ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆ(UCC – Uniform Civil Code)ಗೆ ಪ್ರತಿಪಕ್ಷಗಳು ಆಕ್ಷೇಪ ಎತ್ತುತ್ತಿರುವ ಮಧ್ಯೆಯೇ ಯುಸಿಸಿ ಕುರಿತಾಗಿ ಜಾಗೃತಿ ಮೂಡಿಸುವಂತ ಕೆಲಸಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮುಂದಾಗಿದೆ. ಈ ಹಿನ್ನೆಲೆ ಭಾನುವಾರ ಮಲ್ಲೇಶ್ವರದ ಲೇಡೀಸ್ ಅಸೋಸಿಯೇಶನ್‌ನಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್, ಮಾಜಿ ಸಚಿವ ಸಿ ಎನ್ ಅಶ್ವತ್ಥ ನಾರಾಯಣ್, ಬಿಜೆಪಿ ನಾಯಕ ಎನ್ ರವಿಕುಮಾರ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಇದೆ ವೇಳೆ ಮಾತನಾಡಿದ ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ರಾಮ್ ಮಾಧವ್ ಅವರು ಈ ವೇಳೆ ಮಾತನಾಡಿ, ಯುಸಿಸಿ ಜಾರಿ ಆಗುವುದರಿಂದ ಆಗುವ ಅನುಕೂಲಗಳ ವಿವರಣೆ ನೀಡಿದರು. ದೇಶದ ಎಲ್ಲ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಲಿಂಗ ಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಆದ ದಂಪತಿ ವಿಚ್ಛೇದನ ಪಡೆದಾಗ ಪತ್ನಿ ಜೀವನಾಂಶಕ್ಕೆ ಅರ್ಹರಾಗುತ್ತಾರೆ. ಆದರೆ ಮುಸ್ಲಿಂ ಪದ್ಧತಿಯಲ್ಲಿ ಪತ್ನಿ ವಿಚ್ಛೇದನ ಪಡೆದರೆ ಜೀವನಾಂಶ ನೀಡುವ ಪದ್ಧತಿ ಇಲ್ಲ. ತ್ರಿವಳಿ ತಲಾಕ್ ಮೂಲಕ ಮುಸ್ಲಿಂ ಮಹಿಳೆಯರ ಭವಿಷ್ಯ ಅಯೋಮಯವಾಗಿದೆ. ಆದರೆ, ಯುಸಿಸಿ ಜಾರಿ ಆದರೆ ಇವೆಲ್ಲದಕ್ಕೂ ಪರಿಹಾರ ಸಿಗಲಿದೆ ಎಂದು ರಾಮ್ ಮಾಧವ್ ಅವರು ಹೇಳಿದರು.
ಏಕರೂಪ ನಾಗರಿಕ ಸಂಹತಿ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಮೂರು ಶಿಫಾರಸು ಮಾಡಿದೆ. ಆದರೆ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಸರ್ಕಾರ ಅದನ್ನು ಪರಿಗಣಿಸಲಿಲ್ಲ. ಯುಸಿಸಿ ಜಾರಿಯಿಂದ ದೇಶದಲ್ಲಿರುವ ಲಿಂಗ ಸಮಾನತೆ ಹೊರಟು ಹೋಗಲಿದೆ. ಹಾಗಾಗಿ, ಕೇಂದ್ರ ಸರ್ಕಾರವು ಯುಸಿಸಿ ಜಾರಿ ಸಂಬಂಧ ನಡೆಸುತ್ತಿರುವ ಪ್ರಯತ್ನವು ಮಾನವೀಯ ವಿಚಾರವೇ ಆಗಿದೆ ಎಂದು ರಾಮ್ ಮಾಧವ್ ಅವರು ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು- ಅಶ್ವತ್ಥ ನಾರಾಯಣ
ಯುಸಿಸಿ ಬಗ್ಗೆ ಜಾಗೃತಿ ಮೂಡಿಸಬೇಕು ಅಗತ್ಯವಿದೆ, ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಸ್ವಾತಂತ್ರ್ಯ ಬಂದು 75ವರ್ಷವಾಗಿದೆ. ಯುಸಿಸಿ ಜನರ ಧ್ವನಿಯಾಗಿರುವಂಥದ್ದಾಗಿದೆ. ಇದು ವಿಚ್ಚೇದನ, ಮದುವೆ, ಆಸ್ತಿ ಹಕ್ಕುಗಳನ್ನು ಕಾನೂನಾತ್ಮಕವಾಗಿ ತರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಶಾಸಕ ಅಶ್ವತ್ಥನಾರಾಯಣ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆಗೆ 75 ಲಕ್ಷ ಜನ ಪ್ರತಿಕ್ರಿಯೆ, ಜಾರಿ ಬಗ್ಗೆ ಅಂತಿಮ ತೀರ್ಮಾನ ಯಾವಾಗ?
ಕಾಂಗ್ರೆಸ್ ತುಷ್ಟೀಕರಣ ಪಕ್ಷವಾಗಿದೆ, ಅದು ಒಲೈಕೆ ಮಾಡುವ ಪಕ್ಷ ಎಂದು ಜನರಿಗೆ ಮನವರಿಕೆಯಾಗಿದೆ. ಯುಸಿಸಿ ಬಗ್ಗೆ ಪಕ್ಷವನ್ನು ಮೀರಿ ತಿಳುವಳಿಕೆ ಮಾಡುವಕೆಲಸವಾಗಬೇಕು. ಯಾರೂ ಕೂಡ ಅನ್ಯಾಯಕ್ಕೆ ಒಳಗಾಗದೇ ಇರಲು ಯುಸಿಸಿ ತರಲಾಗುತ್ತಿದೆ. ಇದು ಎಲ್ಲರಿಗೂ ಇರುವಂತಹ ನೀತಿಯಾಗಿದೆ ಎಂದು ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.