Site icon Vistara News

UGCET 2024: ಯುಜಿಸಿಇಟಿ ಅರ್ಜಿ ತಿದ್ದುಪಡಿಗೆ ಅಂತಿಮ ಅವಕಾಶ ನೀಡಿದ ಕೆಇಎ; ಕೊನೆಯ ದಿನಾಂಕ ಯಾವಾಗ?

KEA

ಬೆಂಗಳೂರು: ಯುಜಿಸಿಇಟಿ-2024ಕ್ಕೆ (UGCET 2024) ಆನ್‌ಲೈನ್ ಅರ್ಜಿಯಲ್ಲಿ ನೀಡಿರುವ ಆರ್‌ಡಿ ಸಂಖ್ಯೆಗಳನ್ನು ಹಾಗೂ ಇತರೆ ಕ್ಲೇಮ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಕೆಇಎ ಅಂತಿಮ ಅವಕಾಶ ನೀಡಿದೆ. ಅಭ್ಯರ್ಥಿಗಳು ಮೇ 15ರ ರಾತ್ರಿ 11.59 ಗಂಟೆವರೆಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕೆಇಎ ನಡೆಸುವ ಸಿಇಟಿ-2024ರ ಆನ್‌ಲೈನ್ ಅರ್ಜಿಯಲ್ಲಿ ಆ‌ರ್‌ಡಿ ಸಂಖ್ಯೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅನೇಕ ಅಭ್ಯರ್ಥಿಗಳು ಮನವಿ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಡಿ ಸಂಖ್ಯೆಗಳನ್ನು ಹಾಗೂ ಇತರೆ ಕ್ಲೇಮ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮೇ 15ರ ರಾತ್ರಿ 11.59 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ ಸೈಟ್ http://kea.kar.nic.inಗೆ ಭೇಟಿ ನೀಡಬಹುದು.

ಯುಜಿಸಿಇಟಿ-2024 ಅರ್ಜಿ ತಿದ್ದಪಡಿ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ತಿದ್ದುಪಡಿ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮ

  1. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಅಭ್ಯರ್ಥಿಗಳ ಲಾಗಿನ್ ಮೂಲಕ ತಿದ್ದುಪಡಿ ಮಾಡಿಕೊಳ್ಳುವುದು.
  2. ಲಿಂಕ್ ಆಯ್ಕೆ ಮಾಡಿದ ನಂತರ ಯಾವುದನ್ನು ಎಡಿಟ್ ಮಾಡಬೇಕು ಎಂಬುದನ್ನು ಸೆಲೆಕ್ಟ್ ಮಾಡಿ, ನಂತರ , (eligibility clause Update, RD details update, Course Update, Upload Documents, Reservation Claims, Special Category claims.) ತಿದ್ದುಪಡಿ ಮಾಡಿ
  3. Declaration button ಅನ್ನು ಆಯ್ಕೆ (Select) ಮಾಡುವ ಮೊದಲು ಪರಿಶೀಲಿಸಿ, ಒಂದು ಸಾರಿ Declaration button ಅನ್ನು ಆಯ್ಕೆ (Select) ಮಾಡಿದ ನಂತರ ಪುನಹ ತಿದ್ದುಪಡಿಮಾಡಿಕೊಳ್ಳಲು ಅವಕಾಶ ವಿರುವುದಿಲ್ಲ.
  4. ತಿದ್ದುಪಡಿ ಮಾಡಿಕೊಂಡ ನಂತರ ತಪ್ಪದೇ Declaration button ಅನ್ನು ಆಯ್ಕೆ (Select) ಮಾಡಿ ನಂತರ Final Submission ಅನ್ನು ಸಲ್ಲಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಅಭ್ಯರ್ಥಿಗಳು ಅರ್ಜಿಯಲ್ಲಿ ಮೊದಲು ಸಲ್ಲಿಸಿದ ಮಾಹಿತಿಯನ್ನೇ ಮುಂದಿನ ಎಲ್ಲಾ ಪ್ರಕ್ರಿಯೆಗೆ ಪರಿಗಣಿಸಲಾಗುವುದು.
  5. ನಂತರ ಮಾರ್ಪಡಿಸಿದ ಅರ್ಜಿಯನ್ನು ಮುದ್ರಿಸಿ ತಮ್ಮಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಮುದ್ರಿತ ಅರ್ಜಿಯ ಕನಿಷ್ಟ ಐದು ಪ್ರತಿಗಳು ತಮ್ಮಲ್ಲಿ ಇರುವುದು ಸೂಕ್ತ.

ಇದನ್ನೂ ಓದಿ | SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

Exit mobile version