Site icon Vistara News

Karnataka Politics: ವಿಧಾನ ಪರಿಷತ್‌ ಸದಸ್ಯರಾಗಿ ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಪ್ರಮಾಣವಚನ ಸ್ವೀಕಾರ

Umashree MR Seetharam and Sudam Das

ಬೆಂಗಳೂರು: ವಿಧಾನ ಪರಿಷತ್‌ಗೆ (Karnataka Politics) ನೂತನವಾಗಿ ನಾಮ ನಿರ್ದೇಶನಗೊಂಡ ನಟಿ ಉಮಾಶ್ರೀ, ಎಂ.ಆರ್‌. ಸೀತಾರಾಂ ಮತ್ತು ಸುಧಾಮ್ ದಾಸ್ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿ ಮೂವರಿಗೂ ಶುಭ ಹಾರೈಸಿದರು.

ಕಲಾವಿದರ ಕೋಟಾದಡಿ ನಟಿ ಉಮಾಶ್ರೀ, ಶಿಕ್ಷಣ ಕ್ಷೇತ್ರದಲ್ಲಿ ಎಂ.ಆರ್‌.ಸೀತಾರಾಮ್‌ ಹಾಗೂ ಸಮಾಜ ಸೇವೆ ಕೋಟಾದಡಿ ಮಾಜಿ ಇ.ಡಿ. ಅಧಿಕಾರಿ ಸುಧಾಮ್‌ ದಾಸ್‌ ಅವರನ್ನು ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಗಿದೆ. ವಿಧಾನ ಸೌಧದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ‌ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್‌.ಕೆ.ಪಾಟೀಲ್‌, ಬೋಸರಾಜು ಸೇರಿ ಹಲವು ಶಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ | BJP Meeting : ಬಿ.ಎಲ್‌ ಸಂತೋಷ್‌ ಸಭೆಯಿಂದಲೂ ದೂರ ಉಳಿದ ಎಸ್‌ಟಿಎಸ್‌, ಹೆಬ್ಬಾರ್‌; ಅಚ್ಚರಿ ಮೂಡಿಸಿದ ವಿ ಸೋಮಣ್ಣ!

ಪರಿಷತ್‌ ಸದಸ್ಯರ ಆಯ್ಕೆಗೆ ವಿರೋಧ

ಕಾಂಗ್ರೆಸ್ ಪಕ್ಷದೊಳಗಿನ ಕೆಲವು ನಾಯಕರ ವಿರೋಧದ ನಡುವೆಯೂ ಉಮಾಶ್ರೀ, ಎಂ.ಆರ್‌. ಸೀತಾರಾಮ್, ಸುಧಾಮ್ ದಾಸ್ ಅವರ ಹೆಸರನ್ನು ವಿಧಾನ ಪರಿಷತ್​ಗೆ (Karnataka Politics) ನಾಮನಿರ್ದೇಶನ ಮಾಡಲಾಗಿತ್ತು. ಎಂ.ಆರ್‌.ಸೀತಾರಾಮ್‌ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರ ಬಗ್ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಲ್ಹೋಟ್‌ ಅವರು ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ನಂತರ ಕೈ ನಾಯಕರು ಆಕಾಂಕ್ಷಿಗಳನ್ನು ಸಂಪರ್ಕಿಸಿ ಅಸಮಾಧಾನ ಶಮನಗೊಳಿಸುವ ಯತ್ನ ಮಾಡಿದ್ದರು.

ಇದನ್ನೂ ಓದಿ | HD Kumaraswamy : ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ; ಐಸಿಯುನಿಂದ ವಾರ್ಡ್‌ಗೆ ಶಿಫ್ಟ್‌; ಡಿಸ್ಚಾರ್ಜ್‌ಗೆ ಕಂಡಿಷನ್‌!

ನಂತರ ವಿಧಾನ ಪರಿಷತ್‌ಗೆ ನಾಮ ನಿರ್ದೇಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದಲಿತ ನಾಯಕರು ಹಾಗೂ ಸಚಿವರಾದ ಡಾ. ಜಿ. ಪರಮೇಶ್ವರ್‌, ಕೆ.ಎಚ್.‌ ಮುನಿಯಪ್ಪ, ಆರ್.‌ ಬಿ. ತಿಮ್ಮಾಪುರ, ಎಚ್‌.ಸಿ. ಮಹದೇವಪ್ಪ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೇರವಾಗಿ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಜತೆಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಸುಧಾಮ್‌ ದಾಸ್ ಹೆಸರಿಗೆ ಕಾರ್ಯಕರ್ತರಿಂದಲೂ ಅಸಮಾಧಾನ ಕೇಳಿಬಂದಿತ್ತು. Who is Sudhamdas ಎಂದು ಕಾರ್ಯಕರ್ತರು ಪ್ರಶ್ನಿಸಿ ಅಸಮಾಧಾನ ಹೊರಹಾಕಿದ್ದರು. ವಿರೋಧದ ನಡುವೆ ಮೂವರನ್ನು ಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಗಿದೆ.

Exit mobile version