ಹುಬ್ಬಳ್ಳಿ: ಧಾರವಾಡದ ಇತಿಹಾಸ ಪ್ರಸಿದ್ಧ ಶ್ರೀ ನುಗ್ಗಿಕೇರಿ ಆಂಜನೇಯ ಸ್ವಾಮಿ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರಿಗೆ ಆಂಜನೇಯ ಸ್ವಾಮಿಯಿಂದ ಶುಭಾಶೀರ್ವಾದ ದೊರೆತಿದೆ.
ಹೌದು, ಮಂಗಳವಾರ ಮಧ್ಯಾಹ್ನ ಹನುಮ ಜಯಂತಿ ಅಂಗವಾಗಿ ಸಚಿವ ಪ್ರಲ್ಹಾದ್ ಜೋಶಿ, ಶ್ರೀ ನುಗ್ಗಿಕೇರಿ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ, ಪೂಜೆ ಸಲ್ಲಿಸುವ ವೇಳೆ ಆಂಜನೇಯ ಸ್ವಾಮಿ ಮೂರ್ತಿಗೆ ಅಲಂಕರಿಸಲಾಗಿದ್ದ ತಾವರೆ ಮೊಗ್ಗು ಬಿದ್ದಿದ್ದು, ಅರ್ಚಕರು ಪ್ರಸಾದ ರೂಪದ ಅದೇ ತಾವರೆಯನ್ನು ಸಚಿವರಿಗೆ ಮಂಗಳಾರತಿ ಜತೆ ಅರ್ಪಿಸಿ, ಹರಸಿದರು.
ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್ ಅಪ್ ಲೋನ್‌ಗೆ ಅಪ್ಲೈ ಮಾಡಿ
ಲೋಕಸಭೆ ಚುನಾವಣೆಯಲ್ಲಿ ಸತತ 5ನೇ ಬಾರಿ ಬಿಜೆಪಿ ಪಕ್ಷದಿಂದ ಕಮಲದ ಚಿಹ್ನೆಯಡಿ ಅಖಾಡಕ್ಕೆ ಇಳಿದಿರುವ ಪ್ರಲ್ಹಾದ್ ಜೋಶಿ ಅವರಿಗೆ ಶ್ರೀ ನುಗ್ಗಿಕೇರಿ ಆಂಜನೇಯ ಸ್ವಾಮಿಯು ತಾವರೆ ರೂಪದಲ್ಲೇ ನೀಡಿದ ಆಶೀರ್ವಾದವು ಸಚಿವರಿಗೆ ಅಭೂತಪೂರ್ವ ಗೆಲುವು ಸಾಧಿಸಿದಷ್ಟೇ ಸಂತಸ ತಂದಿತು.
ಈ ವೇಳೆ ಸಚಿವರ ಜತೆಗಿದ್ದ ಬಿಜೆಪಿ ಪ್ರಮುಖರು, ಆಪ್ತರು ಹನುಮ ಜಯಂತಿಯಂದೇ ಇತಿಹಾಸ ಪ್ರಸಿದ್ಧ ಶ್ರೀ ನುಗ್ಗಿಕೇರಿ ಆಂಜನೇಯ ಸ್ವಾಮಿಯು ಪ್ರಸಾದ ರೂಪದಲ್ಲಿ ತಾವರೆ ಹೂವು ನೀಡಿರುವುದು ಶುಭ ಸೂಚನೆ ಎನ್ನುತ್ತ ಆಂಜನೇಯನಿಗೆ ಮತ್ತೊಮ್ಮೆ ಕರ ಜೋಡಿಸಿ ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: The Legend of Hanuman: ಹನುಮ ಜಯಂತಿಯಂದೇ ‘ದಿ ಲೆಜೆಂಡ್ ಆಫ್ ಹನುಮಾನ್’ ಸೀಸನ್ 4 ಘೋಷಣೆ
ವಿಶೇಷ ಪೂಜೆ ಸಲ್ಲಿಕೆ
ಹನುಮ ಜಯಂತಿ ಪ್ರಯುಕ್ತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿ-ಧಾರವಾಡದ ಶ್ರೀ ಆಂಜನೇಯಸ್ವಾಮಿ ಮಂದಿರಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು.