Site icon Vistara News

ಮೇ 5ರಂದು ಶ್ರೀಕೃಷ್ಣ ಬಾಲನಿಕೇತನ, ವಿಶ್ವೇಶತೀರ್ಥ ಸೇವಾಧಾಮ ವಾರ್ಷಿಕೋತ್ಸವ; ಬಾಲ ವಾತ್ಸಲ್ಯ ಸಿಂಧು ಪ್ರಶಸ್ತಿ ಪ್ರದಾನ

Sri Krishna Balaniketan, Vishwesha Theertha Sevadhama anniversary and Bala Vatsalya Sindhu Award Presentation on May 5

Sri Krishna Balaniketan, Vishwesha Theertha Sevadhama anniversary and Bala Vatsalya Sindhu Award Presentation on May 5

ಉಡುಪಿ: ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್‌ ವತಿಯಿಂದ ನಗರದ ಕುಕ್ಕಿಕಟ್ಟೆಯಲ್ಲಿ ಮೇ 5ರಂದು ಸಂಜೆ 5.30ಕ್ಕೆ ಶ್ರೀಕೃಷ್ಣ ಬಾಲನಿಕೇತನ, ವಿಶ್ವೇಶತೀರ್ಥ ಸೇವಾಧಾಮ ಉಚಿತ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಮತ್ತು ಬಾಲ ವಾತ್ಸಲ್ಯ ಸಿಂಧು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಬಾಲವಾತ್ಸಲ್ಯ ಸಿಂಧು ಪ್ರಶಸ್ತಿಗೆ ಕುಂದಾಪುರದ ಕೋಣಿಯ ಮಾನಸ ಜ್ಯೋತಿ ವಿಶೇಷ ಮಕ್ಕಳ ಶಾಲೆಯ ಶೋಭಾ ಮಧ್ಯಸ್ಥ ಅವರು ಆಯ್ಕೆಯಾಗಿದ್ದು, ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಶ್ರೀ ಪೇಜಾವರ ಅಧೋಕ್ಷಜ ಮಠ ಮತ್ತು ಶ್ರೀಕೃಷ್ಣ ಬಾಲನಿಕೇತನ ಅಧ್ಯಕ್ಷರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅನುಗ್ರಹ ಸಂದೇಶ ನೀಡಲಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಅನುವಾದ, ಅಭಿವ್ಯಕ್ತಿಗಳು ಸರಿಯಾದ ಮೂಲಾರ್ಥವನ್ನೇ ಹೊಮ್ಮಿಸಲಿ

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ರವೀಂದ್ರ ಅರಿ, ಕರ್ಣಾಟಕ ಬ್ಯಾಂಕ್ ನಿರ್ದೇಶಕರು ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿವೃತ್ತ ಕಾರ್ಯ ನಿರ್ವಾಹಕ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಬೆಂಗಳೂರಿನ ಮೈಸೂರು ಮರ್ಕಂಟೈಲ್ ಕಂ. ಲಿ. ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಎಚ್‌.ಎಸ್‌.ಶೆಟ್ಟಿ ಭಾಗವಹಿಸಲಿದ್ದಾರೆ.

Exit mobile version