ವಿಜಯಪುರ: ಇಲ್ಲಿನ ಸಿಂದಗಿ ನಗರದ ಬ್ಯಾಕೋಡ ರಸ್ತೆಯ ಬಳಿಯಿರುವ ಕಸ ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಅಪರಿಚಿತರೊಬ್ಬರ ಶವ (Unidentified body found) ಪತ್ತೆಯಾಗಿದೆ. ಕೊಲೆ ಮಾಡಿ ತಂದು ಈ ಸ್ಥಳದಲ್ಲಿ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿ 30 ರಿಂದ 35 ವರ್ಷ ವಯಸ್ಸು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಸಿಂದಗಿ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ.
ಇದನ್ನೂ ಓದಿ | ISRO Spying Case | ನಂಬಿ ನಾರಾಯಣನ್ ವಿರುದ್ಧದ ಆರೋಪ ಸುಳ್ಳು, ಇದು ಜಾಗತಿಕ ಪಿತೂರಿ, ಕೇರಳ ಹೈಕೋರ್ಟ್‌ಗೆ ಸಿಬಿಐ ಮಾಹಿತಿ