ಬೀದರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ತಡರಾತ್ರಿ 2.30ರ ಹೊತ್ತಿಗೆ ಬೀದರ್ಗೆ ಆಗಮಿಸಿದ್ದಾರೆ. ರಾತ್ರಿ 10.45ಕ್ಕೆ ಅಮಿತ್ ಶಾ ಬೀದರ್ಗೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ತಡರಾತ್ರಿ ಅವರು, ವಾಯುಸೇನೆ ವಿಮಾನದ ಮೂಲಕ ಬೀದರ್ ಏರ್ಬೇಸ್ಗೆ ಬಂದು ಇಳಿದಿದ್ದಾರೆ. ಅಮಿತ್ ಶಾ (Amit Shah) ಅವರು ಫೆ.23ರಂದು ಬಳ್ಳಾರಿಗೆ ಆಗಮಿಸಿದ್ದರು. ಅದರ ಬೆನ್ನಲ್ಲೇ ಇಂದು (ಮಾರ್ಚ್ 3) ಬೀದರ್ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಅಮಿತ್ ಶಾ ಅವರು ಗುರುದ್ವಾರ ಶ್ರೀ ನಾನಕ್ ಝೀರಾ ಸಾಹೀಬ್ ಮತ್ತು ಉಗ್ರನರಸಿಂಹ ದೇವಸ್ಥಾನಕ್ಕೆ ಭೇಟಿಕೊಡಲಿದ್ದಾರೆ. 11.45ಕ್ಕೆ ಬೀದರ್ ಏರ್ಬೇಸ್ನಿಂದ ವಾಯುಸೇನೆ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣಕ್ಕೆ ಆಗಮಿಸಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಅನುಭವ ಮಂಟಪಕ್ಕೆ ತೆರಳಲಿದ್ದಾರೆ. ಇಲ್ಲಿ ಮಧ್ಯಾಹ್ನ 12.20 ಗಂಟೆಗೆ ವಿಜಯ ಸಂಕಲ್ಪ 3ನೇ ರಥ ಯಾತ್ರೆಯನ್ನು ಉದ್ಘಾಟಿಸುವರು. ನಂತರ ಥೇರು ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶ ಇದೆ. ಅಮಿತ್ ಶಾ ಅವರಿಗೆ ಈ ಎಲ್ಲ ಕಾರ್ಯಕ್ರಮಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಾಥ್ ಕೊಡಲಿದ್ದಾರೆ. ಸಂಜೆ 5.10ಕ್ಕೆ ದೇವನಹಳ್ಳಿಯಲ್ಲಿ ವಿಜಯ ಸಂಕಲ್ಪ 4ನೇ ರಥ ಯಾತ್ರೆಯನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೆಹಲಿಗೆ ಹಿಂತಿರುಗಲಿದ್ದಾರೆ.
ಇದನ್ನೂ ಓದಿ: Amit Shah: ಜೆಡಿಎಸ್ ಕುಟುಂಬದಲ್ಲಿ ಎಲ್ಲರೂ ರಾಜಕೀಯದಲ್ಲಿದ್ದಾರೆ; ಅವರ ಮನೆ ಯಾರು ನಡೆಸ್ತಾರೆ?: ಅಮಿತ್ ಶಾ ಗೇಲಿ