ಉಡುಪಿ: ಬೆನ್ನತ್ತಿಕೊಂಡು ಬಂದು ತನಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಕಾಲೇಜಿನ ವಿದ್ಯಾರ್ಥಿನಿಯೇ ಚಪ್ಪಲಿ ಏಟು ಕೊಟ್ಟಿರುವ ವಿಶೇಷ ಘಟನೆ ಉಡುಪಿ ಜಿಲ್ಲೆಯ ವಾಕ್ವಾಡಿ ರಸ್ತೆಯಲ್ಲಿ (Viral News) ನಡೆದಿದೆ.
ವಿದ್ಯಾರ್ಥಿನಿಯು ತಾನಿದ್ದ ಹಾಸ್ಟೆಲ್‌ನಿಂದ ಬೀಜಾಡಿ ರಸ್ತೆಯಲ್ಲಿ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಳು. ಆಗ ಬಾರ್ಕೂರು ಮೂಲದ ನಜೀರ್ ಹೆಸರಿನ ವ್ಯಕ್ತಿ ಆಕೆಯನ್ನು ಹಿಂಬಾಲಿಸಿದ್ದಾನೆ. ಅಷ್ಟೇ ಅಲ್ಲದೆ ಸನಿಹ ಬಂದು ಆಕೆಯ ಬಗ್ಗೆ ಅವಾಚ್ಯವಾಗಿ ಮಾತನಾಡಿ ಕಿರುಕುಳ ನೀಡಲಾರಂಭಿಸಿದ್ದಾನೆ.
ಇದನ್ನೂ ಓದಿ: Viral Video: ಬಸ್ಸು ಮತ್ತು ಲಾರಿ ಮಧ್ಯೆ ಸ್ಕೂಟರ್ ಅಪ್ಪಚ್ಚಿ, ಸವಾರರ ಕಣ್ ಮುಂದೆ ಯಮ ರಪ್ ಅಂತ ಪಾಸ್ ಆದ!
ಈ ರೀತಿ ಆಗುತ್ತಿದ್ದಂತೆಯೇ ವಿದ್ಯಾರ್ಥಿನಿ ಭಯ ಬಿದ್ದಿದ್ದಾಳೆ. ಆದರೆ ಭಯವನ್ನು ಹಿಮ್ಮೆಟ್ಟಿ ಧೈರ್ಯದಿಂದ ಅಲ್ಲಿನ ಸ್ಥಳೀಯ ನಿವಾಸಿಗಳನ್ನು ಸಹಾಯಕ್ಕೆಂದು ಕರೆದು ಅವರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಸ್ಥಳೀಯರು ಆತನನ್ನು ಓಡಿಹೋಗದಂತೆ ಹಿಡಿದುಕೊಂಡಿದ್ದಾರೆ. ನಿನಗೆ ಕಿರುಕುಳ ನೀಡಿದ ಇವನಿಗೆ ನೀನೇ ಶಿಕ್ಷೆ ಕೊಡು ಎಂದು ಹೇಳಿದ್ದಾರೆ. ಯುವತಿ ಹಿಂದೆ ಮುಂದೆ ನೋಡದೆ ತನ್ನ ಕಾಲಿನಲ್ಲಿದ್ದ ಚಪ್ಪಲಿ ತೆಗೆದುಕೊಂಡು ಆತನಿಗೆ ಮನಸೋಇಚ್ಛೆ ಬಾರಿಸಿದ್ದಾಳೆ.
ಇದಾದ ನಂತರ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ ಕುಂದಾಪುರದ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Viral News: ತೊಪ್ಪೆಯಾಗುವಂತೆ ಮಳೆ ಹೊಯ್ಯಲೆಂದು ಕಪ್ಪೆಗಳ ಕಟ್ಟಿಕೊಂಡು ಬಂದು ತಾಳಿ ಕಟ್ಟಿದ ಗ್ರಾಮಸ್ಥರು!
ಯುವತಿ ನಜೀರ್‌ಗೆ ಚಪ್ಪಲಿಯಲ್ಲಿ ಹೊಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ. ಜನರು ನಜೀರ್‌ಗೆ ಯುವತಿ ಕೈನಲ್ಲಿ ಹೊಡೆಸಿರುವುದೇ ಸರಿಯಾದ ಶಿಕ್ಷೆ ಎಂದು ಹೇಳಲಾರಂಭಿಸಿದ್ದಾರೆ. ಹಾಗೆಯೇ ಆಕೆಯ ಧೈರ್ಯದ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಎಲ್ಲ ಹೆಣ್ಣು ಮಕ್ಕಳು ಇಷ್ಟು ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಲಾಗುತ್ತಿದೆ.