Site icon Vistara News

BJP-JDS Padayatra: ಪರಿಶಿಷ್ಟ, ಒಬಿಸಿಯವರಿಗೆ ಕಾಂಗ್ರೆಸ್‌ನಿಂದ ಸದಾ ಅಪಮಾನ; ಪ್ರಲ್ಹಾದ್‌ ಜೋಶಿ

BJP-JDS Padayatra

ಮೈಸೂರು: ಹಿಂದುಳಿದ ವರ್ಗದವರು ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಅದೇನಿದ್ದರೂ ಕಾಂಗ್ರೆಸ್‌ನ ಡಿಎನ್ಎದಲ್ಲೇ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (BJP-JDS Padayatra) ತಿರುಗೇಟು ನೀಡಿದರು.

ಭ್ರಷ್ಟಾಚಾರದ ವಿರುದ್ಧ ಬಿಜೆಪಿ-ಜೆಡಿಎಸ್ ನಡೆಸಿದ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು “ತಾನು ಹಿಂದುಳಿದ ವರ್ಗದವನಾದ್ದರಿಂದ ಟಾರ್ಗೆಟ್ ಮಾಡುತ್ತಿದ್ದಾರೆ” ಎಂಬ ಸ್ಲೋಗನ್ ಹೇಳುತ್ತಿದ್ದಾರೆ. ಆದರೆ ತಮ್ಮ ಭ್ರಷ್ಟಾಚಾರದ ಆಡಳಿತವನ್ನು ಮುಚ್ಚಿ ಹಾಕಿಕೊಳ್ಳಲು ಇಂಥ ಒಂದು ಸಬೂಬು ಹೇಳುತ್ತಿದ್ದಾರೆ ಎಂದು ಖಂಡಿಸಿದರು.

ಸಿದ್ಧರಾಮಯ್ಯ ಅವರನ್ನು ಹಿಂದುಳಿದ ವರ್ಗದಿಂದ ಬಂದವರು ಎಂಬ ಕಾರಣಕ್ಕೆ ಯಾರೂ ಟಾರ್ಗೆಟ್ ಮಾಡುತ್ತಿಲ್ಲ. ಅದೇನಿದ್ದರೂ ಕಾಂಗ್ರೆಸ್ ಪಕ್ಷದ ಡಿಎನ್ಎದಲ್ಲಿಯೇ ಇದೆ ಎಂದು ಜೋಶಿ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: Paris Olympics 2024 : ನಾಳೆ ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ; ಎಲ್ಲಿ ಕಾರ್ಯಕ್ರಮ? ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಎಲ್ಲ ವಿವರ

ಎಸ್ಸಿ, ಎಸ್ಟಿ ಮತ್ತು ಒಬಿಸಿಯವರನ್ನು ಅವಮಾನಿಸುವುದು, ಅಪಮಾನಿಸುವುದು ಕಾಂಗ್ರೆಸ್‌ನ ಡಿಎನ್ಎದಲ್ಲೇ ಬಂದಿದೆ. ಚರಣ ಸಿಂಗ್, ಬಾಬು ಜಗಜೀವನರಾಂ, ಸೀತಾರಾಮ್ ಕೇಸರಿ ಹೀಗೆ ಯಾರನ್ನು ಪ್ರಧಾನಿ ಹುದ್ದೆಯಲ್ಲಿ ದೀರ್ಘಾವಧಿ ಮುಂದುವರಿಯಲು ಬಿಡಲಿಲ್ಲ ಎಂದು ಜೋಶಿ ಆರೋಪಿಸಿದರು.

ಭ್ರಷ್ಟಾಚಾರ ಮಾತ್ರವಲ್ಲ, ಅಪಮಾನಿಸುವುದೂ ಕಾಂಗ್ರೆಸ್ ಚಾಳಿ. ಕಾಂಗ್ರೆಸ್ ಡಿಎನ್ಎದಲ್ಲಿ ಭ್ರಷ್ಟಾಚಾರ ಮಾತ್ರವಲ್ಲ, ಪರಿಶಿಷ್ಟರು, ಹಿಂದುಳಿದವರು, ಮುಂದುವರಿದವರಿಗೆ ಅನ್ಯಾಯ, ಅಪಮಾನ, ಅವಮಾನ ಮಾಡುವ ಚಾಳಿಯೂ ಇದೆ ಎಂದು ಹರಿಹಾಯ್ದರು.

ಇದನ್ನೂ ಓದಿ: TV Somanathan: ಸಂಪುಟ ಕಾರ್ಯದರ್ಶಿಯಾಗಿ ಸೋಮನಾಥನ್‌ ನೇಮಕ; ಯಾರಿವರು?

ಕಾಂಗ್ರೆಸ್ ಪಕ್ಷ ಯಾವ ಪರಿಶಿಷ್ಟ, ಒಬಿಸಿಯವರನ್ನೂ ಹತ್ತು ವರ್ಷ ಪ್ರಧಾನಿ ಮಾಡಲಿಲ್ಲ. ಆದರೆ, ಒಬಿಸಿ ವರ್ಗದ ನರೇಂದ್ರ ಮೋದಿ ಅವರನ್ನು ಬಿಜೆಪಿ 11ನೇ ವರ್ಷವೂ ಪ್ರಧಾನಿಯನ್ನಾಗಿಸಿದೆ ಎಂದು ಹೇಳಿದರು.

ಸಿಎಂ ಪಾಠ ನಮಗೆ ಬೇಕಿಲ್ಲ

ಸಿಎಂ ಸಿದ್ದರಾಮಯ್ಯ ಅವರು ನಮಗೆ ಎಸ್‌ಸಿ, ಎಸ್‌ಟಿ, ಒಬಿಸಿ ಪಾಠ ಮಾಡಲು ಬರುತ್ತಾರೆ. ಆದರೆ, ಮೊದಲು ತಮ್ಮ ಪಕ್ಷದಲ್ಲೇ ಈ ವರ್ಗದವರಿಗೆ ಮಾಡಿದ ಅನ್ಯಾಯವನ್ನು, ಇತಿಹಾಸವನ್ನು ಅರಿಯಲಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಕಿವಿಮಾತು ಹೇಳಿದರು.

ಮುಡಾ ಹಗರಣದಲ್ಲಿ ದೇಶಾದ್ಯಂತ ಮೈಸೂರು ಚರ್ಚೆಗೆ

ಮೈಸೂರು ರಾಜರ ಆಳ್ವಿಕೆ, ದಸರಾ ಮಹೋತ್ಸವದಿಂದ ಚರ್ಚೆಗೆ ಬರುತ್ತಿದ್ದ ಮೈಸೂರು ಇಂದು ಸಿಎಂ ಮುಡಾ ಹಗರಣದಿಂದಾಗಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ದುರ್ದೈವ ಎಂದು ಜೋಶಿ ಹೇಳಿದರು.

ಸಿಎಂ ಆಡಳಿತದಲ್ಲಿ ಬರೀ ಕಪ್ಪು ಚುಕ್ಕಿಗಳೇ ಕಾಣುತ್ತಿವೆ

ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದಾರೆ. ಆದರೆ, ಅವರ ಆಡಳಿತದಲ್ಲಿ ಒಂದಲ್ಲ ಬರೀ ಕಪ್ಪು ಚುಕ್ಕೆಗಳೇ ಕಾಣುತ್ತಿವೆ ಎಂದು ಸಿಎಂ ವಿರುದ್ಧ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದರು.

14 ಸೈಟ್ ವಾಪಸ್ ಕೊಡುವುದಾಗಿ ಹೇಳಿದ್ದಾರೆ ಸಿಎಂ. ಆದರೆ, ಕಳವು ಮಾಡಿದ ಮೇಲೆ ವಸ್ತುಗಳನ್ನು ಮರಳಿಸಿದರೆ ಶಿಕ್ಷೆ ನೀಡದೇ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದ ಜೋಶಿ, ಸಿಎಂಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಭ್ರಷ್ಟ ಮುಖ್ಯಮಂತ್ರಿಯನ್ನು ಮನೆಗೆ ಕಳಿಸುವವರೆಗೂ ವಿಶ್ರಮಿಸುವುದಿಲ್ಲ. ಬಿಜೆಪಿ ಕಾನೂನು ಮತ್ತು ರಾಜಕೀಯವಾಗಿಯೂ ಹೋರಾಟ ನಡೆಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಪ್ರಕಟ

ಕಾಂಗ್ರೆಸ್ ಧನಾಂದೋಲನ

ಕಾಂಗ್ರೆಸ್ ಪಕ್ಷ ನಡೆಸುತ್ತಿರುವುದು ಜನಾಂದೋಲನ ಅಲ್ಲ. ಧನಾಂದೋಲನವಾಗಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ಕೊಡಲು ಮಾಡಿದ ಧನಾಂದೋಲನ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ ಮಾಡಿದ್ದಾರೆ.

Exit mobile version