ಉಡುಪಿ: ಥಂಡಿ ವಾತಾವರಣದ ಜತೆಗೆ ಮಳೆಯು ಅಬ್ಬರಿಸುತ್ತಿದೆ. ಹೀಗಾಗಿ ಹಾವು-ಚೇಳುಗಳು ಬೆಚ್ಚಗಿನ ಜಾಗವನ್ನು ಹುಡುಕಿಕೊಂಡು ಹೊರ ಬರುತ್ತಿದೆ. ಸದ್ಯ ವಿಷಕಾರಿ ಚೇಳು ಸ್ಕೂಲ್ ಶೂವೊಳಗೆ (Scorpion) ಸೇರಿಕೊಂಡಿತ್ತು. ವಿಷಕಾರಿ ಚೇಳು ಇದ್ದ ಶೂ ಧರಿಸಿ ವಿದ್ಯಾರ್ಥಿಯೊಬ್ಬ ಶಾಲೆಗೆ ಬಂದಿರುವ ಘಟನೆ ಉಡುಪಿಯ ಇಂದ್ರಾಳಿಯಲ್ಲಿ ನಡೆದಿದೆ.
ಶಾಲೆಗೆ ಹೊರಟಿದ್ದ ವಿದ್ಯಾರ್ಥಿಯೊಬ್ಬ ಎಂದಿನಂತೆ ಮನೆ ಮುಂದಿದ್ದ ಸ್ಕೂಲ್ ಶೂ ಧರಿಸಿದ್ದ. ಮನೆಯಿಂದ ಶಾಲೆಗೆ ಬರುವಾಗಲೇ ಶೂ ಒಳಗೆ ಏನೋ ಇದೆ ಎಂದು ಭಾವಿಸಿದ್ದ. ಪರ್ಕಳದಿಂದ ಇಂದ್ರಾಳಿಯ ಶಾಲೆಗೆ ಬರುವರೆಗೂ ಕಸಿವಿಸಿಯಲ್ಲೇ ಹೊರಟಿದ್ದ. ಶಾಲೆಗೆ ಬಂದು ಗಮನಿಸಿದಾಗ ವಿಷಕಾರಿ ಚೇಳು ಶೂನಲ್ಲಿ ಪತ್ತೆಯಾಗಿದೆ.
ಚೇಳು ನೋಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೌಹಾರಿದ್ದಾರೆ. ಶೂ ಒಳಗೆ ಇದ್ದ ಚೇಳು ಅದೃಷ್ಟವಶಾತ್ ವಿದ್ಯಾರ್ಥಿಗೆ ಕುಟುಕಿಲ್ಲ. ಒಂದು ವೇಳೆ ಕುಟುಕಿದ್ದರೆ ಅಪಾಯ ಎದುರಾಗುತ್ತಿತ್ತು. ಸದ್ಯ ಶಾಲೆಯ ಪ್ರಾಂಶುಪಾಲರು ಪೋಷಕರಿಗೆ ಕರೆ ಮಾಡಿ ಕಿವಿ ಮಾತು ಹೇಳಿದ್ದಾರೆ. ಜತೆಗೆ ವಿದ್ಯಾರ್ಥಿಗಳು ಶೂ ಹಾಕಿಕೊಳ್ಳುವಾಗ ಒಮ್ಮೆ ಪರಿಶೀಲಿಸಿ ನಂತರ ಹಾಕಿಕೊಳ್ಳುವಂತೆ ಶಿಕ್ಷಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : Viral Video: ಶೂ ಒಳಗೆ ಕಾಲಿಡುವ ಮುನ್ನ ಎಚ್ಚರ; ನಾಗರಹಾವು ಕುಳಿತಿರುತ್ತದೆ! ಇಲ್ಲಿದೆ ವಿಡಿಯೊ
ಬೆಡ್ ಶೀಟ್ ಒಳಗೆ ನಾಗಪ್ಪ ಬುಸ್; ಮನೆಯವರು ಜಸ್ಟ್ ಮಿಸ್! video ಇದೆ!
ತುಮಕೂರು: ಆ ಮನೆಯಲ್ಲಿರುವ ಮಂಚದ ಮೇಲೆ ಒಂದು ಬೆಡ್ ಶೀಟ್ ಇತ್ತು. ಅದನ್ನು ಮೇಲೆತ್ತಿ ಮಡಚಿ ಇಡೋಣ ಎಂದು ಮೆಲ್ಲನೆ ಎತ್ತಿದರೆ ಎದೆ ಧಸಕ್ಕೆಂದಿತ್ತು. ಯಾಕೆಂದರೆ, ಬೆಡ್ ಶೀಟ್ ಒಳಗೆ ಇದ್ದಿದ್ದು ಬುಸ್ ಬುಸ್ ನಾಗಪ್ಪ! (Cobra inside Bed sheet) ಈ ಘಟನೆ ನಡೆದಿರುವುದು ತುಮಕೂರು ತಾಲೂಕಿನ ಕಂಬಾಳಪುರ ಗ್ರಾಮದಲ್ಲಿ (Tumkur News). ಇಲ್ಲಿನ ಮುನಿಯಪ್ಪ ಅವರ ಮನೆಯ ಮಂಚದ ಮೇಲೆ ಹಾವು ಇತ್ತು (Snake in Bed). ಮೆಲ್ಲಗೆ ಬೆಡ್ ಶೀಟ್ ಎತ್ತಿದ್ದರಿಂದ ಹಾವುದು ಇರುವುದು ಗೊತ್ತಾಯಿತು. ಒಂದು ವೇಳೆ ಜೋರಾಗಿ ಎತ್ತಿ ಕೊಡವಿಬಿಟ್ಟಿದ್ದರೆ ಏನಾಗುತ್ತಿತ್ತೋ ಎಂದು ಭಯದಲ್ಲೇ ಆ ಮನೆ ನಡುಗಿಹೋಗಿತ್ತು. ಅಬ್ಬಾ ಅಪಾಯ ಜಸ್ಟ್ ಮಿಸ್ (Danger Just miss) ಆಯಿತು ಅಂತ ನೂರು ದೇವರನ್ನು ನೆನಪಿಸಿಕೊಂಡ ಅವರು ಕೂಡಲೇ ಉರಗ ತಜ್ಞ ದಿಲೀಪ್‌ಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ ವಾರಂಗಲ್ ಫೌಂಡೇಷನ್ ವನ್ಯ ಜೀವಿ ಹಾಗೂ ಉರಗ ತಜ್ಞ ದಿಲೀಪ್ ಮತ್ತು ಕಿರಣ್ ಅವರು ಮೆಲ್ಲನೆ ಬೆಡ್‌ಶೀಟ್ ಮೇಲೆತ್ತಿದರು. ಅದುವರೆಗೆ ಏನೂ ಆಗಿಲ್ಲ ಎಂಬಂತೆ ಬೆಚ್ಚಗೆ ಮಲಗಿದ್ದ ಹಾವು ಇವರನ್ನು ನೋಡಿದ್ದೇ ತಡ ಬುಸುಗುಡಲು ಆರಂಭ ಮಾಡಿತು. ಹಿಡಿಯಲು ಹೋದಾಗ ಹೆದರಿಸಿ ಕಚ್ಚಲು ಬಂತು.
ಅಂತಿಮವಾಗಿ ಹೆಡೆ ಎತ್ತಿ ಬುಸುಗುಡುತ್ತಿದ್ದ ಸುಮಾರು ಐದು ಅಡಿ ಉದ್ದದ ನಾಗರ ಹಾವನ್ನು ಹೇಗೋ ರಕ್ಷಣೆ ಮಾಡಲಾಯಿತು. ಮನೆ ಮಂದಿ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಕೊನೆಗೆ ನಾಗರಹಾವನ್ನು ಸಮೀಪದ ಕಾಡಿಗೆ ಬಿಡಲಾಯಿತು.
ಹಾಸಿಗೆಯಲ್ಲಿ ಮಲಗಿದ್ದ ಹುಡುಗನ ಪಕ್ಕದಲ್ಲೇ ಹಾವು!
ಕೆಲವು ತಿಂಗಳ ಹಿಂದೆ ಮೈಸೂರಿನ (Mysore news) ಹೆಬ್ಬಾಳ ಎರಡನೇ ಹಂತದಲ್ಲಿರುವ ಚೆನ್ನಮ್ಮ ವೃತ್ತದ ಮನೆಯೊಂದರಲ್ಲಿ ಆ ಮನೆಯ ಹುಡುಗ ಪ್ರಜ್ವಲ್‌ನ ಪಕ್ಕದಲ್ಲೇ ಒಂದು ಹಾವು ಹೋಗಿ ಮಲಗಿತ್ತು.
ಅವನು ಬೆಳಗ್ಗೆನೆ ಯಾರೋ ಕಣ್ಣೆಳೆಯುತ್ತಿದೆ ಎಂದು ಮಂಚದಲ್ಲಿ ಬಿದ್ದುಕೊಂಡಿದ್ದ. ಸ್ವಲ್ಪ ಹೊತ್ತಿನಲ್ಲಿ ಅವನಿಗೆ ಯಾವುದೋ ಗೊರಕೆ ಸದ್ದು ಕೇಳಿದ ಹಾಗಾಯಿತು. ಎಚ್ಚರವಾಗಿ ಯಾರಪ್ಪಾ ಇದು ಗೊರಕೆ ಹೊಡೆಯೋರು ಎಂದು ನೋಡಿದರೆ ಪಕ್ಕದಲ್ಲೇ ಹಾವು ಬುಸುಗುಡುತ್ತಿತ್ತು. ಇಷ್ಟು ಹೊತ್ತು ನಾನು ಹಾವಿನ ಜತೆಗಾ ಎಂದು ಯೋಚಿಸುತ್ತಲೇ ಅವನ ಎದೆ ಧಸಕ್ಕೆಂದಿತು. ಕೂಡಲೇ ಹೊರಗೋಡಿ ಬಂದು ಎಲ್ಲರಿಗೂ ಹೇಳಿದ. ಕೊನೆಗೆ ಸ್ನೇಕ್ ಶ್ಯಾಂ ಅವರು ಬಂದು ಹಾವನ್ನು ಹಿಡಿದುಕೊಂಡು ಹೋಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ