Site icon Vistara News

Mahadayi Dispute: ಮಹದಾಯಿ ಬಿಕ್ಕಟ್ಟು ಶಮನಕ್ಕೆ ಕೇಂದ್ರ ದಿಟ್ಟ ಹೆಜ್ಜೆ, ಮಹದಾಯಿ ಪ್ರವಾಹ್‌ ರಚನೆಗೆ ಅಸ್ತು, ಏನು ಉಪಯೋಗ?

Government asks all states, UTs to make 6 years minimum age for Class 1 admission

Mahadayi Dispute

ನವದೆಹಲಿ/ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಮಧ್ಯೆ ಉಂಟಾಗಿರುವ ಜಲ ವಿವಾದ (Mahadayi Dispute) ಬಗೆಹರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮಹದಾಯಿ ಜಲ ಬಿಕ್ಕಟ್ಟು ನ್ಯಾಯಾಧಿಕರಣದ ತೀರ್ಪುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು, ರಾಜ್ಯಗಳ ಮಧ್ಯೆ ಸಮನ್ವಯ ಸಾಧಿಸಲು ʼಮಹದಾಯಿ ಪ್ರವಾಹ್‌ʼ (Mahadayi PRAWAH-Progressive River Authority for Welfare and Harmony) ರಚನೆಗೆ ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದೆ.

ಏನು ಉಪಯೋಗ?

ಕೇಂದ್ರದ ನಿರ್ಧಾರದ ಕುರಿತು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. “ಕೇಂದ್ರ ಸಂಪುಟ ಸಭೆಯು ಮಹದಾಯಿ ಪ್ರವಾಹ್‌ ರಚನೆಗೆ ಸಮ್ಮತಿ ಸೂಚಿಸಿದೆ. ಇದರಿಂದ ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪು, ತೀರ್ಮಾನಗಳ ಜಾರಿಯು ಸುಲಭವಾಗಲಿದೆ” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, “ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಮಧ್ಯೆ ಪರಸ್ಪರ ನಂಬಿಕೆ, ವಿಶ್ವಾಸ, ತಿಳಿವಳಿಕೆ ಮೂಡಿಸಲು ಕೂಡ ಮಹದಾಯಿ ಪ್ರವಾಹ್‌ ಮಹತ್ವದ ಪಾತ್ರ ನಿರ್ವಹಿಸಲಿದೆ. ಆಯಾ ರಾಜ್ಯಗಳು ನೀರನ್ನು ಸದುಪಯೋಗಪಡಿಸಿಕೊಂಡು ಸರ್ವಾಂಗೀಣ ಏಳಿಗೆಯತ್ತ ಸಾಗಲು ನೆರವಾಗಲಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಸಂತಸ

ಕೇಂದ್ರ ಸಂಪುಟ ಸಭೆಯ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ. “ಮಹದಾಯಿ ಪ್ರವಾಹ್‌ ರಚನೆಯ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನ್ಯಾಯಾಧಿಕರಣದ ತೀರ್ಪುಗಳ ಜಾರಿಗೆ ಇದು ಮಹತ್ವದ ಹೆಜ್ಜೆಯಾಗಿದ್ದು, ಕರ್ನಾಟಕದ ಯೋಜನೆ ಜಾರಿಗೂ ಅನುಕೂಲವಾಗಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Mahadayi Dispute | ಮಹದಾಯಿ ಕುರಿತು ಸ್ಪಷ್ಟನೆ ಕೇಳಿದ ಪರಿಸರ ಸಚಿವಾಲಯ, ಡಿಪಿಆರ್‌ಗೆ ಅಸ್ತು ಎಂದರೂ ರಾಜ್ಯಕ್ಕೆ ಕಂಟಕ

ಮಹದಾಯಿ ನದಿಯ ಉಪನದಿಗಳಾದ ಕಳಸಾ ಹಾಗೂ ಬಂಡೂರಿಗೆ ಅಣೆಕಟ್ಟು ನಿರ್ಮಿಸುವ ಮೂಲಕ ನದಿ ನೀರನ್ನು ತಿರುಗಿಸುವ ಕರ್ನಾಟಕದ ಯೋಜನೆಯ ಸಮಗ್ರ ವರದಿಗಳಿಗೆ ಈಗಾಗಲೇ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಆದರೆ, ಇದಕ್ಕೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಹಾಗಾಗಿ, ಬಿಕ್ಕಟ್ಟು ಮುಂದುವರಿಯುತ್ತಲೇ ಇದೆ.

Exit mobile version