Site icon Vistara News

Book Award: ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

Books

ಹುಬ್ಬಳ್ಳಿ: ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 2021 ಮತ್ತು 2022ನೇ ಸಾಲಿನ ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿಗಾಗಿ (Book Award) ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು 3 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿರುತ್ತದೆ. ಇದರೊಂದಿಗೆ 2021ರ ಮತ್ತು 2022ನೇ ಸಾಲಿನ ಎರಡೂ ವರ್ಷಗಳಿಗೆ ಪ್ರತ್ಯೇಕ ಐದು ಪುಸ್ತಕಗಳಿಗೆ ಪ್ರೋತ್ಸಾಹಕ ಪ್ರಶಸ್ತಿ (ನಗದು ರಹಿತ)ಗಳನ್ನು ಪ್ರದಾನ ಮಾಡಲಾಗುತ್ತದೆ. ಪ್ರೋತ್ಸಾಹಕ ಪ್ರಶಸ್ತಿಗಳು ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಮತ್ತು ಗೌರವ ಸಮರ್ಪಣೆಯನ್ನು ಒಳಗೊಂಡಿರುತ್ತವೆ.

ಏಪ್ರಿಲ್, ಮೇ ನಂತರ ಬೆಳಗಾವಿಯಲ್ಲಿ ನಡೆಯುವ ಭಾವ ಸಂಗಮ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಸ್ವತಃ ಪಾಲ್ಗೊಳ್ಳುವುದು ಕಡ್ಡಾಯ. ಆದರೆ, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಹಾಜರಾಗದಿದ್ದಲ್ಲಿ ಪುರಸ್ಕೃತರ ಮನೆಗೆ ತೆರಳಿ ಪ್ರದಾನ ಮಾಡುವ, ಅಂಚೆಯಲ್ಲಿ ಕಳುಹಿಸುವ ಔಪಚಾರಿಕತೆಗೆ ಅವಕಾಶ ಇಲ್ಲ. ಅವರ ಪ್ರಶಸ್ತಿ ರದ್ದಾಗುತ್ತದೆ ಎಂದು ಫೌಂಡೇಶನ್‌ ತಿಳಿಸಿದೆ.

2021 ಮತ್ತು 2022ನೇ ಸಾಲಿನಲ್ಲಿ ಪ್ರಕಾಶನಗೊಂಡ ಪುಸ್ತಕಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಲಾಗುತ್ತದೆ. ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಪ್ರವಾಸ ಸಾಹಿತ್ಯ, ನಾಟಕ, ಚುಟುಕು ಸಂಕಲನ, ಗಜಲ್ ಸಂಕಲನ, ಹಾಯ್ಕು ಸಂಕಲನ, ಟಂಕಾ ಸಂಕಲನ, ವಿಮರ್ಶಾ ಕೃತಿ, ವ್ಯಂಗ್ಯ ಚಿತ್ರ ಸಂಕಲನ, ವ್ಯಕ್ತಿಚಿತ್ರ, ಲಲಿತ ಪ್ರಬಂಧ, ಸಂಪಾದಿತ ಕೃತಿ, ಲೇಖನ ಸಂಕಲನ , ಅನುವಾದ, ಮಕ್ಕಳ ಸಾಹಿತ್ಯ ಮತ್ತು ಎಲ್ಲ ಪ್ರಕಾರದ ಕೃತಿಗಳನ್ನು (ತಲಾ 1 ಪ್ರತಿ ಮಾತ್ರ) 2023 ಏಪ್ರಿಲ್ 30‌ರೊಳಗೆ ತಲುಪಿಸಬೇಕು.

ಇದನ್ನೂ ಓದಿ | Sunday Read: ಹೊಸ ಪುಸ್ತಕ: ಎದೆಯ ದನಿ ಕೇಳಿರೋ

ಪುಸ್ತಕವನ್ನು ” ರಾಜೇಂದ್ರ ಪಾಟೀಲ, ನಂ.101, ಮೊದಲ ಮಹಡಿ, ಶ್ರೀ ಗುರೂಜಿ ಎನ್ಕ್ಲೇವ್ ಅಪಾರ್ಟ್ಮೆಂಟ್, ಗ್ರೀನ್ ಪಾರ್ಕ್, ಸರಸ್ವತಿಪುರಂ, ಕುಸುಗಲ್ಲ ರಸ್ತೆ, ಕೇಶ್ವಾಪುರ, ಹುಬ್ಬಳ್ಳಿ-580023 ( ಮೊ: 9148391546) ಈ ವಿಳಾಸಕ್ಕೆ ಕಡ್ಡಾಯವಾಗಿ ರಿಜಿಸ್ಟರ್ಡ್ ಅಂಚೆ ಅಥವಾ ಕೊರಿಯರ್ ಮೂಲಕವೇ ಕಳುಹಿಸಲು ಉಮಾಶಂಕರ ಪ್ರತಿಷ್ಠಾನದ ಸಂಚಾಲಕರು ಕೋರಿದ್ದಾರೆ.

ಬಸವಶ್ರೀ, ಜಕಣಾಚಾರಿ ಸೇರಿ ಸಂಸ್ಕೃತಿ ಇಲಾಖೆಯ 14 ಪ್ರಶಸ್ತಿಗಳು ಪ್ರಕಟ

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆಯು 2020-21 ಮತ್ತು 2021-22 ಸಾಲಿನ ಬಸವಶ್ರೀ, ಜಕಣಾಚಾರಿ, ವರ್ಣಶಿಲ್ಪಿ ವೆಂಕಟಪ್ಪ ಸೇರಿದಂತೆ 14 ಪ್ರಶಸ್ತಿಗಳನ್ನು ಘೋಷಿಸಿದೆ. (Awards) ವಿವರ ಇಂತಿದೆ.

ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರದ ಅಲೆಮಾರಿ ಸಮುದಾಯಗಳ ಹೋರಾಟಗಾರರು, ರಾಷ್ಟ್ರೀಯ ಅಲೆಮಾರಿ ಆಯೋಗದ ಮಾಜಿ ಅಧ್ಯಕ್ಷ ಭಿಕು ರಾಮ್‌ಜಿ ಇದಾತೆ ರತ್ನಗಿರಿ ಹಾಗೂ ಧಾರವಾಡದ ಡಾ. ವೀರಣ್ಣ ರಾಜೂರು ಆಯ್ಕೆಯಾಗಿದ್ದಾರೆ.

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಧಾರವಾಡದ ಗಾಯತ್ರಿ ದೇಸಾಯಿ, ಕಲಬುರಗಿಯ ವಿಜಯ್‌ ಹಾಗರ ಗುಂಡಿಗಿ ಆಯ್ಕೆಯಾಗಿದ್ದಾರೆ.

ಜಕಣಾಚಾರಿ ಪ್ರಶಸ್ತಿಗೆ ವಿಜಯನಗರದ ಹಂಪಿ ವಿವಿಯ ಹುಸೇನಿ, ಮೈಸೂರಿನ ಶಿಲ್ಪಿ ಶ್ಯಾಮಸುಂದರ ಭಟ್‌ ಆಯ್ಕೆಯಾಗಿದ್ದಾರೆ.

ಚೌಡಯ್ಯ ಪ್ರಶಸ್ತಿಗೆ ಎಂ.ವಾಸುದೇವ ಮೋಹಿತ (ಮೃದಂಗ), ಹರಿಪ್ರಸಾದ್‌ ಚೌರಾಸಿಯಾ (ಕೊಳಲು, ದಿಲ್ಲಿ) ಆಯ್ಕೆಯಾಗಿದ್ದಾರೆ.

ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿಗೆ ಪಾವಗಡದ ಶ್ರೀ ಜಪಾನಂದ ಸ್ವಾಮಿ, ಸಾಮಾಜಿಕ ಹೋರಾಟಗಾರ ಸದಾನಂದ ಮಾಸ್ಟರ್‌ (ಕೇರಳ) ಆಯ್ಕೆಯಾಗಿದ್ದಾರೆ.

ಕುಮಾರವ್ಯಾಸ ಪ್ರಶಸ್ತಿಗೆ ಶಿವಮೊಗ್ಗದ ರಾಜಾರಾಂ ಮೂರ್ತಿ (ಗಮಕ), ಮೈಸೂರಿನ ಡಾ.ಎಂ.ಕೆ ರಾಮಶೇಷನ್‌ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ | Book Release: ಪುಸ್ತಕಗಳನ್ನು ಓದುವ ಮೂಲಕ ಸಮಾಜ ತಿದ್ದುವ ಕೆಲಸವಾಗಲಿ: ಪ್ರೊ. ಹಿರೇಮಠ

ಶಾಂತಲಾ ನಾಟ್ಯರಾಣಿ ಪ್ರಶಸ್ತಿಗೆ ಬೆಂಗಳೂರಿನ ಎಂ.ಆರ್‌ ಕೃಷ್ಣಮೂರ್ತಿ, ಬೆಂಗಳೂರಿನ ಬಿ.ಎಸ್‌ ಸುನಂದಾ ದೇವಿ (ಕೂಚುಪುಡಿ) ಆಯ್ಕೆಯಾಗಿದ್ದಾರೆ.

ಸಂತ ಶಿಶುನಾಳ ಷರೀಫರ ಪ್ರಶಸ್ತಿಗೆ ದಕ್ಷಿಣಕನ್ನಡದ ಪುತ್ತೂರು ನರಸಿಂಹ ನಾಯಕ್‌, ಹಾಗೂ ಚಂದ್ರಶೇಖರ ಜೋಯಿಷಾ (ವಯಲಿನ್)‌ ಆಯ್ಕೆಯಾಗಿದ್ದಾರೆ.

ನಿಜಗುಣ ಪುರಂದರ ಪ್ರಶಸ್ತಿಗೆ ಎಂ.ಎಸ್‌ ಶೀಲಾ ಆಯ್ಕೆಯಾಗಿದ್ದಾರೆ. ಪ್ರೊ.ಕೆ.ಜಿ ಜುಂದಣಗಾರ ಪ್ರಶಸ್ತಿಗೆ ಡಾ. ರಮಾನಂದ ಬನಾರಿ (ಕಾಸರಗೋಡು), ಎಂ.ಎನ್‌ ವೆಂಕಟೇಶ ಕುಪ್ಪಂ ಆಯ್ಕೆಯಾಗಿದ್ದಾರೆ.

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಮೈಸೂರಿನ ಕೌಸಲ್ಯಾ ಧರಣೀಂದ್ರ, ಧಾರವಾಡದ ಮಾಲತಿ ಪಟ್ಟಣಶೆಟ್ಟಿ ಆಯ್ಕೆಯಾಗಿದ್ದಾರೆ.

ಬಿ.ವಿ ಕಾರಂತ ಪ್ರಶಸ್ತಿಗೆ ಬೆಂಗಳೂರಿನ ಡಾ.ಬಿ.ವಿ ರಾಜಾರಾಂ, ವಿಜಯನಗರದ ಅಬ್ದುಲ್ಲ ಪಿಂಜಾರ ಆಯ್ಕೆಯಾಗಿದ್ದಾರೆ.

ಗುಬ್ಬಿ ವೀರಣ್ಣ ಪ್ರಶಸ್ತಿಗೆ ಚಿತ್ರದುರ್ಗದ ಕುಮಾರಸ್ವಾಮಿ, ಕೊಪ್ಪಳದ ಬಾಬಣ್ಣ ಕಲ್ಮನಿ ಆಯ್ಕೆಯಾಗಿದ್ದಾರೆ.

Exit mobile version