ಹಾವೇರಿ: ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರೈತ ಚನ್ನಬಸಪ್ಪ ವೀರಭದ್ರಪ್ಪ ತೊಂಡೂರ (38) ಮೃತ ರೈತ.
ಚನ್ನಬಸಪ್ಪ ಅವರು ಎರಡು ಎಕರೆ ಕೃಷಿ ಜಮೀನು ಹೊಂದಿದ್ದು, ಕಾರಡಗಿಯ ಕೆ.ವಿ. ಬ್ಯಾಂಕ್ ಹಾಗೂ ಗ್ರಾಮ ಶಕ್ತಿ ಖಾಸಗಿ ಬ್ಯಾಂಕ್‌ನಲ್ಲಿ ಒಟ್ಟು 6.50 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಸಕಾಲಕ್ಕೆ ಮಳೆ ಬೆಳೆ ಬಾರದ ಹಿನ್ನೆಲೆಯಲ್ಲಿ ಬೆಳೆ ಕೈಗೆ ಬಂದಿರಲಿಲ್ಲ. ಇದರಿಂದ ಮನನೊಂದು ಗುರುವಾರ ಸಂಬಂಧಿಕರ ಹೊಲದ ಬದುವಿನಲ್ಲಿದ್ದ ಜಾಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವಣೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವು
ಉಡುಪಿ: ಕಾಪು ತಾಲೂಕಿನ ಮಡಂಬು ಎಂಬಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.
ಮಡುಂಬು ಗೋಪಾಲ್ ಶೆಟ್ಟಿ ಪುತ್ರಿ ಶರ್ಮಿಳಾ (22) ಮೃತ ಯುವತಿ. ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಊರಿಗೆ ಬಂದಿದ್ದ ಶರ್ಮಿಳಾ ಮನೆ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದು ದುರಂತ ಸಂಭವಿಸಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಜಗಳ ಬಿಡಿಸಿ ಎಂದು ಕರೆದು ನಾಲ್ವರಿಗೆ ಬೆಂಕಿ ಇಟ್ಟ: ಇಬ್ಬರ ಸಾವು, ಮತ್ತಿಬ್ಬರು ಗಂಭೀರ