Site icon Vistara News

ಉಡುಪಿಯಲ್ಲಿ ರಂಗೋಲಿ ಮೂಲಕ ಮೋದಿಗೆ ಜನ್ಮದಿನದ ಶುಭಾಶಯ

modi rangoli

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಈ ಚಂದದ ರಂಗೋಲಿ ಮೂಲಕ ಶುಭಾಶಯ ಹೇಳಲಾಗಿದೆ ಇಲ್ಲಿ. ಜನ್ಮದಿನದ ಅಂಗವಾಗಿ ಬಿಳಿ, ಕೇಸರಿ ಬಣ್ಣಗಳ ರಂಗೋಲಿಯಲ್ಲಿ ಅರಳಿ ಬಂದ ಮೋದಿ ನಗುತ್ತಿದ್ದಾರೆ.

ಸಾಸ್ತಾನ ಚೆನ್ನಕೇಶವ ಹಾಲ್‌ನಲ್ಲಿ ಬಿಡಿಸಲಾಗಿರುವ ರಂಗೋಲಿಯ ಹಿಂದೆ ಇರುವ ಕಲಾವಿದರು ಚಿತ್ರ ಕಲಾವಿದೆ ಸ್ಪೂರ್ತಿ ಆಚಾರ್ ಮತ್ತು ಅಶ್ವತ್ಥ್ ಆಚಾರ್ಯ. 12 ಅಡಿ ಉದ್ದ ಹಾಗೂ 7.5 ಅಡಿ ಅಗಲವಾಗಿರುವ ನರೇಂದ್ರ ಮೋದಿ ರಂಗೋಲಿಯನ್ನು ಸುಮಾರು 15 ಗಂಟೆಗಳ ಕಾಲ ಶ್ರಮವಹಿಸಿ ಮುತುವರ್ಜಿಯಿಂದ ಬಿಡಿಸಲಾಗಿದೆ.

ಇದನ್ನೂ ಓದಿ | Modi Birthday | ಸಿನಿಮಾಗಳಿಗೆ ಮೋದಿ ಪ್ರೇರಣೆ, ಸಿನಿಮಾ ನೋಡ್ತಾರಾ ಪಿಎಂ?

Exit mobile version