ನವದೆಹಲಿ: ಎನ್‌ಡಿಎ ಸರ್ಕಾರ ನವಭಾರತ ನಿರ್ಮಾಣಕ್ಕೆ ಪ್ರಸ್ತುತದಲ್ಲಿ ಅತ್ಯುತ್ತಮ ಬಜೆಟ್ ಸಮರ್ಪಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತದ ಆರ್ಥಿಕ ಪ್ರಗತಿ, ಸಾಮರ್ಥ್ಯದ ಜತೆಗೆ ಯುವಜನತೆ, ಮಹಿಳೆಯರು ಮತ್ತು ರೈತರ ಅಭಿವೃದ್ಧಿಯ ಬದ್ಧತೆಯನ್ನು ಈ ಬಜೆಟ್ ಸಾಬೀತುಪಡಿಸಿದೆ ಎಂದು ಪ್ರತಿಪಾದಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಬಜೆಟ್ ವಿಶೇಷವಾಗಿ ಯುವ ಜನರಲ್ಲಿ ವಿಶ್ವಾಸವನ್ನು ತುಂಬುತ್ತದೆ ಎಂದ ಅವರು, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಮಧ್ಯಮ, ಕೆಳ ವರ್ಗ ಮತ್ತು ಬಡ ಜನರಿಗೆ ಪ್ರಯೋಜನಕಾರಿ ಹಾಗೂ ವಿಶ್ವದ ಅತ್ಯುತ್ತಮ ಯೋಜನೆಗಳಲ್ಲಿ ಇದು ಒಂದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: R Ashok: ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ, ಸುಭದ್ರ ಬಜೆಟ್: ಆರ್. ಅಶೋಕ್ ಶ್ಲಾಘನೆ
ಪ್ರಸ್ತುತ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಮೂಲಕ ವಿಕಸಿತ ಭಾರತಕ್ಕೆ ಮಾರ್ಗ ತೋರಿದ್ದಾರೆ ಎಂದು ತಿಳಿಸಿದರು.
ಎಂಎನ್‌ಆರ್‌ಇ ವಲಯದ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ 1.28 ಕೋಟಿಗೂ ಹೆಚ್ಚು ನೋಂದಣಿ ಮತ್ತು 14 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಮೇಲ್ಛಾವಣಿ ಸೌರ ಫಲಕ ಅಳವಡಿಸಲು ಅನುಕೂಲ ಆಗುವಂತೆ ಈ ಯೋಜನೆ ಪ್ರಾರಂಭಿಸಲಾಗಿದೆ ಎಂದು ಸಚಿವ ಜೋಶಿ ಮಾಹಿತಿ ನೀಡಿದರು.
300 ಯುನಿಟ್‌ವರೆಗೆ ಉಚಿತ ವಿದ್ಯುತ್
ಸೂರ್ಯ ಘರ್ ಯೋಜನೆ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕಲ್ಪಿಸಲಿದೆ ಎಂದು ತಿಳಿಸಿದರು.
ನಿರ್ಣಾಯಕ ಮತ್ತು ಕಡಲಾಚೆಯ ಖನಿಜಗಳ ಗಣಿಗಾರಿಕೆ: 25 ನಿರ್ಣಾಯಕ ಖನಿಜಗಳ ಮೇಲಿನ ಕಸ್ಟಮ್ಸ್ ವಿನಾಯಿತಿ ಮತ್ತು 2 ಖನಿಜಗಳ ಮೇಲೆ ಮೂಲಭೂತ ಕಸ್ಟಮ್ ಸುಂಕವನ್ನು (ಬಿಸಿಡಿ) ಕಡಿತಗೊಳಿಸಲಾಗಿದೆ. ಇದು ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಸರಳ ಮತ್ತು ಸುವ್ಯವಸ್ಥಿತಗೊಳಿಸಲಿ ಎಂದು ಹೇಳಿದರು.
ಇದನ್ನೂ ಓದಿ: Bengaluru Power Cut: ಜು.25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಇಂಧನ ಪರಿವರ್ತನಾ ಮಾರ್ಗಗಳ ಕುರಿತು ವಿವರಿಸಿದ ಸಚಿವರು, ನವೀಕರಿಸಬಹುದಾದ ಇಂಧನವನ್ನು ಕೇಂದ್ರೀಕರಿಸುವ ಬಹು ವಲಯದ ದಾಖಲೆಯಾಗಿದೆ ಎಂದು ಅವರು ತಿಳಿಸಿದರು.