಯುತ್ತಿದ್ದ ಕಾಲದಿಂದಲೇ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಹುಡುಗಿ ಮನೆಯವರಿಂದ ವಿರೋಧ ಎದುರಾಗಿತ್ತು. ಕೊನೆಗೆ ಮನೆಯವರ ವಿರೋಧವನ್ನು ಲೆಕ್ಕಿಸದೆ 2020ರ ಆಗಸ್ಟ್‌ನಲ್ಲಿ ಮದುವೆ ಮಾಡಿಕೊಂಡಿದ್ದರು. ಶ್ರೀರಾಮಪುರ ಸಬ್ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮದುವೆ ನೋಂದಣಿ ಆಗಿತ್ತು.

ಇದೆಲ್ಲ ಆಗಿ ಮೂರು ವರ್ಷ ಆಗಿದೆ. ಇದರ ನಡುವೆ ಇವರ ನಡುವೆ ಮೂರನೇ ವ್ಯಕ್ತಿಯ ಪ್ರವೇಶವಾಗಿದೆ. ಆ ವ್ಯಕ್ತಿಯೇ ಸಲ್ಮಾನ್‌.

ಸಲ್ಮಾನ್‌ ದೂರದವನೇನೂ ಅಲ್ಲ. ಅಜಿತ್‌ ಮತ್ತು ಸಲ್ಮಾನ್‌ ಸಣ್ಣ ವಯಸ್ಸಿನಿಂದಲೂ ಪರಿಚಿತರೇ. ಮತ್ತು ಜತೆಯಾಗಿ ಕೆಲಸ ಮಾಡುತ್ತಿದ್ದರು. ಅಜಿತ್‌ ತನ್ನ ಪತ್ನಿಗೆ ಸಲ್ಮಾನ್‌ನನ್ನು ಪರಿಚಯಿಸಿದ ಬಳಿಕವೇ ಈ ಕುಟುಂಬದಲ್ಲಿ ಅಲ್ಲೋಲಕಲ್ಲೋಲ ಶುರುವಾಗಿದೆ ಎನ್ನುವುದು ಗಂಡ ಅಜಿತ್‌ನ ಆರೋಪ. ಆದರೆ, ನನಗೆ ಸಲ್ಮಾನ್‌ನನ್ನು ಪರಿಚಯ ಮಾಡಿಸಿದ್ದೇ ಅಜಿತ್‌ ಎನ್ನುವುದು ಪತ್ನಿಯ ಹೇಳಿಕೆ.

ಅಜಿತ್‌ ಮತ್ತು ಸಲ್ಮಾನ್‌ ಜತೆಯಾಗಿ ಒಂದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಂತ, ಆರಂಭದಲ್ಲಿ ಸಲ್ಮಾನ್‌ಗೆ ಅಜಿತ್‌ನ ಪತ್ನಿಯ ಪರಿಚಯವಿರಲಿಲ್ಲ. ಒಂದು ಸಾರಿ ಅಜಿತ್‌ ಮತ್ತು ಸಲ್ಮಾನ್‌ ಕೆಲಸದ ನಿಮಿತ್ತ ತಮಿಳುನಾಡಿಗೆ ಹೋಗಿದ್ದ. ಅಜಿತ್‌ ಕುಮಾರ್‌ ಬಳಿ ಮೊಬೈಲ್‌ ಫೋನ್‌ ಇಲ್ಲದ ಕಾರಣ ಅವನು ಸಲ್ಮಾನ್‌ನ ಫೋನ್‌ ಮೂಲಕ ಪತ್ನಿಯನ್ನು ಸಂಪರ್ಕಿಸುತ್ತಿದ್ದ. ಜತೆಗೆ ತನಗೆ ಏನಾದರೂ ಹೇಳಬೇಕಾಗಿದ್ದರೆ ಸಲ್ಮಾನ್‌ಗೆ ಫೋನ್‌ ಮಾಡಿ ಹೇಳು ಎಂದು ಹೇಳಿದ್ದ. ಹಾಗೆ ಅವರಿಬ್ಬರ ನಡುವೆ ಫೋನ್‌ ಸಂಪರ್ಕ ಹುಟ್ಟಿಕೊಂಡಿತ್ತು. ಹಾಗಂತ ಸಲ್ಮಾನ್‌ ಏಕಾಏಕಿಯಾಗಿ ಮೇಲೆ ಬಿದ್ದು ಸಂಪರ್ಕ ಮಾಡುತ್ತಿರಲಿಲ್ಲ ಎಂದು ಅಜಿತ್‌ ಕೂಡಾ ಹೇಳುತ್ತಾನೆ.

ಅಜಿತ್‌ ಮನೆಗೆ ಬರಲು ಶುರು ಮಾಡಿದ್ದ ಸಲ್ಮಾನ್‌

ಒಮ್ಮೆ ಫೋನ್‌ ಮೂಲಕ ಸಂಪರ್ಕಕ್ಕೆ ಸಿಕ್ಕಿ ಅಜಿತ್‌ನ ಹೆಂಡತಿಯ ಜತೆ ಆರಾಮವಾಗಿ ಮಾತನಾಡುವಷ್ಟು ಸಲುಗೆ ಬೆಳೆಯಿತೋ ಬಳಿಕ ಊರಿಗೆ ಬಂದ ಆತ ಅಜಿತ್‌ನ ಮನೆಗೆ ಬರಲು ತೊಡಗಿದ್ದ. ಅವನು ಬರುತ್ತಿದ್ದ ಅನ್ನುವುದಕ್ಕಿಂತಲೂ ಅಜಿತನೇ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ. ಯಾಕೆಂದರೆ, ಗಂಡ-ಹೆಂಡತಿಯರ ನಡುವೆ ಆಗಾಗ ಹುಟ್ಟಿಕೊಳ್ಳುತ್ತಿದ್ದ ಜಗಳಗಳಿಗೆ ಸಲ್ಮಾನ್‌ನೇ ಸಂಧಾನಕಾರನಾಗುತ್ತಿದ್ದ!

ಅಜಿತ್‌ನ ಪತ್ನಿಯನ್ನು ತಂಗಿ ತಂಗಿ ಎಂದೇ ಕರೆಯುತ್ತಿದ್ದ ಸಲ್ಮಾನ್‌. ಅವರಿಬ್ಬರ ನಡುವೆ ಜಗಳವಾದಾಗ ಅಜಿತನ ಪತ್ನಿ ಮೊದಲು ಸಲ್ಮಾನ್‌ಗೆ ದೂರು ಹೇಳುತ್ತಿದ್ದಳು. ಅವನು ಅಜಿತ್‌ನಿಗೆ ಬುದ್ಧಿ ಹೇಳುತ್ತಿದ್ದ. ಅಲ್ಲಲ್ಲಿಗೆ ಸಮಸ್ಯೆ ಪರಿಹಾರವಾಗುತ್ತಿತ್ತು.

ಈ ನಡುವೆ ಏಪ್ರಿಲ್‌ನಲ್ಲಿ ಅಜಿತ್‌ನ ಹೆಂಡತಿ ಜಗಳ ಮಾಡಿಕೊಂಡು ತವರಿಗೆ ಹೋಗಿದ್ದಳು. ಅಜಿತ್‌ ಹಲವು ಬಾರಿ ಹೋಗಿ ಕರೆದರೂ ಬಂದಿರಲಿಲ್ಲ. ಆಗ ಅಜಿತ್‌ ಮನೆಯ ಬಳಿ ಹೋಗಿ ಆಕೆಗೆ ಹಲ್ಲೆ ಮಾಡಿದ್ದ. ಆ ಸಂದರ್ಭದಲ್ಲೇ ಅವನ ಮೊಬೈಲ್‌ಗೆ ಒಂದು ಫೋಟೋ ಬಂದಿತ್ತು. ಅದರಲ್ಲಿ ಇದ್ದದ್ದು ಸಲ್ಮಾನ್‌ ಮತ್ತು ಅಜಿತ್‌ ಕುಮಾರನ ಪತ್ನಿ!

ಸಲ್ಮಾನ್‌ ಮತ್ತು ಅಜಿತ್‌ನ ಪತ್ನಿ ಅರೆಬೆತ್ತಲಾಗಿ ಬೆಡ್‌ ಮೇಲೆ ಇರುವ ಆ ಚಿತ್ರವನ್ನು ಯಾರೋ ಅಜಿತ್‌ನಿಗೆ ಕಳುಹಿಸಿದ್ದರು. ಆಗ ಅಜಿತ್‌ನಿಗೆ ತನ್ನ ಹೆಂಡತಿ ಯಾಕೆ ಇಷ್ಟೆಲ್ಲ ಜಗಳ ಮಾಡುತ್ತಿದ್ದಾಳೆ, ಮನೆ ಬಿಟ್ಟು ಹೋಗಿದ್ದೇಕೆ ಎನ್ನುವ ವಿಚಾರದಲ್ಲಿ ಅನುಮಾನಗಳು ಮೂಡಿದವು.

ಅಂದ ಹಾಗೆ ಈ ಫೋಟೊಗಳನ್ನು ಸಲ್ಮಾನ್‌ ತನ್ನ ಹಲವು ಗೆಳೆಯರಿಗೆ ತೋರಿಸಿದ್ದ ಎನ್ನಲಾಗುತ್ತಿದೆ. ತಾನು ಮತ್ತು ಅಜಿತನ ಹೆಂಡತಿ ಹೇಗಿದ್ದೇವೆ ನೋಡಿ ಎಂದು ಗೆಳೆಯರ ಮುಂದೆ ಜಂಭ ಕೊಚ್ಚಿಕೊಳ್ಳುತ್ತಿದ್ದ. ಅವಳಿಗಾಗಿ ನಾನು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ. ಹಾಗೆ ಯಾರಿಗೋ ಕಳುಹಿಸಿದ ಒಂದು ಫೋಟೊ ಅಜಿತನಿಗೆ ಸಿಕ್ಕಿತ್ತು.

ಈ ಫೋಟೊವನ್ನು ಮುಂದಿಟ್ಟು ಪತ್ನಿಯನ್ನು ಪ್ರಶ್ನಿಸಿದಾಗ ಅಜಿತ್‌ನ ಪತ್ನಿ ʻʻನನಗೆ ನಿನ್ನ ಜತೆ ಬದುಕಲು ಮನಸಿಲ್ಲ. ನನಗೆ ಡೈವೋರ್ಸ್‌ ಬೇಕುʼ ಎಂದು ಬೇಡಿಕೆ ಮಂಡಿಸಿದ್ದಳು. ಅದರ ಜತೆಗೆ ಕಳೆದ ಮೂರು ವರ್ಷಗಳಿಂದ ಅಜಿತ್‌ ನನಗೆ ಸಿಕ್ಕಾಪಟ್ಟೆ ಹಿಂಸೆ ಕೊಡುತ್ತಿದ್ದಾನೆ. ಅವನಿಂದ ಮುಕ್ತಿ ಬೇಕು ಎಂದು ಹೇಳುತ್ತಿದ್ದಾಳೆ. ಜತೆಗೆ ನನಗೆ ಸಲ್ಮಾನ್‌ನೇ ಬೇಕು ಎನ್ನುತ್ತಿದ್ದಾಳೆ ಅಂತಾನೆ ಅಜಿತ್‌!

ಸಲ್ಮಾನ್‌ ಬ್ರೇನ್‌ ವಾಷ್‌ ಮಾಡುತ್ತಾನೆ, ಲವ್‌ ಜಿದಾಹ್‌ ಇದು

ಸಲ್ಮಾನ್‌ ಪ್ರವೇಶ ಆಗುವವರೆಗೆ ನಮ್ಮ ಸಂಸಾರ ಈ ತರ ಇರಲಿಲ್ಲ. ಸಣ್ಣಪುಟ್ಟ ಜಗಳಗಳು ಇದ್ದರೂ ಈ ಮಟ್ಟಕ್ಕೆ ಹೋಗಿರಲಿಲ್ಲ. ನನ್ನ ಹೆಂಡತಿಯನ್ನು ತಂಗಿ ತಂಗಿ ಎಂದು ಹೇಳಿಕೊಂಡು ಆತ್ಮೀಯತೆ ಬೆಳೆಸಿಕೊಂಡ ಸಲ್ಮಾನ್‌ ಈಗ ಆಕೆಯ ಬ್ರೇನ್‌ ವಾಷ್‌ ಮಾಡಿ ನನ್ನಿಂದ ದೂರ ಮಾಡಿದ್ದಾನೆ. ಆಕೆಯನ್ನು ಕೇಳಿದರೆ ನನಗೆ ನೀನು ಬೇಡವೇ ಬೇಡ, ಸಲ್ಮಾನ್‌ ಜತೆಗೇ ಇರುತ್ತೇನೆ ಎನ್ನುತ್ತಿದ್ದಾಳೆ. ಹೀಗಾಗಿ ಇದೊಂದು ಲವ್‌ ಜಿಹಾದ್‌ ಎಂದು ಅಜಿತ್‌ ಆರೋಪಿಸುತ್ತಿದ್ದಾನೆ. ನನ್ನ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಂಡು ಆಕೆಯ ಜತೆ ಅಕ್ರಮ ಸಂಪರ್ಕವನ್ನು ಹೊಂದಿ, ಅದರ ಚಿತ್ರಗಳನ್ನು ವೈರಲ್‌ ಮಾಡುತ್ತಿರುವುದರ ಹಿಂದೆ ಲವ್‌ ಜಿಹಾದ್‌ ಸಂಚಿದೆ ಎನ್ನುವುದು ಅಜಿತ್‌ ಆರೋಪ.

ಯಾವ ಆರೋಪಗಳನ್ನೂ ನಿರಾಕರಿಸುತ್ತಿಲ್ಲ ಅಜಿತ್‌ ಪತ್ನಿ

ನಿಜವೆಂದರೆ ಅಜಿತ್‌ ಮಾಡುವ ಯಾವ ಆರೋಪಗಳನ್ನೂ ಅಜಿತ್‌ ಪತ್ನಿ ನಿರಾಕರಿಸುತ್ತಿಲ್ಲ. ಸಲ್ಮಾನ್‌ನನ್ನು ನನಗೆ ಪರಿಚಯ ಮಾಡಿಸಿದ್ದೇ ಅಜಿತ್‌. ಇವನ ಕಿರಿಕಿರಿಗಳನ್ನು ಅವನ ಬಳಿ ಹೇಳುತ್ತಿದ್ದೆ. ಅವನು ಇವನಿಗೆ ಬುದ್ಧಿ ಹೇಳುತ್ತಿದ್ದ. ನನಗೆ ಸಮಾಧಾನ ಹೇಳುತ್ತಿದ್ದ ಎನ್ನುತ್ತಾಳೆ. ಜತೆಗೆ ತಾವಿಬ್ಬರೂ ಮಂಚದ ಮೇಲೆ ಅರೆಬೆತ್ತಲೆಯಾಗಿದ್ದ ಸೆಲ್ಫಿ ತಾವು ಮಾಡಿದ ತಪ್ಪು ಎಂದು ನೇರವಾಗಿಯೇ ಒಪ್ಪಿಕೊಳ್ಳುತ್ತಾಳೆ. ಈ ನಡುವೆ ಸಲ್ಮಾನ್‌ ತನ್ನ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದನ್ನೂ ಆಕೆ ಸಮರ್ಥಿಸುತ್ತಾಳೆ.

ಇದನ್ನೂ ಓದಿ: Love Failure : ಪಾಗಲ್ ಪ್ರೇಮಿಯ ಹುಚ್ಚಾಟ; ಊರಿಗೆ ಹಬ್ಬಿದ ದ್ವೇಷದ ಜ್ವಾಲೆ

ಸಲ್ಮಾನ್‌ ಹೇಳುವುದೇನು?

ಈ ಘಟನಾವಳಿಗಳ ವಿಚಾರದಲ್ಲಿ ಸಲ್ಮಾನ್‌ ಖಾನ್‌ ಕೂಡಾ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದಾನೆ. ಅವನು ಕೂಡಾ ಎಲ್ಲ ವಿಚಾರಗಳನ್ನು ಒಪ್ಪಿಕೊಳ್ಳುತ್ತಾನೆ. ಅಜಿತ್‌ ಮತ್ತು ಪತ್ನಿಯ ನಡುವಿನ ಜಗಳ, ಅದಕ್ಕೆ ಸಂಧಾನಕಾರನಾಗಿದ್ದು, ಆ ಅಶ್ಲೀಲ ಫೋಟೊ ವಿಚಾರವನ್ನು ಒಪ್ಪಿಕೊಳ್ಳುತ್ತಾನೆ. ಆದರೆ, ಅಜಿತ್‌ನ ಪತ್ನಿಯನ್ನು ಹಾರಿಸಿಕೊಂಡು ಹೋಗುವ ವಿಚಾರ ಯಾವುದೂ ಇಲ್ಲ. ಇದು ಲವ್‌ ಜಿಹಾದ್‌ ಏನೂ ಅಲ್ಲ ಎನ್ನುತ್ತಾನೆ.

ಅಜಿತ್‌ನ ಪತ್ನಿ ಮಾತ್ರ ನನಗೆ ಈ ಅಜಿತ್‌ ಜತೆಗಿನ ಸಂಬಂಧವೇ ಬೇಡ ಎಂದು ಹೇಳುತ್ತಿದ್ದು ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

VISTARANEWS.COM


on

ಬೆಂಗಳೂರು ನಗರ ಸೇರಿದಂತೆ 18 ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ರಾಜ್ಯದ 18 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.

ಇಂದು (ಏಪ್ರಿಲ್ 30) ಹಾಗೂ ನಾಳೆ (ಮೇ 1) ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಧಾರವಾಡ, ಗದಗ, ಕೊಪ್ಪಳ, ಹಾವೇರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಚಾಮರಾಜನಗರ, ಮೈಸೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಭಾರಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ.

Continue Reading

Latest

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌.

VISTARANEWS.COM


on

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್‌ 27 ರಂದು ದರ್ಶನ್ ಪರ ವಕೀಲ ರಂಜಿತ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 4ಕ್ಕೆ ನಿಗದಿಪಡಿಸಿದೆ.

Continue Reading

ಕರ್ನಾಟಕ

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

VISTARANEWS.COM


on

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಶಾಲೆಗಳಲ್ಲಿ ಇನ್ನು ಮುಂದೆ ಅಶ್ಲೀಲ ಹಾಡು ಮತ್ತು ಅಸಭ್ಯ ನೃತ್ಯಗಳಿಗೆ ಅವಕಾಶ ನೀಡದಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ದ್ವಂದ್ವಾರ್ಥದ ಸಿನಿಮಾ ಹಾಡು ಹಾಗೂ ನೃತ್ಯಗಳನ್ನು ಪ್ರದರ್ಶಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಶಾಲಾ ಕಾರ್ಯಕ್ರಮಗಳಲ್ಲಿ ಕೇವಲ ಜಾನಪದ, ದೇಶಭಕ್ತಿ ಗೀತೆಗಳು, ಪರಿಸರ ಕಾಳಜಿಯ ಹಾಡುಗಳು ಮತ್ತು ಸಮಾಜಮುಖಿ ಚಿಂತನೆಯುಳ್ಳ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಬೇಕು. ನೃತ್ಯದ ಸಮಯದಲ್ಲಿ ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಕೂಡ ಸಭ್ಯವಾಗಿರಬೇಕು ಹಾಗೂ ಅರೆಬರೆ ವಸ್ತ್ರಗಳನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನರಂಜನೆಯ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಅಥವಾ ಮಕ್ಕಳ ನೈತಿಕ ಹಾಗೂ ಮಾನಸಿಕ ಆರೋಗ್ಯ ಕೆಡಿಸುವ ಯಾವುದೇ ಹಾಡುಗಳನ್ನು ಬಳಸದಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಜಾರಿಗೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗೆ ವಹಿಸಲಾಗಿದೆ.

Continue Reading

bigbreaking

20 ಸಾವಿರ ಕೋಟಿ ಹಗರಣದ ಮೂಲ ದಾಖಲೆಗಳೇ ನಾಪತ್ತೆ. ಎನ್‌.ಆರ್‌.ರಮೇಶ್‌ ಗಂಭೀರ ಆರೋಪ.

VISTARANEWS.COM


on

ಬೆಂಗಳೂರು: ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯವನ್ನು ಬೆಚ್ಚಿಬೀಳಿಸುವಂತಹ ಗಂಭೀರ ಆರೋಪವೊಂದು ಹೊರಬಂದಿದೆ. 2007-08ರಿಂದ ಇದುವರೆಗೆ ನಡೆದಿರುವ 20 ಸಾವಿರ ಕೋಟಿಗೂ ಹೆಚ್ಚು ಮೊತ್ತದ TDR ಹಗರಣಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳು ಈಗಿನ ಜಿಬಿಎ ಯ ಭೂಸ್ವಾಧೀನ ಮತ್ತು ಟಿಡಿಆರ್‌ ವಿಭಾಗದ ಕಚೇರಿಯಿಂದ ನಾಪತ್ತೆಯಾಗಿವೆ ಎನ್ನುವ ಆಘಾತಕಾರಿ ವಿಷಯವನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್ ಬಹಿರಂಗಪಡಿಸಿದ್ದಾರೆ.
ಇಂದು ಜಿಬಿಎ ಕೇಂದ್ರ ಕಚೇರಿ ಮುಂಭಾಗ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹಿರಿಯ ನಾಯಕ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಟಿಡಿಆರ್‌ ಹಗರಣದ ದಾಖಲೆಗಳ ನಾಪತ್ತೆ ಬಗ್ಗೆ ಮಹತ್ವದ ಮಾಹಿತಿಗಳನ್ನು ತಿಳಿಸಿದರು. ರಸ್ತೆ ಅಭಿವೃದ್ಧಿ ಮತ್ತು ವಿವಿಧ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಭೂ ಮಾಲೀಕರಿಂದ ನಿಯಮಾನುಸಾರ ಸ್ವಾಧೀನಪಡಿಸಿಕೊಂಡು, ಅದಕ್ಕೆ ಬದಲಾಗಿ ನಿಗದಿತ ಮೊತ್ತದ ಪರಿಹಾರ ಧನ ಅಥವಾ TDR /DRC ನೀಡುವ ಕಾರ್ಯ 2007-08 ರಲ್ಲಿ ಚಾಲನೆಗೆ ಬಂದಿತ್ತು. ಇದಾದ ನಂತರ TDR ನಿಯಮಗಳಲ್ಲಿನ ಸಣ್ಣಪುಟ್ಟ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕರಾಳ ದಂಧೆ ಬೃಹತ್ ಪ್ರಮಾಣದಲ್ಲಿ ಬೆಳೆದು, ಬಿಬಿಎಂಪಿ ಮತ್ತು ಬಿಡಿಎ ನ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಸುಮಾರು 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಗರಣ ನಡೆದಿದೆ ಎಂದು ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.
ಟಿಡಿಆರ್‌ ಹಗರಣ ಪ್ರಕರಣದ ವಿಚಾರ ಈಗಾಗಲೇ ಜಾರಿ ನಿರ್ದೇಶನಾಲಯ (ED) ಮತ್ತು ಲೋಕಾಯುಕ್ತದಲ್ಲಿ ತನಿಖೆ ಹಾಗೂ ವಿಚಾರಣಾ ಹಂತದಲ್ಲಿದೆ. ಆದರೆ ಇದೀಗ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಕಾಣೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇದರಲ್ಲಿ ಜಿಬಿಎ ಅಧಿಕಾರಿಗಳು ಮತ್ತು ವಂಚಕರ ಪಾತ್ರ ಇದೆ ಎಂದು ಎನ್‌.ಆರ್‌.ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳೊಂದಿಗೆ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತದಲ್ಲಿ ದೂರುಗಳನ್ನು ದಾಖಲಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Continue Reading
Advertisement
Latest6 minutes ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

Latest13 minutes ago

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

Latest1 hour ago

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

Latest18 hours ago

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

Latest19 hours ago

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

Latest19 hours ago

ಜಪಾನ್‌ಗೆ ಲಗ್ಗೆ ಇಡಲು ಸಜ್ಜಾದ ʼಧುರಂಧರ್’

bigbreaking19 hours ago

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಾ ಮೇ ಕ್ಲೈಮ್ಯಾಕ್ಸ್‌?

Latest21 hours ago

ಡಾಲಿ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದಂಪತಿ!

Latest22 hours ago

ಶಿಸ್ತು ಮರೆತರಾ ರಿಯಾನ್ ಪರಾಗ್? ಕಾನೂನು ಸಂಕಷ್ಟಕ್ಕೆ ಸಿಲುಕುತ್ತಾರಾ ರಾಜಸ್ಥಾನ ರಾಯಲ್ಸ್ ಆಟಗಾರ?

Latest23 hours ago

ಮತಯಂತ್ರದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌? ಚುನಾವಣಾ ಅಕ್ರಮ ಆರೋಪಿಸಿ ಕೇಸರಿ ಪಡೆ ಆಕ್ರೋಶ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌