Site icon Vistara News

Physical Abuse : ರೈಲಿನಲ್ಲಿ ಯುವತಿ ಮೇಲೆ ಮಾನಭಂಗಕ್ಕೆ ಯತ್ನ! ಭಟ್ಕಳ ಮೂಲದ ಕಾಮುಕ ಅರೆಸ್ಟ್‌

Physical Abuse

ಉಡುಪಿ: ರೈಲಿನಲ್ಲಿ ಯುವತಿಯ ಮಾನಭಂಗ ಯತ್ನಿಸಿರುವ ಘಟನೆಯೊಂದು (Physical Abuse) ತಡವಾಗಿ ಬೆಳಕಿಗೆ ಬಂದಿದೆ. ಭಟ್ಕಳ ಮೂಲದ ಮೊಹಮ್ಮದ್ ಶುರೈಮ್ (22) ಬಂಧಿತ ಆರೋಪಿ ಆಗಿದ್ದಾನೆ. ಕಳೆದ ಭಾನುವಾರ ರೈಲಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಮೂಲತಃ ಉಡುಪಿ ತಾಲೂಕಿನ ಮಣಿಪಾಲದವರು. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಉಡುಪಿಗೆ ಹೊರಟಿದ್ದರು.

ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ಅಸಭ್ಯ ವರ್ತನೆ ತೋರುತ್ತಿದ್ದ. ಯುವತಿಯ ಖಾಸಗಿ ಅಂಗಗಳನ್ನು ಮುಟ್ಟಿ ಕಾಮಚೇಷ್ಠೆ ತೀರಿಸಿಕೊಳ್ಳುತ್ತಿದ್ದ. ಇನ್ನೇನು ಉಡುಪಿಗೆ ಅರ್ಧ ಗಂಟೆ ಇರುವಾಗ ಮಂಗಳೂರು ಹೊರವಲಯದ ಮುಲ್ಕಿ ಬಳಿ ಯುವತಿಯ ಮೇಲೆ ಎರಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಕೂಡಲೇ ಇದಕ್ಕೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗಾಬರಿಗೊಂಡ ಶುರೈಂ ಕ್ಷಮೆಯಾಚಿಸಿದ್ದಾನೆ.

Crimes Against Women

ಕೂಡಲೆ ಯುವತಿ ಆತನ ಫೋಟೊ ತೆಗೆದುಕೊಂಡಿದ್ದಾಳೆ. ಜತೆಗೆ ತಪ್ಪಿಸಿಕೊಂಡು ಹೋಗುತ್ತಿದ್ದವನನ್ನು ಸಹ ಪ್ರಯಾಣಿಕರು ಹಿಡಿದುಕೊಂಡಿದ್ದಾರೆ. ಕೂಡಲೇ ಘಟನೆ ಕುರಿತು ಯುವತಿ ಉಡುಪಿ ರೈಲ್ವೆ ಪೊಲೀಸ್‌ರಿಗೆ ಮಾಹಿತಿ ನೀಡಿದ್ದಾಳೆ. ರೈಲ್ವೆ ಮದದ್ ಆ್ಯಪ್ ಮೂಲಕವೂ ದೂರು ನೀಡಿದ್ದರು. ಯುವತಿ ಮಾಹಿತಿ ಆಧರಿಸಿ ಕೂಡಲೇ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ 24 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಭಟ್ಕಳದ ಮುಹಮ್ಮದ್ ಶುರೈಂ (22) ಬಂಧಿತ ಆರೋಪಿ. ಯುವತಿ ನೀಡಿದ್ದ ಫೋಟೋ ಆಧರಿಸಿ ತನಿಖೆಗೆ ಇಳಿದಿದ್ದ ಪೊಲೀಸರು, ರೈಲಿನಲ್ಲಿ ಪ್ರಯಾಣಿಸಿದ್ದ ಎಲ್ಲ ಪ್ರಯಾಣಿಕರ ವಿವರ ಪಡೆದಿದ್ದರು. ಬಳಿಕ ಅದರಿಂದ ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದರು. ಬೆಂಗಳೂರು-ಮುರ್ಡೇಶ್ವರ ನಡುವೆ ಸಂಚರಿಸುವ ಮುರ್ಡೇಶ್ವರ ಎಕ್ಸ್‌ಪ್ರೆಸ್‌ನಲ್ಲಿ ಶನಿವಾರ ಸಾವಿರಕ್ಕೂ ಹೆಚ್ಚು ಪ್ರಯಾಣಿಸಿದ್ದರು. 3 ಹಂತಗಳಲ್ಲಿ ಶಾರ್ಟ್ ಲಿಸ್ಟ್ ರೆಡಿ ಮಾಡಿ ಕಾರ್ಯಾಚರಣೆ ನಡೆಸಿದ್ದರು. ಭಟ್ಕಳದಲ್ಲಿ ಇಳಿದು ಹೋಗಿದ್ದನ್ನ ಪತ್ತೆ ಹಚ್ಚಿದ್ದ ಪೊಲೀಸರು, ಸಿಸಿಟಿವಿ ಫೂಟೇಜ್, ಪ್ರಯಾಣಿಕರ ವಿವರ ಆಧರಿಸಿ ಕಾರ್ಯಾಚರಣೆ ನಡೆಸಿ, ಆರೋಪಿ ಶುರೈಂನನ್ನು ಭಟ್ಕಳದ ನಿವಾಸದಿಂದಲೇ ಬಂಧಿಸಿದ್ದಾರೆ.

ಇದನ್ನೂ ಓದಿ: Attempt To murder : ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಯುವಕ!

ಮಹಿಳೆಯರ ವಿರುದ್ಧದ ಅಪರಾಧ ಆರೋಪ: ಪ.ಬಂಗಾಳದ ಶಾಸಕ, ಸಂಸದರೇ ಹೆಚ್ಚು!

ನವದೆಹಲಿ: ಮಹಿಳೆಯರ ವಿರುದ್ಧ ಅಪರಾಧ (Crimes Against Women) ಪ್ರಕರಣಗಳಲ್ಲಿ ಒಟ್ಟು 151 ಹಾಲಿ ಸಂಸದರು ಮತ್ತು ಶಾಸಕರು ಭಾಗಿಯಾಗಿರುವುದಾಗಿ ಘೋಷಿಸಿದ್ದಾರೆ. ರಾಜಕೀಯ ಪಕ್ಷದಲ್ಲಿ ಭಾರತೀಯ ಜನತಾ ಪಕ್ಷ (BJP) ಮತ್ತು ರಾಜ್ಯದ ಪೈಕಿ ಪಶ್ಚಿಮ ಬಂಗಾಳ (West Bengal) ಅತಿ ಹೆಚ್ಚು ಶಾಸಕರು, ಸಂಸದರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ವರದಿಯೊಂದು ತಿಳಿಸಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯೂ ಎಲೆಕ್ಷನ್ ವಾಚ್ (NEW) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯು ಹಾಲಿ ಸಂಸದರು ಮತ್ತು ಶಾಸಕರ 4,809 ಚುನಾವಣಾ ಅಫಿಡವಿಟ್‌ಗಳಲ್ಲಿ 4,693 ಅನ್ನು ವಿಶ್ಲೇಷಿಸಿದೆ. ಇದು ಕಳೆದ ಐದು ವರ್ಷಗಳಲ್ಲಿ ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಹಾಲಿ ಸಂಸದರ 776 ಅಫಿಡವಿಟ್‌ಗಳಲ್ಲಿ 755 ಮತ್ತು 4,033 ಹಾಲಿ ಶಾಸಕರ ಪೈಕಿ 3,938 ವಿಶ್ಲೇಷಣೆಯನ್ನು ಒಳಗೊಂಡಿದೆ.

ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿ ಘೋಷಿತ ಪ್ರಕರಣಗಳನ್ನು ಹೊಂದಿರುವ 151 ಹಾಲಿ ಸಂಸದರು ಮತ್ತು ಶಾಸಕರ ಪೈಕಿ 16 ಸಂಸದರು ಮತ್ತು 135 ಶಾಸಕರಿದ್ದಾರೆ ಎಂದು ವರದಿ ಹೇಳಿದೆ.

Crimes Against Women


ಪಕ್ಷಗಳ ಪೈಕಿ ಬಿಜೆಪಿಗೆ ಮೊದಲ ಸ್ಥಾನ

ಪಕ್ಷಗಳ ಪೈಕಿ ಬಿಜೆಪಿ ಅತಿ ಹೆಚ್ಚು ಸಂಸದರು ಮತ್ತು ಶಾಸಕರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ. ಮಹಿಳೆಯರ ವಿರುದ್ಧದ ಅಪರಾಧಗಳ ಘೋಷಿತ ಪ್ರಕರಣಗಳಲ್ಲಿ ಬಿಜೆಪಿಯ 54, ಕಾಂಗ್ರೆಸ್ ನ 23, ತೆಲುಗು ದೇಶಂ ಪಕ್ಷದ (ಟಿಡಿಪಿ) 17 ಶಾಸಕ, ಸಂಸದರು ಇದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹೆಚ್ಚು

ರಾಜ್ಯಗಳ ಪೈಕಿ ಮಹಿಳೆಯರ ವಿರುದ್ಧದ ಅಪರಾಧಗಳ ಘೋಷಿತ ಪ್ರಕರಣಗಳೊಂದಿಗೆ 25 ಸಂಸದರು ಮತ್ತು ಶಾಸಕರು ಪಶ್ಚಿಮ ಬಂಗಾಳದವರಾಗಿದ್ದರೆ. ಆಂಧ್ರಪ್ರದೇಶದಲ್ಲಿ 21, ಒಡಿಶಾದಲ್ಲಿ 17 ಮಾಡಿ ಇದ್ದು, ಅನಂತರದ ಸ್ಥಾನದಲ್ಲಿದೆ.

16 ಜನಪ್ರತಿನಿಧಿಗಳ ಮೇಲೆ ಅತ್ಯಾಚಾರ ಪ್ರಕರಣ

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಘೋಷಿಸಿರುವ ಒಟ್ಟು 151 ಸಂಸದರು ಮತ್ತು ಶಾಸಕರ ಪೈಕಿ 16 ಹಾಲಿ ಶಾಸಕರು ಅತ್ಯಾಚಾರ ಪ್ರಕರಣಗಳನ್ನು ಘೋಷಿಸಿದ್ದಾರೆ. ಈ 16 ಮಂದಿಯಲ್ಲಿ ಇಬ್ಬರು ಹಾಲಿ ಸಂಸದರಾಗಿದ್ದು, ಉಳಿದ 14 ಮಂದಿ ಶಾಸಕರಾಗಿದ್ದಾರೆ.

ಪಕ್ಷಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅತ್ಯಧಿಕ ಸಂಖ್ಯೆಯ ಹಾಲಿ ಸಂಸದರು ಮತ್ತು ಶಾಸಕರನ್ನು ಹೊಂದಿದ್ದು, ತಲಾ ಐದು ಅತ್ಯಾಚಾರ ಪ್ರಕರಣಗಳನ್ನು ಹೊಂದಿದ್ದಾರೆ. ರಾಜ್ಯಗಳ ಪೈಕಿ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳವು ಅತ್ಯಾಚಾರಕ್ಕೆ ಸಂಬಂಧಿಸಿದ ಘೋಷಿತ ಪ್ರಕರಣಗಳೊಂದಿಗೆ ಅತಿ ಹೆಚ್ಚು ಶಾಸಕರನ್ನು ಹೊಂದಿದ್ದು, ತಲಾ ಇಬ್ಬರನ್ನು ಹೊಂದಿದೆ.

ಅಪರಾಧ ಪ್ರಕರಣ ಹೆಚ್ಚಳ

2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಮತ್ತು ಇತರ ವಿವರಗಳನ್ನು ವಿಶ್ಲೇಷಿಸುವ ಎಡಿಆರ್ ಮತ್ತು ನ್ಯೂ ನ ಪ್ರತ್ಯೇಕ ವರದಿಯು ಇತ್ತೀಚೆಗೆ ಬಿಡುಗಡೆ ಮಾಡಿದ್ದು, 2009 ರಿಂದ ಘೋಷಿತ ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ ಸಂಸದರ ಸಂಖ್ಯೆ ಶೇ. 124ರಷ್ಟು ಹೆಚ್ಚಳವಾಗಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳ ಪೈಕಿ ಶೇ. 31 ಅಂದರೆ 170 ಅಭ್ಯರ್ಥಿಗಳು ಅತ್ಯಾಚಾರ, ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಇತ್ಯಾದಿಗಳಿಗೆ ಸಂಬಂಧಿಸಿದ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.

2019 ರಲ್ಲಿ 539 ಮಂದಿ ಗೆದ್ದಿದ್ದು, ಶೇ. 29ರಷ್ಟು ಅಂದರೆ 159 ಮಂದಿ ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ.

2014 ರಲ್ಲಿ, 542 ಸಂಸದರಲ್ಲಿ 112 ಅಂದರೆ ಶೇ. 21ರಷ್ಟು ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

2009 ರಲ್ಲಿ ವಿಶ್ಲೇಷಿಸಲಾದ 543 ಸಂಸದರಲ್ಲಿ 76 ಅಂದರೆ ಶೇ. 14ರಷ್ಟು ಸಂಸದರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದರು.

ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆಗಳು ಶೇ. 15.3 ಆಗಿದ್ದರೆ, ಶುದ್ಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಯು ಗೆಲ್ಲುವ ಸಾಧ್ಯತೆ ಶೇ. 4.4 ಎಂದು ವರದಿ ತಿಳಿಸಿದೆ.

18ನೇ ಲೋಕಸಭೆಯಲ್ಲಿ ಪಕ್ಷಗಳ ಪೈಕಿ ಬಿಜೆಪಿಯು ತನ್ನ 240 ವಿಜೇತ ಅಭ್ಯರ್ಥಿಗಳಲ್ಲಿ 94 ಅಭ್ಯರ್ಥಿಗಳು ಘೋಷಿತ ಕ್ರಿಮಿನಲ್ ಪ್ರಕರಣಗಳೊಂದಿಗೆ ಅತಿ ಹೆಚ್ಚು ಸಂಸದರನ್ನು ಹೊಂದಿದೆ. ಇದರ ಅನಂತರ ಕಾಂಗ್ರೆಸ್ 49, ಮತ್ತು ಸಮಾಜವಾದಿ ಪಕ್ಷದ 21 ಮಂದಿ ಸಂಸದರು ಘೋಷಿತ ಕ್ರಿಮಿನಲ್ ಪ್ರಕರಣವನ್ನು ಹೊಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version