Site icon Vistara News

Bike Accident | ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ; ಬೈಕ್‌ ಸವಾರ ಸ್ಥಳದಲ್ಲೇ ಸಾವು

ಯಲ್ಲಾಪುರ ಅಪಘಾತ

ಶಿರಸಿ: ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಘಟ್ಟದ ಬಳಿ ಶನಿವಾರ ಅಪಘಾತ (Bike Accident) ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.

ಉ.ಕ. ಜಿಲ್ಲೆಯ ಯಲ್ಲಾಪುರ ತಾಲೂಕು ಕಲ್ಲೇಶ್ವರ ಮೂಲದ ಗುರುಪ್ರಸಾದ ಗಾಂವ್ಕರ್ ಮೃತ ದುರ್ದೈವಿ. ಇವರು ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಘಟ್ಟದ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗುರುಪ್ರಸಾದ ಗಾಂವ್ಕರ್ ಅವರಿಗೆ ಸಾಹಿತ್ಯ ಅಭಿರುಚಿ ಇತ್ತು. ಅಲ್ಲದೆ, ಇವರು ಅನೇಕ ಕವಿತೆ-ಕಾವ್ಯಗಳನ್ನು ಬರೆಯುತ್ತಿದ್ದರು. ಸಿಂಧೂರ ಎಂಬ ಕಾವ್ಯನಾಮದಿಂದ ಕವಿತೆಗಳನ್ನು ಬರೆದು ಚಿರಪರಿಚಿತರಾಗಿದ್ದರು. ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Petrol Price | ವೈದ್ಯರ ಲೆಟರ್‌ ಟ್ರೀಟ್ಮೆಂಟ್‌ಗೆ ಕೇಂದ್ರ ಸ್ಪಂದನೆ; ಶಿರಸಿ ಪೆಟ್ರೋಲ್‌ ದರದಲ್ಲಿ ಭಾರಿ ಇಳಿಕೆ!

Exit mobile version