Site icon Vistara News

Karnataka election 2023: ಮಲ್ಲನಾಯಕನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 5 ಲಕ್ಷ ರೂಪಾಯಿ ವಶ

Karnataka election 2023 Undocumented Rs 5 lakh seized at Mallanayakanahalli check post

ವಿಜಯನಗರ: ದಾಖಲೆಯಿಲ್ಲದೆ (Undocumented) ಕಾರಿನಲ್ಲಿ (Car) ಸಾಗಿಸುತ್ತಿದ್ದ ಐದು ಲಕ್ಷ ರೂಪಾಯಿ ನಗದು ಹಣವನ್ನು ಕೊಟ್ಟೂರು ಪೊಲೀಸರು ವಶಪಡಿಸಿಕೊಂಡಿರುವ (seized) ಘಟನೆ ಕೂಡ್ಲಿಗಿಯ ಮಲ್ಲನಾಯಕನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಜರುಗಿದೆ.

ಕೂಡ್ಲಿಗಿಯಿಂದ ಕೊಟ್ಟೂರಿನತ್ತ ಕಾರಿನಲ್ಲಿ ಐದು ಲಕ್ಷ ರೂಪಾಯಿ ಹಣವನ್ನು ಒಯ್ಯಲಾಗುತ್ತಿತ್ತು, ಮಲ್ಲನಾಯಕನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಕೇಸರಿ ಬಣ್ಣದ ಹ್ಯಾಂಡ್ ಬ್ಯಾಗ್‌ನಲ್ಲಿ ಐದು ಲಕ್ಷ ಹಣ ಪತ್ತೆಯಾಗಿದೆ. ಆದರೆ, ಪರಿಶೀಲನೆ ವೇಳೆ ಸೂಕ್ತ ದಾಖಲೆ ತೋರಿಸದಿದ್ದಕ್ಕೆ ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Naga Chaitanya: ನಾಗ ಚೈತನ್ಯ ಅಭಿನಯದ ʻಕಸ್ಟಡಿʼ ಸಿನಿಮಾ ಟ್ರೈಲರ್‌ ಔಟ್‌

200 ರೂ., 500 ರೂ. ಹಾಗೂ 2,000 ರೂಪಾಯಿ ಮುಖ ಬೆಲೆಯ ಒಟ್ಟು ಐದು ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Exit mobile version