ಬೆಂಗಳೂರು: ಕರ್ನಾಟಕದ ರೈಲ್ವೆ ಯೋಜನೆಗಳಿಗಾಗಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ 7561 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಕೇಂದ್ರ ಬಜೆಟ್ (Union Budget 2023) ಬೆನ್ನಲ್ಲೇ ರೈಲ್ವೆ ಇಲಾಖೆಗೆ ದೊರೆತಿರುವ ಅನುದಾನ ಸೇರಿದಂತೆ ವಿವಿಧ ಮಾಹಿತಿಯನ್ನು ಅವರು ಗುರುವಾರ ಹಂಚಿಕೊಂಡಿದ್ದಾರೆ. ಅವರು ರೈಲ್ವೆ ಅಧಿಕಾರಿಗಳ ಜತೆ ಗುರುವಾರ ವಿಡಿಯೋ ಸಂವಾದ ನಡೆಸಿದರು. ರಾಜ್ಯಕ್ಕೆ ಹಂಚಿಕೆಯಾಗಿರುವ ಅನುದಾನದ ಪೈಕಿ, ರಾಜ್ಯದ 7 ರೈಲ್ವೆ ಮಾರ್ಗಗಳ ವಿದ್ಯುದೀಕರಣ ಅಭಿವೃದ್ಧಿ ಹಾಗೂ ಮಾರ್ಪಾಡು(Electrification), ಮಾರ್ಗಗಳ ಡಬ್ಲಿಂಗ್‌ಗೆ ಎಷ್ಟೆಲ್ಲ ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ಕುರಿತು ಇಲ್ಲಿದೆ ಮಾಹಿತಿ.
ರಾಜ್ಯದ ಡಬ್ಲಿಂಗ್ ಯೋಜನೆಗಳಿಗೆ ಅನುದಾನ
- ಗದಗ-ವಾಡಿ: 170 ಕೋಟಿ ರೂ.
- ಪೆನುಕೊಂಡ – ಧರ್ಮಾವರಂ: 120 ಕೋಟಿ ರೂ.
- ಬೈಯಪ್ಪನಹಳ್ಳಿ- ಹೊಸೂರು: 100 ಕೋಟಿ ರೂ.
- ಯಶವಂತಪುರ- ಚನ್ನಸಂದ್ರ: 85 ಕೋಟಿ ರೂ.
- ಲೋಂಡಾ-ಮಿರಜ್: 200 ಕೋಟಿ ರೂ.
- ಹುಬ್ಬಳ್ಳಿ-ಚಿಕ್ಕಜಾಜೂರ: 150 ಕೋಟಿ ರೂ.
- ಬೆಂಗಳೂರು ಕಂಟೋನ್ಮೆಂಟ್- ವೈಟ್‌ಫೀಲ್ಡ್ ಕ್ವಾಡ್ರುಪ್ಲಿಂಗ್: 250 ಕೋಟಿ ರೂ.
- ಹೊಸಪೇಟೆ- ತಿನೈಘಾಟ್ – ವಾಸ್ಕೋಡಗಾಮ: 400 ಕೋಟಿ ರೂ.
ರಾಜ್ಯದ ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಅನುದಾನ ಅನುದಾನ
- ಗದಗ – ಹೊಟಗಿ: 110 ಕೋಟಿ ರೂ.
- ಚಿಕ್ಕಬಾಣಾವರ – ಹುಬ್ಬಳ್ಳಿ : 128 ಕೋಟಿ ರೂ.
- ಬಿರೂರು – ತಾಳಗುಪ್ಪ: 56 ಕೋಟಿ
- ಹಾಸನ – ಮಂಗಳೂರು: 134 ಕೋಟಿ
- ಮಿರಾಜ್ – ಲೋಂಡಾ: 182 ಕೋಟಿ
- ಹೊಸಪೇಟೆ – ಹುಬ್ಬಳ್ಳಿ – ವಾಸ್ಕೋ ಡ ಗಾಮ: 20 ಕೋಟಿ
- ಚಿಕ್ಕಬಾಣಾವರ – ಹಾಸನ: 77 ಕೋಟಿ
ಇದನ್ನೂ ಓದಿ: Union Budget 2023: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಬಾರಿ 7561 ಕೋಟಿ ರೂ.! ಇದು ದಾಖಲೆಯ ಅನುದಾನ
ರಾಜ್ಯದ ಹೊಸ ರೈಲ್ವೆ ಮಾರ್ಗಗಳಿಗೆ ಅನುದಾನ
- ಗದಗ – ವಾಡಿ : 350 ಕೋಟಿ (150 ಕೋಟಿ ರಾಜ್ಯ ಸರ್ಕಾರ)
- ಗಿನಿಗೇರಾ – ರಾಯಚೂರು : 300 ಕೋಟಿ ರೂ.
- ತುಮಕೂರು – ದಾವಣಗೆರೆ (via ಚಿತ್ರದುರ್ಗ) : 420 ಕೋಟಿ (200 ಕೋಟಿ ರಾಜ್ಯ ಸರ್ಕಾರ)
- ತುಮಕೂರು – ರಾಯದುರ್ಗ (via ಕಲ್ಯಾಣದುರ್ಗ) : 350 ಕೋಟಿ
- ಬಾಗಲಕೋಟೆ – ಕುಡಚಿ : 360 ಕೋಟಿ (150 ಕೋಟಿ ರಾಜ್ಯ ಸರ್ಕಾರ)
- ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು : 150 ಕೋಟಿ
- ಬೆಳಗಾವಿ – ಧಾರವಾಡ (via ಕಿತ್ತೂರು) : 10 ಕೋಟಿ
- ಮರಿಕುಪ್ಪಂ – ಕುಪ್ಪಂ : 200 ಕೋಟಿ
- ಕಡೂರು – ಚಿಕ್ಕಮಗಳೂರು – ಹಾಸನ : 145 ಕೋಟಿ
- ಮಲಗೂರು – ಪಾಲಸಮುದ್ರಂ : 20 ಕೋಟಿ