Site icon Vistara News

ರಾಮನಗರದಲ್ಲಿ ಭೀಕರ ಅಪಘಾತಕ್ಕೆ ಉಡುಪಿಯ ಮೂವರ ಸಾವು

ರಾಮನಗರ: ಹಲಗೂರು-ಕನಕಪುರ ಮುಖ್ಯರಸ್ತೆಯ ಸಾತನೂರಿನ ಕೆಮ್ಮಳ್ಳಿ ದೊಡ್ಡಿ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಇನ್ನೋವಾ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಉಡುಪಿಯ ತಾಯಿ-ಮಗ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶನಿವಾರ ಬೆಳಗ್ಗೆ 6.30ಕ್ಕೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಉಡುಪಿ ಮೂಲದ ಅಕ್ಷತಾ, ಅವರ ಆರು ತಿಂಗಳ ಮಗು ಸುಮಂತ್ ಹಾಗೂ ಕಾರು ಚಾಲಕ ಉಮೇಶ್ ಎಂದು ಗುರುತಿಸಲಾಗಿದೆ.

ಡಿಕ್ಕಿಯಾದ ರಭಸಕ್ಕೆ ಮಗು ಹಾಗೂ ತಾಯಿಯ ದೇಹ ನುಜ್ಜುಗುಜ್ಜಾಗಿ ರಸ್ತೆಯಲ್ಲಿ ಬಿದ್ದಿತ್ತು. ಚಾಲಕ ಕಾರಿನಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರ ಸಾವು

Exit mobile version