Amit Shah: ತಡರಾತ್ರಿ 2.30ಕ್ಕೆ ಬೀದರ್​ಗೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ; ಇಂದು ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ - Vistara News

ಕರ್ನಾಟಕ

Amit Shah: ತಡರಾತ್ರಿ 2.30ಕ್ಕೆ ಬೀದರ್​ಗೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ; ಇಂದು ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ

ಬೆಳಗ್ಗೆ 11 ಗಂಟೆಗೆ ಅಮಿತ್ ಶಾ ಅವರು ಗುರುದ್ವಾರ ಶ್ರೀ ನಾನಕ್ ಝೀರಾ ಸಾಹೀಬ್‌ ಮತ್ತು ಉಗ್ರನರಸಿಂಹ ದೇವಸ್ಥಾನಕ್ಕೆ ಭೇಟಿಕೊಡಲಿದ್ದಾರೆ. 11.45ಕ್ಕೆ ಬೀದರ್ ಏರ್​ಬೇಸ್​​ನಿಂದ ವಾಯುಸೇನೆ ಹೆಲಿಕಾಪ್ಟರ್​ ಮೂಲಕ ಬಸವಕಲ್ಯಾಣಕ್ಕೆ ತೆರಳಲಿದ್ದಾರೆ.

VISTARANEWS.COM


on

Union Home Minister Amit Shah reached to Bidar to inaugurate vijay sankalp abhiyan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೀದರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ತಡರಾತ್ರಿ 2.30ರ ಹೊತ್ತಿಗೆ ಬೀದರ್​ಗೆ ಆಗಮಿಸಿದ್ದಾರೆ. ರಾತ್ರಿ 10.45ಕ್ಕೆ ಅಮಿತ್​ ಶಾ ಬೀದರ್​ಗೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ತಡರಾತ್ರಿ ಅವರು, ವಾಯುಸೇನೆ ವಿಮಾನದ ಮೂಲಕ ಬೀದರ್ ಏರ್​ಬೇಸ್​ಗೆ ಬಂದು ಇಳಿದಿದ್ದಾರೆ. ಅಮಿತ್​ ಶಾ (Amit Shah) ಅವರು ಫೆ.23ರಂದು ಬಳ್ಳಾರಿಗೆ ಆಗಮಿಸಿದ್ದರು. ಅದರ ಬೆನ್ನಲ್ಲೇ ಇಂದು (ಮಾರ್ಚ್​ 3) ಬೀದರ್​ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಅಮಿತ್ ಶಾ ಅವರು ಗುರುದ್ವಾರ ಶ್ರೀ ನಾನಕ್ ಝೀರಾ ಸಾಹೀಬ್‌ ಮತ್ತು ಉಗ್ರನರಸಿಂಹ ದೇವಸ್ಥಾನಕ್ಕೆ ಭೇಟಿಕೊಡಲಿದ್ದಾರೆ. 11.45ಕ್ಕೆ ಬೀದರ್ ಏರ್​ಬೇಸ್​​ನಿಂದ ವಾಯುಸೇನೆ ಹೆಲಿಕಾಪ್ಟರ್​ ಮೂಲಕ ಬಸವಕಲ್ಯಾಣಕ್ಕೆ ಆಗಮಿಸಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಅನುಭವ ಮಂಟಪಕ್ಕೆ ತೆರಳಲಿದ್ದಾರೆ. ಇಲ್ಲಿ ಮಧ್ಯಾಹ್ನ 12.20 ಗಂಟೆಗೆ ವಿಜಯ ಸಂಕಲ್ಪ 3ನೇ ರಥ ಯಾತ್ರೆಯನ್ನು ಉದ್ಘಾಟಿಸುವರು. ನಂತರ ಥೇರು ಮೈದಾನದಲ್ಲಿ ಬೃಹತ್​ ಬಹಿರಂಗ ಸಮಾವೇಶ ಇದೆ. ಅಮಿತ್​ ಶಾ ಅವರಿಗೆ ಈ ಎಲ್ಲ ಕಾರ್ಯಕ್ರಮಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಾಥ್​ ಕೊಡಲಿದ್ದಾರೆ. ಸಂಜೆ 5.10ಕ್ಕೆ ದೇವನಹಳ್ಳಿಯಲ್ಲಿ ವಿಜಯ ಸಂಕಲ್ಪ 4ನೇ ರಥ ಯಾತ್ರೆಯನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೆಹಲಿಗೆ ಹಿಂತಿರುಗಲಿದ್ದಾರೆ.

ಇದನ್ನೂ ಓದಿ: Amit Shah: ಜೆಡಿಎಸ್‌ ಕುಟುಂಬದಲ್ಲಿ ಎಲ್ಲರೂ ರಾಜಕೀಯದಲ್ಲಿದ್ದಾರೆ; ಅವರ ಮನೆ ಯಾರು ನಡೆಸ್ತಾರೆ?: ಅಮಿತ್ ಶಾ ಗೇಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಯಾದಗಿರಿ

Yadgiri News: ರಾಜಾವೇಣುಗೋಪಾಲ ನಾಯಕಗೆ ಬೆಂಬಲಿಸಿ, ಗೆಲ್ಲಿಸಿ: ಸಚಿವ ದರ್ಶನಾಪುರ

Yadgiri News: ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಶುಕ್ರವಾರ ನಾಮಪತ್ರ ಸಲ್ಲಿಸಿದರು.

VISTARANEWS.COM


on

Surapura assembly constituency by election Congress candidate Rajavenugopal Nayaka filed nomination
Koo

ಯಾದಗಿರಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ (Guarantee Scheme) ಜತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಸುರಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ತರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ (Yadgiri News) ಮನವಿ ಮಾಡಿದರು.

ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಮುನ್ನ ಕಾಂಗ್ರೆಸ್ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ಸಚಿವರು, ದಿ. ರಾಜಾವೆಂಕಟಪ್ಪ ನಾಯಕ ಅವರು ಸುರಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರಾಜಾವೆಂಕಟಪ್ಪ ನಾಯಕ ಅವರ ಪುತ್ರ ರಾಜಾವೇಣುಗೋಪಾಲ ನಾಯಕ ಅವರು ಈಗ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಮತದಾರರು ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಿ ತರಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: Uttara Kannada News: ಬನವಾಸಿಯ ಐತಿಹಾಸಿಕ ಶ್ರೀ ಉಮಾಮಧುಕೇಶ್ವರ ದೇವರ ಮಹಾರಥೋತ್ಸವ

ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಕೇಂದ್ರ ಸರ್ಕಾರ ರಾಜ್ಯರ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ರೈತರ ಕಾಳಜಿ ತೊರುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಮಾತನಾಡಿ, ಕ್ಷೇತ್ರದ ಮತದಾರರು ನನ್ನ ಪಾಲಿನ ತಂದೆ, ತಾಯಿ ಇದ್ದಂತೆ. ಕ್ಷೇತ್ರದ ಜನರ ಮಗನಾಗಿ ಜನ ಸೇವೆ ಮಾಡುತ್ತೇನೆ. ತಂದೆ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಅವರ ಹಾದಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Diabetic Controle: ಕಾಡುವ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ತಂತ್ರ

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರನಾಯಕ ಮಾತನಾಡಿದರು.

ಭರ್ಜರಿ ರೋಡ್ ಶೋ

ನಂತರ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಅವರು ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು. ವಸಂತ ಮಹಲ್‌ನಿಂದ ಸುರಪುರ ತಹಸೀಲ್ದಾರ್‌ ಕಚೇರಿವರೆಗೆ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ರೋಡ್ ಶೋದಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ ನಂತರ ತಹಸೀಲ್ದಾರ್‌ ಕಚೇರಿಗೆ ತೆರಳಿ, ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

ಈ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ ಅನಪುರ, ರಾಜಾ ಕೃಷ್ಣಪ್ಪ ನಾಯಕ, ಕೆಪಿಸಿಸಿ ಕಾರ್ಯದರ್ಶಿ ವಿಠಲ್ ಯಾದವ್‌, ರಾಜಶೇಖರ ಪಾಟೀಲ್ ವಜ್ಜಲ್, ಚಂದ್ರಶೇಖರ ದಂಡಿನ್, ರವಿಚಂದ್ರ ಆಲ್ದಾಳ, ಗುಂಡಪ್ಪ ಸೊಲ್ಲಾಪೂರ ಕಕ್ಕೇರಾ, ಮಲ್ಲಣ್ಣ ಸಾಹುಕಾರ, ಶಂಕ್ರಣ್ಣ ವಣಕ್ಯಾಳ, ರಾಜಾ ಕುಮಾರನಾಯಕ, ಶಾಂತಗೌಡ ಚನ್ನಪಟ್ಟಣ, ಹಣಮಂತ್ರಾಯ ಮಕಾಶಿ, ಅಬ್ದುಲ್ ಗಫರ್ ನಗನೂರಿ, ದೊಡ್ಡದೇಸಾಯಿ ದೇವರಗೋನಾಲ್‌ ಸೇರಿದಂತೆ ಸಹಸ್ರಾರು ಕಾಯಕರ್ತರು ಇದ್ದರು.

Continue Reading

ಕ್ರೀಡೆ

Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್​ಸಿಬಿ

Royal Challenges Bangalore: ರಾಜಾನುಕುಂಟೆ ಸಮೀಪದ ಇಟ್ಟಗಲ್ಲಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ ಆರ್​ಸಿಬಿ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕೆಲಸ ಮಾಡಿದೆ. ಅಕ್ಟೋಬರ್ 2023 ರಲ್ಲಿ ಆರ್​ಸಿಬಿ ಈ ಯೋಜನೆ ಪ್ರಾರಂಭಿಸಿತ್ತು. ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಬೋರ್​ವೆಲ್​ಗಳನ್ನು 1000 ರಿಂದ 1500 ಅಡಿಗಳವರೆಗೆ ಕೊರೆಸಬೇಕಾಗಿದೆ. ಈ ಪ್ರದೇಶಗಳು ಕಾವೇರಿ ನದಿಯ ನೀರಿನ ಲಭ್ಯತೆಯನ್ನು ಹೊಂದಿಲ್ಲ. ಹೀಗಾಗಿ ಈ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ.

VISTARANEWS.COM


on

Royal Challengers Banaglore
Koo

ಬೆಂಗಳೂರು: ಇಂಡಿಯಾ ಕೇರ್ಸ್ ಫೌಂಡೇಶನ್​ನ ಇತ್ತೀಚಿನ ವರದಿಯ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challenges Bangalore) ಬೆಂಗಳೂರಿನ ಎರಡು ಪ್ರಮುಖ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಪೂರ್ಣಗೊಳಿಸಿದೆ, ಈ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ಮೂರನೇ ಕೆರೆ ಪಕ್ಕದಲ್ಲಿ ನಾಗರಿಕ ಸೌಲಭ್ಯಗಳನ್ನು ಸೇರಿಸಿದೆ.

ರಾಜಾನುಕುಂಟೆ ಸಮೀಪದ ಇಟ್ಟಗಲ್ಲಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ ಆರ್​ಸಿಬಿ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕೆಲಸ ಮಾಡಿದೆ. ಅಕ್ಟೋಬರ್ 2023 ರಲ್ಲಿ ಆರ್​ಸಿಬಿ ಈ ಯೋಜನೆ ಪ್ರಾರಂಭಿಸಿತ್ತು. ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಬೋರ್​ವೆಲ್​ಗಳನ್ನು 1000 ರಿಂದ 1500 ಅಡಿಗಳವರೆಗೆ ಕೊರೆಸಬೇಕಾಗಿದೆ. ಈ ಪ್ರದೇಶಗಳು ಕಾವೇರಿ ನದಿಯ ನೀರಿನ ಲಭ್ಯತೆಯನ್ನು ಹೊಂದಿಲ್ಲ. ಹೀಗಾಗಿ ಈ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ.

ವರದಿಯ ಪ್ರಕಾರ, ಇಟ್ಟಗಲ್ಲಪುರ ರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಿಂದ 1.20 ಲಕ್ಷ ಟನ್ ಹೂಳು ಮತ್ತು ಮರಳನ್ನು ತೆಗೆಯಲಾಗಿದೆ. ಇದನ್ನು ಕೆರೆಗಳಿಗೆ ಅಡ್ಡಲಾಗಿ ಕಟ್ಟೆಗಳು ಮತ್ತು ಮಾರ್ಗಗಳನ್ನು ನಿರ್ಮಿಸಲು ಬಳಸಲಾಗಿದೆ. 52 ರೈತರು ತಮ್ಮ ಹೊಲಗಳಿಗೆ ಮೇಲ್ಮಣ್ಣು ಬಳಸಲು ಮಣ್ಣನ್ನು ತೆಗೆದುಕೊಂಡಿದ್ದಾರೆ.

ಒಟ್ಟು ಒಂಬತ್ತು ಎಕರೆ ಕೆರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಕೊಳಗಳು ಮತ್ತು ಗದ್ದೆಗಳು ಸೃಷ್ಟಿಯಾಗಿವೆ. ಈ ವೈಶಿಷ್ಟ್ಯಗಳು ಸರೋವರಗಳಲ್ಲಿ ವಾಸಿಸುವ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಪ್ರಯೋಜನವನ್ನು ನೀಡುತ್ತಿವೆ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ೧೭ ಎಕರೆಗಳವರೆಗೆ ಹೆಚ್ಚಾಗಿದೆ.

ಇದನ್ನೂ ಓದಿ: IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

ಈ ಸರೋವರಗಳು ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗುವುದಲ್ಲದೆ, ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಬೆಂಬಲಿಸುತ್ತವೆ. ಇದು ಎರಡು ಸರೋವರಗಳ ಮೀನುಗಾರರು ಮತ್ತು ರೈತರಿಗೆ ಹೆಚ್ಚುವರಿ ಜೀವನೋಪಾಯದ ಅವಕಾಶಗಳನ್ನು ನೀಡುತ್ತದೆ. ಈಗ ಮೊದಲಿಗಿಂತ ಮೂರು ಪಟ್ಟು ಹೆಚ್ಚು ಮೀನು ಪಡೆಯಬಹುದು. ಪ್ರಸ್ತುತ ಕೃಷಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಿರುವ ರೈತರು ಈಗ ಈ ಪುನರುಜ್ಜೀವನಗೊಂಡ ಸರೋವರಗಳನ್ನು ಕೃಷಿ ಮತ್ತು ಇತರ ಉದ್ದೇಶಗಳಿಗಾಗಿ ಬಳಸಬಹುದು.

ಕಣ್ಣೂರು ಕರೆಯ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಗಳನ್ನು ನೀಡಲಾಗಿದೆ. ಎಲ್ಲಾ ಮೂರು ಸರೋವರಗಳಲ್ಲಿ ಜನಾಂಗೀಯ-ಔಷಧೀಯ ಸಸ್ಯಗಳ ಉದ್ಯಾನವನಗಳು, ಬಿದಿರು ಉದ್ಯಾನಗಳು ಮತ್ತು ಚಿಟ್ಟೆ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಏಕೆಂದರೆ ಈ ಉಪಕ್ರಮವು ಸರೋವರಗಳ ಜೀವವೈವಿಧ್ಯತೆಯನ್ನು ಸುಧಾರಿಸುವ ಮತ್ತು ಸುಸ್ಥಿರಗೊಳಿಸುವ ಗುರಿ ಹೊಂದಿದೆ, ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಶೈಕ್ಷಣಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ.

Continue Reading

ವೈರಲ್ ನ್ಯೂಸ್

Video Viral: ಬ್ಯಾಲೆಟ್‌ ಪೇಪರ್‌ ಕಳ್ಳ ಮತದಾನದ ರಹಸ್ಯ ಬಿಚ್ಚಿಟ್ಟ ಪರಮೇಶ್ವರ್;‌ ಕಾಂಗ್ರೆಸ್‌ EVM ಬೇಡ ಎನ್ನಲು ಇದೇ ಕಾರಣವೆಂದ ಜೆಡಿಎಸ್!

Video Viral: ತುಮಕೂರಿನಲ್ಲಿ ಏಪ್ರಿಲ್‌ 16ರಂದು ನಡೆದಿದ್ದ ಯಾದವ ಸಮುದಾಯದ ಸಭೆಯಲ್ಲಿ ಮಾತನಾಡಿದ್ದ ಡಾ. ಜಿ. ಪರಮೇಶ್ವರ್, ಇವಿಎಂ ಬರುವ ಮೊದಲು ಚುನಾವಣೆ ಹೇಗೆ ನಡೆಯುತ್ತಿತ್ತು ಎಂಬುದನ್ನು ವಿವರಿಸಿದ್ದರು. ಯಾದವ ಸಮುದಾಯ ತಮ್ಮ ಮೇಲೆ ಇಟ್ಟಿದ್ದ ಪ್ರೀತಿಯ ಬಗ್ಗೆ ಹೇಳುವ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿ ಈಗ ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ ಬ್ಯಾಲೆಟ್‌ ಪೇಪರ್‌ ಇದ್ದಾಗ ಒಬ್ರೋ ಇಬ್ರೋ ಕುಳಿತುಕೊಂಡು ಊರವರೆಲ್ಲರ ವೋಟು ಹಾಕುತ್ತಿದ್ದರು ಎಂದು ಹೇಳಿರುವ ವಿಡಿಯೊ ಸಖತ್‌ ವೈರಲ್‌ ಆಗಿದೆ.

VISTARANEWS.COM


on

Video Viral Parameshwara statement on ballot paper bogus voting
Koo

ಬೆಂಗಳೂರು/ತುಮಕೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ತುಮಕೂರಿನಲ್ಲಿ ನಡೆದ ಯಾದವ ಸಮುದಾಯದ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwara) ಅವರು ಈ ಹಿಂದಿನ ಬ್ಯಾಲೆಟ್‌ ಮತದಾನ (Ballot paper voting) ಹಾಗೂ ಈಗಿನ ಇವಿಎಂ ಮತದಾನದ (EVM Voting) ಬಗ್ಗೆ ಸ್ಮರಿಸುತ್ತಾ ಆಡಿದ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಈಡು ಮಾಡಿದ್ದಲ್ಲದೆ, ವೈರಲ್‌ (Video Viral) ಆಗಿದೆ. ಜತೆಗೆ, ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. “ಈ ಹಿಂದೆ ಬ್ಯಾಲೆಟ್‌ ಪೇಪರ್‌ ಇದ್ದಾಗ ಒಬ್ರೋ ಇಬ್ರೋ ಕುಳಿತುಕೊಂಡು ಊರವರೆಲ್ಲರ ವೋಟು ಹಾಕುತ್ತಿದ್ದರು” ಎಂಬ ಪರಮೇಶ್ವರ್‌ ಹೇಳಿಕೆ ಈಗ ಸಖತ್‌ ವೈರಲ್‌ ಆಗಿದೆ. ಈ ವಿಡಿಯೊವನ್ನು ಜೆಡಿಎಸ್‌ ರಾಜ್ಯ ಘಟಕವು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿರುವುದು ಇದೇ ಕಾರಣಕ್ಕೆ ಎಂದು ಕಿಡಿಕಾರಿದೆ.

ವೈರಲ್‌ ಆಯ್ತು ಗೃಹ ಸಚಿವರ ಹೇಳಿಕೆ!

ತುಮಕೂರಿನಲ್ಲಿ ಏಪ್ರಿಲ್‌ 16ರಂದು ನಡೆದಿದ್ದ ಯಾದವ ಸಮುದಾಯದ ಸಭೆಯಲ್ಲಿ ಮಾತನಾಡಿದ್ದ ಡಾ. ಜಿ. ಪರಮೇಶ್ವರ್, ಇವಿಎಂ ಬರುವ ಮೊದಲು ಚುನಾವಣೆ ಹೇಗೆ ನಡೆಯುತ್ತಿತ್ತು ಎಂಬುದನ್ನು ವಿವರಿಸಿದ್ದರು. ಯಾದವ ಸಮುದಾಯ ತಮ್ಮ ಮೇಲೆ ಇಟ್ಟಿದ್ದ ಪ್ರೀತಿಯ ಬಗ್ಗೆ ಹೇಳುವ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿ ಈಗ ವಿವಾದಕ್ಕೆ ಸಿಲುಕಿದ್ದಾರೆ.

ಪರಮೇಶ್ವರ್‌ ಹೇಳಿದ್ದೇನು?

ಮೊದಲೆಲ್ಲ ಮತದಾನಕ್ಕಾಗಿ ಎಲ್ಲವೂ ಒತ್ತೋದು. ಈ ಇವಿಎಂ ಇರಲಿಲ್ಲ. ಅವಾಗ ಒಬ್ಬರೋ ಇಬ್ಬರೋ ಸೇರಿಕೊಂಡು ಒತ್ತಿಬಿಡ್ರೋ ಅತ್ಲಾಗೆ ಅನ್ನೋರು. ಅನೇಕ ಸಂದರ್ಭದಲ್ಲಿ ನಾನು ಅದನ್ನು ಜ್ಞಾಪಿಸಿಕೊಳ್ಳುತ್ತೇನೆ. ನಮ್ಮ ಮಧುಚಂದ್ರ ಇವಾಗಲೂ ಇದ್ದಾನೆ. ನಮ್ಮ ಹಟ್ಟಿ ಒಳಗೆ ಒಬ್ರೋ ಇಬ್ರೋ ಕುಳಿತುಕೊಂಡು ಮತಕ್ಕೆ ಸಂಬಂಧಿಸಿ ಸೀಲ್‌ ಒತ್ತಿ ಅಂತಾ ಕಳುಹಿಸೋರು. ಇವತ್ತಿಗೂ ಸಹ ಯಾದವ ಸಮುದಾಯದವರು ನನ್ನನ್ನು ಕರೆಯೋದು ನಮ್ಮಯಪ್ಪ ಅಂತಲೇ. ಅದಕ್ಕಾಗಿ ನಾನು ಯಾದವ ಸಮುದಾಯದ ಖುಣ ತೀರಿಸುವ ಕೆಲಸವನ್ನು ಮಾಡಬೇಕಿದೆ. ಆ ಕೆಲಸವನ್ನು ನಾನು ಮಾಡಿಯೇ ತೀರುತ್ತೇನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ಸಖತ್‌ ವೈರಲ್‌ ಆಗಿದೆ.

ಕಾಂಗ್ರೆಸ್‌ ಗೆಲುವಿನ ಫಾರ್ಮುಲಾ ಈ ಕಳ್ಳವೋಟು; ಜೆಡಿಎಸ್‌ ಕಿಡಿ

ಈ ಬಗ್ಗೆ ಜೆಡಿಎಸ್‌ ರಾಜ್ಯ ಘಟಕವು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದೆ. ಡಾ. ಜಿ. ಪರಮೇಶ್ವರ್‌ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೊವನ್ನು ಸಹ ಅಪ್ಲೋಡ್‌ ಮಾಡಿದೆ. ಕಾಂಗ್ರೆಸ್‌ ಗೆಲುವಿನ ಫಾರ್ಮೂಲಾದ ಸೀಕ್ರೆಟ್‌ ಇದೇ ಆಗಿದೆ ಎಂದು ಕಿಡಿಕಾರಿದೆ. ಅಂದಹಾಗೆ ಇದನ್ನು ನಾವು ಹೇಳುತ್ತಿರುವುದಲ್ಲ, ಸ್ವತಃ ರಾಜ್ಯದ ಗೃಹ ಮಂತ್ರಿ ಪರಮೇಶ್ವರ್‌ ಅವರು ನೀಡಿರುವ ಹೇಳಿಕೆ ಇದಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: Neha Murder Case: ಕಾಂಗ್ರೆಸ್‌ನಿಂದ ಜಿಹಾದಿ ಕರ್ನಾಟಕ ಸೃಷ್ಟಿ, ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಆರ್. ಅಶೋಕ್‌ ಗುಡುಗು

ಜೆಡಿಎಸ್‌ ಪೋಸ್ಟ್‌ನಲ್ಲೇನಿದೆ?

“ಕಳ್ಳ ವೋಟು was the secret Winning Formula of @INCIndia!” ಇದನ್ನು ನಾವು ಹೇಳಿದಲ್ಲ, ಸ್ವತಃ ನಮ್ಮ ರಾಜ್ಯದ ಗೃಹಮಂತ್ರಿಗಳಾದ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. ಇದು ಅವರು ಬಯಲು ಮಾಡಿರುವ ಸತ್ಯ. ಈ ಹೇಳಿಕೆಯು ಕಾಂಗ್ರೆಸ್‌ ಪಕ್ಷದ ಅಸಲಿ ಮುಖವನ್ನು ಬಯಲು ಮಾಡಿದೆ.

ಇವಿಎಂ ಬರುವ ಮುಂಚೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದವರು ಒಬ್ಬರೋ ಇಬ್ಬರನ್ನೋ ಕೂರಿಸಿ ಕಳ್ಳ ಮತದಾನ ಮಾಡಿಸಿಕೊಂಡು, ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತಿತ್ತು. ಈ ಸತ್ಯವನ್ನು ಸಚಿವರೇ ಒಪ್ಪಿಕೊಂಡಿದ್ದಾರೆ.

ಇವಿಎಂ ಬದಲು ಮರಳಿ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿರುವುದು ಇದೇ ಕಾರಣಕ್ಕೆ!!” ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ.

Continue Reading

ಕರ್ನಾಟಕ

‌Assault Case: ಮೋದಿ ಹಾಡು ಬರೆದ ಯುವಕನ ಮೇಲೆ ಹಲ್ಲೆ; ಐವರ ವಿರುದ್ಧ ಎಫ್ಐಆರ್

‌Assault Case: ಮೈಸೂರಿನ ಸರ್ಕಾರಿ ಗೆಸ್ಟ್‌ ಹೌಸ್‌ ಬಳಿ ಶುಕ್ರವಾರ ಮಧ್ಯಾಹ್ನ ಲಕ್ಷ್ಮಿನಾರಾಯಣ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿತ್ತು. ಮೋದಿ ಹಾಡು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಯುವಕನನ್ನು ಥಳಿಸಲಾಗಿತ್ತು. ಈ ಸಂಬಂಧ ಐವರ ವಿರುದ್ಧ ಕೇಸ್‌ ದಾಖಲಾಗಿದೆ.

VISTARANEWS.COM


on

‌Assault Case
Koo

ಮೈಸೂರು: ಮೋದಿ ಹಾಡು ಬಿಡುಗಡೆ ಮಾಡಿದ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ (‌Assault Case) ಸಂಬಂಧಿಸಿ ನಗರದ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಲೀಂ, ಜಾವೀದ್, ಪಾಷಾ ಸೇರಿ ಐವರ ಮೇಲೆ ಎಫ್ಐಆರ್ ದಾಖಲಾಗಿದೆ. ಹಳ್ಳಿಕೆರೆಹುಂಡಿ ಗ್ರಾಮದ ಲಕ್ಷ್ಮೀನಾರಾಯಣ್ ಎಂಬ ಯುವಕನ ಮೇಲೆ ಮೈಸೂರಿನ ಸರ್ಕಾರಿ ಗೆಸ್ಟ್‌ ಹೌಸ್‌ ಬಳಿ ಶುಕ್ರವಾರ ಮಧ್ಯಾಹ್ನ ಹಲ್ಲೆ ನಡೆದಿತ್ತು.

ಮೂರನೇ ಬಾರಿ ಮೋದಿ ಅಧಿಕಾರಕ್ಕೆ ಏಕೆ ಬರಬೇಕು ಎಂದು ಯುವಕ ಹಾಡು ರಚಿಸಿದ್ದ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಸಾರ್ವಜನಿಕವಾಗಿ ವಿಡಿಯೊ ನೋಡುವಂತೆ ಮನವಿ ಮಾಡುತ್ತಿದ್ದ.
ಮೈಸೂರಿನ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ವಿಡಿಯೊ ನೋಡುವಂತೆ ಹೇಳಿದ್ದ. ನಂತರ ಆತನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿತ್ತು. ಇದೀಗ ಗಾಯಾಳು ಲಕ್ಷ್ಮೀನಾರಾಯಣ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಪಾಕ್‌ ಪರ ಘೋಷಣೆ ಕೂಗಲು ಒತ್ತಾಯ

ಪ್ರಧಾನಿ ಮೋದಿ ಕುರಿತ ಹಾಡು ಬಿಡುಗಡೆ ಮಾಡಿದ್ದಕ್ಕೆ ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಹಿಂದು ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿತ್ತು. ಇದೇ ವೇಳೆ ಪಾಕ್‌ ಪರ ಮತ್ತು ಅಲ್ಲಾಹು ಅಕ್ಬರ್‌ ಎಂದು ಪರ ಘೋಷಣೆ (Pro Pak Slogan) ಕೂಗುವಂತೆ ಯುವಕನಿಗೆ ಒತ್ತಾಯ ಮಾಡಲಾಗಿತ್ತು.

ಮೋದಿ ಹಾಡು ರಿಲೀಸ್‌ ಮಾಡಿದ್ದೀಯ, ನಿನ್ನ ಸಾಯಿಸುತ್ತೇವೆ ಎಂದು ಅಪರಿಚಿತ ಮುಸ್ಲಿಂ ಯುವಕರ ಗುಂಪು, ಹಿಂದು ಯುವಕನ ಬಟ್ಟೆ ಹರಿದು ಹಲ್ಲೆ ನಡೆಸಿ ಪರಾರಿಯಾಗಿತ್ತು. ಹಲ್ಲೆ ವೇಳೆ ಪಾಕಿಸ್ತಾನ ಹಾಗೂ ಅಲ್ಲಾಹ್‌ ಪರ ಘೋಷಣೆ ಕೂಗುವಂತೆ ಯುವಕನಿಗೆ ಒತ್ತಾಯ ಮಾಡಿದ್ದರು. ನಂತರ ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಬಗ್ಗೆ ವಿಡಿಯೊ ಮೂಲಕ ಲಕ್ಷ್ಮಿನಾರಾಯಣ್ ಮಾಹಿತಿ ನೀಡಿದ್ದ.

ಇದನ್ನೂ ಓದಿ | Karnataka Weather : ಕೊಪ್ಪಳದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು; ಹೊತ್ತಿ ಉರಿದ ತೆಂಗಿನ ಮರ, ಧರೆಗುರುಳಿದ ಮರಗಳು, ವಿದ್ಯುತ್‌ ಕಂಬ

ಘಟನೆ ಬಗ್ಗೆ ಗಾಯಾಳು ಲಕ್ಷ್ಮೀನಾರಾಯಣ್ ಪ್ರತಿಕ್ರಿಯಿಸಿ, ನಾನು ಕಳೆದ ವಾರ ಮೋದಿ ಸಾಂಗ್‌ ರಿಲೀಸ್‌ ಮಾಡಿದ್ದೆ. ಪರಿಚಯಸ್ಥರ ಬಳಿ ನಮ್ಮ ಯುಟ್ಯೂಟ್‌ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡಿಸುತ್ತಿದ್ದೆ. ಸರ್ಕಾರಿ ಗೆಸ್ಟ್‌ ಹೌಸ್‌ ಬಳಿ ಮುಸ್ಲಿಂ ವ್ಯಕ್ತಿಯೊಬ್ಬರು ಬಂದರು. ಅವರು ಮುಸ್ಲಿಂ ಎಂದು ನನಗೆ ಗೊತ್ತಿರಲಿಲ್ಲ. ನಂತರ ಆ ವ್ಯಕ್ತಿ ವಿಡಿಯೊ ನೋಡಿದ. ನಂತರ ನನ್ನನ್ನು ಒಳಗೆ ಕರೆದುಕೊಂಡು ಹೋಗಿ, ಮೋದಿ ಬಗ್ಗೆ ಸಾಂಗ್‌ ಮಾಡಿದ್ದೀಯಾ, ನಿನ್ನ ಇಲ್ಲೇ ಕೊಲ್ಲುತ್ತೇವೆ ಎಂದು ಸಹಚರರ ಜತೆ ಸೇರಿ ಹಲ್ಲೆ ಮಾಡಿದರು. ನನ್ನ ಕೈಯಲ್ಲಿ ಇದ್ದ ಶ್ರೀರಾಮನ ಫೋಟೊ, ಧ್ವಜವನ್ನು ಕಿತ್ತು ಬಿಸಾಡಿದರು. ನಂತರ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಮೇಲೆ ಬಿಯರ್‌ ಎರಚಿ, ಮೂತ್ರ ವಿಸರ್ಜನೆ ಮಾಡಿ, ಸಿಗರೇಟ್‌ನಿಂದ ಸುಟ್ಟು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Continue Reading
Advertisement
Surapura assembly constituency by election Congress candidate Rajavenugopal Nayaka filed nomination
ಯಾದಗಿರಿ12 mins ago

Yadgiri News: ರಾಜಾವೇಣುಗೋಪಾಲ ನಾಯಕಗೆ ಬೆಂಬಲಿಸಿ, ಗೆಲ್ಲಿಸಿ: ಸಚಿವ ದರ್ಶನಾಪುರ

Royal Challengers Banaglore
ಕ್ರೀಡೆ16 mins ago

Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್​ಸಿಬಿ

Video Viral Parameshwara statement on ballot paper bogus voting
ವೈರಲ್ ನ್ಯೂಸ್18 mins ago

Video Viral: ಬ್ಯಾಲೆಟ್‌ ಪೇಪರ್‌ ಕಳ್ಳ ಮತದಾನದ ರಹಸ್ಯ ಬಿಚ್ಚಿಟ್ಟ ಪರಮೇಶ್ವರ್;‌ ಕಾಂಗ್ರೆಸ್‌ EVM ಬೇಡ ಎನ್ನಲು ಇದೇ ಕಾರಣವೆಂದ ಜೆಡಿಎಸ್!

Money Guide
ಮನಿ-ಗೈಡ್42 mins ago

Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

‌Assault Case
ಕರ್ನಾಟಕ42 mins ago

‌Assault Case: ಮೋದಿ ಹಾಡು ಬರೆದ ಯುವಕನ ಮೇಲೆ ಹಲ್ಲೆ; ಐವರ ವಿರುದ್ಧ ಎಫ್ಐಆರ್

Char Dham Yatra 2024
Latest56 mins ago

Char Dham Yatra 2024: ಈ ಬೇಸಿಗೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧರಾಗಿ! ನೋಂದಣಿ ಮಾಹಿತಿ ಇಲ್ಲಿದೆ

Diabetic Controle
ಲೈಫ್‌ಸ್ಟೈಲ್1 hour ago

Diabetic Controle: ಕಾಡುವ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ತಂತ್ರ

Banned Films
ಸಿನಿಮಾ1 hour ago

Banned Film: ಈ 9 ಹಾಲಿವುಡ್ ಚಿತ್ರಗಳು ಭಾರತದಲ್ಲಿ ಬ್ಯಾನ್!

Workers protest
ವಿದೇಶ1 hour ago

Workers protest: ಇಸ್ರೇಲ್​ ಜತೆಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ್ದ ಗೂಗಲ್​​ನ 28​ ಉದ್ಯೋಗಿಗಳ ವಜಾ

Cardiac Arrest
ಲೈಫ್‌ಸ್ಟೈಲ್1 hour ago

Cardiac Arrest: ಮಹಿಳೆಯರೇ ಹುಷಾರು; ನೀವು ಮಾಡುವ ಈ ತಪ್ಪುಗಳೇ ಹೃದಯಾಘಾತಕ್ಕೆಕಾರಣ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ5 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ15 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌