Site icon Vistara News

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

Tornado Effect in Udupi

ಉಡುಪಿ: ಒಂದು ಕಡೆ ಮಳೆಯು (Karnataka Rain) ಅಬ್ಬರಿಸುತ್ತದ್ದರೆ ಮತ್ತೊಂದು ಕಡೆ ಸುಂಟರಗಾಳಿ (Tornado Effect) ಹವಾ ಜೋರಾಗಿದೆ. ಉಡುಪಿಯ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಸುಂಟರಗಾಳಿ ಕಾಣಿಸಿಕೊಂಡಿದೆ. ಭಾರೀ ಸುಂಟರಗಾಳಿಗೆ ರಟ್ಟಾಡಿ ಗ್ರಾಮದ ಕೃಷಿಕರು ಕಂಗಾಲಾಗಿದ್ದಾರೆ.

ಅಪಾರ ಪ್ರಮಾಣದ ಮರ, ಮನೆಗಳಿಗೆ ಹಾನಿಯಾಗಿದೆ. ಭಾರಿ ಶಬ್ದದೊಂದಿಗೆ ಸುಂಟರಗಾಳಿ ಅಪ್ಪಳಿಸಿದೆ. ಕೆಲವು ಹೊತ್ತು ಚಂಡಮಾರುತದಂತೆ ಸುಂಟರಗಾಳಿ ಭಾಸವಾಗಿದೆ. ಮೊದಲ ಬಾರಿಗೆ ಇಂತಹ ಅನುಭವಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಟ್ಟಾಡಿಯಲ್ಲಿ ಏಕಾಏಕಿ ಸುಂಟರಗಾಳಿ ಕಾಣಿಸಿಕೊಂಡಿದೆ.

ರಟ್ಟಾಡಿಯಲ್ಲಿ ಭೀಕರ ಸುಂಟರಗಾಳಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಮಾವಾಸ್ಯೆ ಬೈಲು ಗ್ರಾಮ ಪಂಚಾಯತ್‌ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡ್ರೋನ್‌ ಕ್ಯಾಮೆರಾ ಮೂಲಕ ಮರ, ಮನೆಗಳ ಹಾನಿ ಕುರಿತು ಅಂದಾಜು ಲೆಕ್ಕಚಾರ ನಡೆಸಿದ್ದಾರೆ.

ಇನ್ನೂ ರಟ್ಟಾಡಿ ವ್ಯಾಪ್ತಿಯಲ್ಲಿರುವ ಸಾವಿರಾರು ಮರಗಳು ಧರಶಾಹಿಯಾಗಿವೆ. 5 ಸಾವಿರಕ್ಕೂ ಅಧಿಕ ಅಡಿಕೆ ಮರ, 2 ಸಾವಿರದಷ್ಟು ರಬ್ಬರ್‌ ಮರ ಹಾಗೂ ತೆಂಗಿಗೂ ಹಾನಿಯಾಗಿದೆ. ಅಪಾರ ಪ್ರಮಾಣದ ಮರಗಳು ಕತ್ತರಿಸಿದಂತೆ ನೆಲಕ್ಕುರುಳಿದೆ. ರಟ್ಟಾಡಿ ವ್ಯಾಪ್ತಿಯ ಹಲವು ಮನೆಗಳಿಗೂ ಸುಂಟರಗಾಳಿಯಿಂದ ಹಾನಿಯಾಗಿದೆ.

ಅಮಾಸೆಬೈಲು ರಟ್ಟಾಡಿಯಲ್ಲಿ ಕಾಣಿಸಿಕೊಂಡ ಭೀಕರ ಸುಂಟರಗಾಳಿಯ ಎಫೆಕ್ಟ್‌ನಿಂದಾಗಿ ರಟ್ಟಾಡಿ ನಂಜಿನ ಹಾಡಿ ಕತ್ಗೋಡು ಎಂಬಲ್ಲಿ ಮನೆಯ ಮೇಲೆ ಮರ ಬಿದ್ದಿದೆ. ಸುಂಟರಗಾಳಿಯ ಆರ್ಭಟಕ್ಕೆ ಮನೆಯ ಪಕ್ಕದಲ್ಲಿದ್ದ ಮರ ಉರಳಿ ಬಿದ್ದಿದೆ. ಮನೆ ಮೇಲೆ ಮರ ಬಿದ್ದ ಪರಿಣಾಮ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬ ಸುಂಟರಗಾಳಿಯಿಂದ ಅತಂತ್ರಕ್ಕೆ ಸಿಲುಕಿದೆ. ದಿಢೀರನೆ ಕಾಣಿಸಿಕೊಂಡಿದ್ದ ಸುಂಟರಗಾಳಿಯಿಂದ ರಟ್ಟಾಡಿ ಗ್ರಾಮ ಅಲ್ಲೋಲಕಲ್ಲೋಲವೇ ಎದ್ದಿದೆ. ದುರ್ಗಿ ಅವರ ಕುಟುಂಬ ಮನೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Tornado Effect in udupi

ಇದನ್ನೂ ಓದಿ: Murder case : ಹಾಸನದಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ

ಕಮಲಶಿಲೆ ದೇವಾಲಯದಲ್ಲಿ ನೈಸರ್ಗಿಕ ಪುಣ್ಯಸ್ನಾನ

ಉಡುಪಿಯ ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೆ ಕುಬ್ಜ ನದಿ ನೀರು ಹರಿದಿದೆ. ಬೆಳಗಿನ ಜಾವ ಮೂರುವರೆ ಸುಮಾರಿಗೆ ದೇವಿಯ ಚರಣವನ್ನು ಕುಬ್ಜಾ ನದಿ ನೀರು ಸ್ಪರ್ಶ ಮಾಡಿದೆ. ಈ ಮೂಲಕ ದೇವಸ್ಥಾನದಲ್ಲಿ ನೈಸರ್ಗಿಕ ಪುಣ್ಯಸ್ನಾನ ನಡೆದಿದೆ.

ಗರ್ಭಗುಡಿಗೆ ನೀರು ಬರುತ್ತಿದ್ದಂತೆ ಅರ್ಚಕರು ಮಂಗಳಾರತಿ ಮಾಡಿದ್ದಾರೆ. ವರ್ಷಂಪ್ರತಿ ಒಂದು ಬಾರಿ ಗರ್ಭಗುಡಿಗೆ ಕುಬ್ಜಾ ನದಿ ನೀರು ಬರುತ್ತದೆ. ಈ ನೈಸರ್ಗಿಕ ಪುಣ್ಯಸ್ನಾನಕ್ಕೆ ಭಕ್ತರು ಕಾತರದಿಂದ ಕಾಯುತ್ತಾರೆ. ಸದ್ಯ ನೀರು ಇಳಿಮುಖವಾಗಿ ದೇವಾಲಯದಿಂದ ತೆರವು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version