Site icon Vistara News

Parliament Session: ಲೋಕಸಭೆಯಲ್ಲಿ ಪ್ರತಿಧ್ವನಿಸಿದ UPA ಅವಧಿಯ ಕಲ್ಲಿದ್ದಲು ಹಗರಣ

Lok Sabha

ನವದೆಹಲಿ: ಲೋಕಸಭೆ ಅಧಿವೇಶನದಲ್ಲಿ (Parliament Session) ಯುಪಿಎ ಅವಧಿಯಲ್ಲಿನ ಕಲ್ಲಿದ್ದಲು ಹಗರಣ ಪ್ರತಿಧ್ವನಿಸಿದೆ. ಭಾರತೀಯ ಆರ್ಥಿಕತೆಯ ಶ್ವೇತಪತ್ರದ ಮೇಲಿನ ಚರ್ಚೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಯುಪಿಎ ಅವಧಿಯಲ್ಲಿ ನಡೆದ ಕಲ್ಲಿದ್ದಲು ಹಗರಣದ ಸಂಪೂರ್ಣ ವೃತ್ತಾಂತವನ್ನು ತೆರೆದಿಟ್ಟರು.

ಈ ಬಗ್ಗೆ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್‌ ಜೋಶಿ ಅವರು ಟ್ವೀಟ್ ಮಾಡಿದ್ದು, ಯುಪಿಎ ಸರ್ಕಾರದಲ್ಲಿ ಕಲ್ಲಿದ್ದಲು ಗಣಿ ನಿಕ್ಷೇಪಗಳನ್ನು ಅಸಮರ್ಪಕವಾಗಿ ಹಂಚಿಕೆ ಮಾಡಲಾಗಿತ್ತು ಎಂಬುದನ್ನು ಪ್ರಸ್ತಾಪಿಸಿದ ವಿತ್ತ ಸಚಿವೆ, ಹಳಿ ತಪ್ಪಿದ್ದ ಕಲ್ಲಿದ್ದಲು ಗಣಗಾರಿಕೆಯನ್ನು NDA ಅಧಿಕಾರಕ್ಕೆ ಬಂದ ಮೇಲೆ ಸುವ್ಯವಸ್ಥೆಗೆ ತರಲಾಯಿತು ಎಂದು ಸದನದ ಗಮನ ಸೆಳೆದರು ಎಂದು ತಿಳಿಸಿದ್ದಾರೆ.

ಜಿಲ್ಲಾ ಖನಿಜ ನಿಧಿ ಸ್ಥಾಪನೆ

ಗಣಿಗಾರಿಕೆಯಿಂದ ಹಾನಿಗೊಳಗಾದ ಜಿಲ್ಲೆಗಳ ಅಭಿವೃದ್ಧಿಗೆ ಕಾನೂನು ರೂಪಿಸುವ ಮೂಲಕ NDA ಸರ್ಕಾರ ಜಿಲ್ಲಾ ಖನಿಜ ನಿಧಿಯನ್ನು ಸ್ಥಾಪಿಸಿದೆ ಎಂದು ತಿಳಿಸಿದರು. ಜಿಲ್ಲಾ ಖನಿಜ ನಿಧಿಗಾಗಿ ಎಲ್ಲಾ ರಾಜ್ಯಗಳಲ್ಲಿ 84,900 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಡಿಎಂಎಫ್‌ನಲ್ಲಿ ಠೇವಣಿ ಮಾಡಲಾಗಿದೆ. ಈ ನಿಧಿಯಿಂದ ಈಗ ಗಣಿಗಾರಿಕೆಯಿಂದ ಹಾನಿ ಪೀಡಿತ ಜಿಲ್ಲೆಗಳಲ್ಲಿ ತ್ವರಿತ ಅಭಿವೃದ್ಧಿ ನಡೆಯುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ದೇಶದ ಕಲ್ಲಿದ್ದಲು ಉತ್ಪಾದನೆ ದುಪ್ಪಟ್ಟು

2013-14ರಲ್ಲಿ ದೇಶದ ಕಲ್ಲಿದ್ದಲು ಉತ್ಪಾದನೆ ಕೇವಲ 567 ದಶಲಕ್ಷ ಟನ್‌ಗಳಷ್ಟಿತ್ತು, 2022-23ರಲ್ಲಿ ಅದನ್ನು 900 ದಶಲಕ್ಷ ಟನ್‌ಗೆ ಹೆಚ್ಚಿಸಿದ್ದೇವೆ. ಮತ್ತು 2023-24ರಲ್ಲಿ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಲಿದ್ದೇವೆ ಎಂದು ವಿತ್ತ ಸಚಿವೆ ಘಂಟಾ ಘೋಷವಾಗಿ ಹೇಳಿದ್ದಾರೆ.

ಇದನ್ನೂ ಓದಿ | ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ಕೋಟಿ ರೂ. ದಂಡ; ಮಹತ್ವದ ವಿಧೇಯಕ ಪಾಸ್

ವಿದೇಶಿ ವಿನಿಮಯ ಉಳಿತಾಯ: ಭಾರತ ಕಲ್ಲಿದ್ದಲು ಉತ್ಪಾದನೆಯಲ್ಲಿ ಸ್ವಾವಲಂಬಿ ಸಾಧನೆಯಿಂದಾಗಿ ದೇಶದ ಕಲ್ಲಿದ್ದಲು ಆಮದು ಕಡಿಮೆಯಾಗಿದೆ ಮತ್ತು ಅಪಾರ ಪ್ರಮಾಣದ ವಿದೇಶಿ ವಿನಿಮಯ ಸಹ ಉಳಿತಾಯವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಡೆಲ್ಲಿಯಲ್ಲಿ ವಿಜಯೇಂದ್ರ – ಪ್ರಲ್ಹಾದ್ ಜೋಶಿ ಭೇಟಿ; ಲೋಕಸಭೆ ಚುನಾವಣೆ ಬಗ್ಗೆ ಮಹತ್ವದ ಚರ್ಚೆ

ನವ ದೆಹಲಿ: ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Prahlad Joshi) ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ರಾಜ್ಯದ ಕೆಲವು ಪ್ರಮುಖ ಶಾಸಕರು ಭಾಗಿಯಾಗಿದ್ದರು. ಈ ವೇಳೆ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರವನ್ನು ಗೆಲ್ಲುವ ವಿಶ್ವಾಸವನ್ನು ಬಿ.ವೈ. ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರ ನವ ದೆಹಲಿಯ ಗೃಹ ಕಚೇರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಸಚಿವ ಪ್ರಲ್ಹಾದ್‌ ಜೋಶಿ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಭಾಗ್ಯ ಬಹುಪಾಲು ಜನರನ್ನು ತಲುಪಿಯೇ ಇಲ್ಲ. ಅಲ್ಲದೇ, ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಜನಸ್ಪಂದನ ನಡೆಸಿದ್ದು ಆಡಳಿತ ಯಂತ್ರ ಕುಸಿತಕ್ಕೆ ನಿದರ್ಶನವಾಗಿದೆ. ಈ ಬಗ್ಗೆ ಜನರಿಗೆ ಮನದಟ್ಟು ಮಾಡುವುದು ಸೇರಿದಂತೆ ಪಕ್ಷದ ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ | Lok Sabha Election: 2024ರ ಲೋಕಸಭೆ ಚುನಾವಣೆಯಲ್ಲಿ ಮತದಾನಕ್ಕೆ 97 ಕೋಟಿ ಜನರಿಂದ ನೋಂದಣಿ

ಈ ಸಂದರ್ಭದಲ್ಲಿ ರಾಜ್ಯದ ಸಂಸದರಾದ ಪಿ.ಸಿ.ಗದ್ದಿಗೌಡ್ರು, ಪಿ.ಸಿ.ಮೋಹನ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version