ವಿಜಯಪುರ: ಕಾಮಗಾರಿ ಚೆನ್ನಾಗಿ ಮಾಡಿದರೆ ಹೂಮಾಲೆ ಹಾಕುತ್ತೇನೆ, ಇಲ್ಲವೆಂದರೆ ನಿನಗೆ ಬೂಟಿನಿಂದ ಹೊಡೆಯತ್ತೇನೆ ಎಂದು ಕಾರ್ಯನಿರ್ವಾಹಕ ಅಭಿಯಂತರರಿಗೆ ಸಚಿವ ಉಮೇಶ್ ಕತ್ತಿ, ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ವೇಳೆ ಬೆದರಿಕೆ ಹಾಕಿದ್ದಾರೆ.
ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನ್ನವರ ಅವರೊಂದಿಗೆ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾಗ,ʼʼ ನವೆಂಬರ್, ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣ ಮಾಡುತ್ತೇವೆʼʼ ಎಂದು ಲೋಕೋಪಯೋಗಿ ಇಲಾಖೆ ಎಇಇ ಸಿ.ಬಿ. ಚಿಕ್ಕಲಗಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ, ಕಾರ್ಯನಿರ್ವಾಹಕ ಅಭಿಯಂತರ ಡಿಸೆಂಬರ್‌ಗೆ ಮುಗಿಸುತ್ತೇವೆ ಎನ್ನುತ್ತಿದ್ದಾರೆ, ನಾನು ಮಾರ್ಚ್ ತಿಂಗಳೊಳಗೆ ಮುಗಿಸಿ ಎಂದು ಹೇಳುತ್ತಿದ್ದೇನೆ. ಡಿಸೆಂಬರ್‌ಗೆ ಪೂರ್ಣ ಮಾಡಿದರೆ ನಾನೇ ಬಂದು ಹೂಮಾಲೆ ಹಾಕುತ್ತೇನೆ ಎಂದು ಇಲ್ಲಾವೆಂದರೆ ಬೂಟಿನಿಂದಲೇ ಹೊಡಿಯುವವನೂ ನಾನೇ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಸಿಎಂ ಬೊಮ್ಮಾಯಿ ಸ್ಥಾನಪಲ್ಲಟ ಆಗದು ಎನ್ನುವುದಕ್ಕೆ ಇಲ್ಲಿವೆ ಒಂದು ಡಜನ್ ಕಾರಣಗಳು!
ಮುಂದಿನ ಚುನಾವಣೆ ವೇಳೆ ರಾಜ್ಯ ಹಾಗೂ ರಾಷ್ಟ್ರ ನಾಯಕರು ಈ ಏರ್‌ಪೋರ್ಟ್‌ಗೆ ಬರಬೇಕೆಂಬ ಆಸೆಯಿದೆ
ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪ ಹೀಗೆ ವಯಸ್ಸಾದ ನಾಯಕರು ಇಲ್ಲಿನ ಏರ್‌ಪೋರ್ಟ್ ಮೂಲಕ ಬರಬೇಕು ಎಂದು ಹೇಳಿದರು.
ಎಲ್ಲರೂ ನೆಮ್ಮದಿಯಾಗಿ ರಾಜಕಾರಣ ಮಾಡೋಣ
ಸಿದ್ದರಾಮಣ್ಣೋರು ಜೈಲಿಗೆ ಹೋಗಿಲ್ಲ, ನಾನೂ ಜೈಲಿಗೆ ಹೋಗಿಲ್ಲ, ಹೋಗುವುದು ಬ್ಯಾಡ. ಜೈಲಿಗೆ ಹೋಗಿದ್ದು, ಬಿಟ್ಟದ್ದು ಅವರವರಿಗೆ ಗೊತ್ತು. ಎಲ್ಲರೂ ನೆಮ್ಮದಿಯಾಗಿ ರಾಜಕಾರಣ ಮಾಡೋಣ, ಒಟ್ಟಾರೆ ಕರ್ನಾಟಕ ಜನರ ಸೇವೆ ಮಾಡೋಣ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ಬಿಜೆಪಿ ನಾಯಕರು ಯಾರೂ ದೇಶಕ್ಕಾಗಿ ಜೈಲಿಗೆ ಹೋಗಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ನಿವೃತ್ತಿ ಹೊಂದಿದ್ದಾರೆ ಎಂಬುವುದು ನನ್ನ ಅನಿಸಿಕೆ. ಕಳೆದ 10 ವರ್ಷಗಳ ಹಿಂದೆ ಇದು ಕಡೆಯ ಚುನಾವಣೆ, ಮತ್ತೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದರು. ಮತ್ತೆ ಚುನಾವಣೆಗೆ ನಿಲ್ಲುತ್ತೇನೆಂದು ಹೇಳಿರುವ ಅವರ ಬಗ್ಗೆ ನನಗೆ ವಿಶೇಷ ಕಳಕಳಿ ಇದೆ. ಅವರಿಗೆ ವಯಸ್ಸಾಗಿದೆ ನಿವೃತ್ತಿ ಹೊಂದುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ 75 ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೀಪ ಆರುವಾಗ ಜೋರಾಗಿ ಉರಿಯುತ್ತದೆ. ಹಾಗೆ ಸಿದ್ದರಾಮಯ್ಯ ಮಾಡಬಾರದು, ಅವರು ಇನ್ನೂ 100 ವರ್ಷ ಬದುಕಲಿ ಬಾಳಲಿ ಎಂದು ನನ್ನ ಆಸೆ ಎಂದು ಹೇಳಿದರು.
ಇದನ್ನೂ ಓದಿ | National Flag | ಕೆಂಪು, ಬಿಳಿ, ಹಸಿರು ಎಂದ ಸಿದ್ದರಾಮಯ್ಯ ವಿರುದ್ಧ ಪೊಲೀಸ್ ಠಾಣೆಗೆ ದೂರು!