Site icon Vistara News

ESI Hospitals | ಇಎಸ್‌ಐ ಆಸ್ಪತ್ರೆಗಳಿಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಭೇಟಿ, ಕಾರ್ಯವೈಖರಿ ಪರಿಶೀಲನೆ

ESI Hospitals

ಬೆಂಗಳೂರು: ರಾಜ್ಯದ ವಿವಿಧ ಇಎಸ್‌ಐ ಆಸ್ಪತ್ರೆಗಳಿಗೆ ಕೇಂದ್ರ ಕಾರ್ಮಿಕ, ಉದ್ಯೋಗ, ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಸಚಿವ ಭೂಪೇಂದ್ರ ಯಾದವ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ತುಮಕೂರಿನಲ್ಲಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಸೂಚನೆ ನೀಡಿದ್ದಾರೆ.

ರಾಜ್ಯ ಪ್ರವಾಸ ಕೈಗೊಂಡಿದ್ದ ಸಚಿವರು, ಹಾರೋಹಳ್ಳಿ, ನರಸಾಪುರ, ದೊಮ್ಮಸಂದ್ರ ಮತ್ತು ದೊಡ್ಡಬಳ್ಳಾಪುರ ಇಎಸ್‌ಐ ಆಸ್ಪತ್ರೆಗಳ ಕಾರ್ಯವೈಖರಿ ಪರಾಮರ್ಶಿಸಿದ ಬಳಿಕ, ಅಧಿಕಾರಿಗಳಿಗೆ ತುಮಕೂರಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಸೂಚಿಸಿದರು. ಈ ಮೂಲಕ ಶ್ರಮಿಕ ವರ್ಗಕ್ಕೆ ಸಂತಸದ ಸುದ್ದಿ ನೀಡಿದರು.

ಇದನ್ನೂ ಓದಿ | Voter Data | ಸರ್ಕಾರದ ವಿರುದ್ಧ ಕಾಂಗ್ರೆಸ್‌ ಜತೆಗೆ ಆಪ್‌, ಎಸ್‌ಡಿಪಿಐನಿಂದಲೂ ವಾಗ್ದಾಳಿ; ಚುನಾವಣಾ ಆಯೋಗಕ್ಕೆ ದೂರು

ರಾಜ್ಯದ ಬೇಡಿಕೆಗಳನ್ನು ಮುಂದಿಟ್ಟ ಸಚಿವ ಶಿವರಾಂ ಹೆಬ್ಬಾರ್
ಇದೇ ವೇಳೆ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 30 ಹಾಸಿಗೆಗಳ ಐಎಸ್‌ಐ ಆಸ್ಪತ್ರೆಗಳನ್ನು ಆರಂಭಿಸಬೇಕು ಮತ್ತು ಈ ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗಗಳು ಇರಬೇಕು. ಪ್ರಸ್ತುತ ರಾಜ್ಯದಲ್ಲಿ ಇರುವ 7 ಇಎಸ್‌ಐ ಆಸ್ಪತ್ರೆಗಳಲ್ಲಿ ಎಂ.ಐ.ಸಿ.ಯು ಘಟಕಗಳನ್ನು ಸ್ಥಾಪಿಸಬೇಕು ಮತ್ತು ರಾಜ್ಯದ ಎಲ್ಲೆಡೆಗಳಲ್ಲಿ ಇಎಸ್‌ಐ ಔಷಧಾಲಯಗಳನ್ನು ಆರಂಭಿಸಬೇಕು, ರಾಜ್ಯದ ಕೆಲವೇ ಕಡೆಗಳಲ್ಲಿ ಇರುವ ಔದ್ಯೋಗಿಕ ರೋಗ ಕೇಂದ್ರಗಳನ್ನು ಎಲ್ಲೆಡೆ ಆರಂಭಿಸಬೇಕು ಎಂದು ಮನವಿ ಮಾಡಿದರು.

ಇಎಸ್‌ಐ ಸೇವೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಇಎಸ್‌ಐಸಿಗಳಲ್ಲಿ ರಾಜ್ಯದ ಪ್ರತಿನಿಧಿಗಳೂ ಇರಬೇಕು ಎಂದು ಪ್ರತಿಪಾದಿಸಿದ ರಾಜ್ಯ ಸಚಿವರು, ಇದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆ ಹೆಚ್ಚಲಿದೆ ಎಂದು ಎಂದು ತಿಳಿಸಿದರು.

ಇದನ್ನೂ ಓದಿ | JDS Pancharatna | ಶಾಲೆಯ ಕೊಠಡಿ ಕಟ್ಟಿಸಿಕೊಡಿ ಸಾರ್‌; ರಸ್ತೆ ಮಧ್ಯೆಯೇ ಎಚ್‌ಡಿಕೆ ಅಡ್ಡಗಟ್ಟಿ ಮಕ್ಕಳ ಮನವಿ

ಪ್ರಸಕ್ತ ಸಾಲಿನಲ್ಲಿ ಯೋಜನೆಗಳ ಅನುಷ್ಠಾನ ಯೋಜನೆ ಜಾರಿಗೆ 200 ಕೋಟಿ ರೂಪಾಯಿಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವ ಯಾದವ್‌ರಲ್ಲಿ ಮನವಿ ಮಾಡಿದ ಸಚಿವ ಶಿವರಾಂ ಹೆಬ್ಬಾರ್, ರಾಜ್ಯದಲ್ಲಿ ಶ್ರಮಿಕರ ಸಂಕ್ಷೇಮಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.

ಕೇಂದ್ರ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಆರತಿ ಅಹುಜಾ, ರಾಜ್ಯ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್, ಇಲಾಖೆ ಆಯುಕ್ತ ಅಕ್ರಂ ಪಾಷ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್, ಇಎಸ್‌ಐ ಆಸ್ಪತ್ರೆ ಪ್ರಾದೇಶಿಕ ನಿರ್ದೇಶಕ ಸಾಹು, ಇಎಸ್‌ಐ ನಿರ್ದೇಶಕ ರವಿಕುಮಾರ್, ರಾಜಾಜಿನಗರದ ಡೀನ್, ರಾಜ್ಯ ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಸೇರಿ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ ಸರ್ಕಾರದ ಬಗ್ಗೆ ಮೆಚ್ಚುಗೆ
ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್, ಉಡುಪಿ ಜಿಲ್ಲೆಯಲ್ಲಿ ಐಎಸ್‌ಐ ಆಸ್ಪತ್ರೆ ಘೋಷಣೆ ಆದ ಎರಡು ತಿಂಗಳಲ್ಲಿಯೇ ಸ್ಥಳ ಗುರ್ತಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಟಿಕೆಟ್‌ ಆಕಾಂಕ್ಷಿಗಳಿಗೆ ಭಾಷಣದ ಪ್ರಾರಂಭದಲ್ಲೇ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ

Exit mobile version