ಚಿಕ್ಕಮಗಳೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಸಚಿವ, ಚಿಕ್ಕಮಗಳೂರು ಮಾಜಿ ಶಾಸಕ ಸಿ.ಟಿ.ರವಿ ಅವರ ಹೆಸರು ನಮೂದಿಸಿದ್ದಕ್ಕೆ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲೂಕಿನ (Chikkamagaluru News) ಆಲ್ದೂರಿನಲ್ಲಿ ನಡೆದಿದೆ. ಇದೆ ವೇಳೆ ಆಹ್ವಾನ ಇಲ್ಲದಿದ್ದರೂ ಯಾಕೆ ಬಂದಿದ್ದೀರಾ ಎಂದು ಮೂಡಿಗೆರೆ ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಅವರಿಗೆ ತರಾಟೆ ತೆಗೆದುಕೊಂಡಿರುವುದೂ ನಡೆದಿದೆ.
ಇದು ಮನೆ ಮದುವೆಯಲ್ಲ, ಕರೆಯದಿದ್ದರೂ ಯಾಕೆ ಬಂದಿದ್ದೀರಾ ಎಂದು ಮಾಜಿ ಶಾಸಕ ಬಿ.ಬಿ. ನಿಂಗಯ್ಯ ವಿರುದ್ಧ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹೆಸರಿಲ್ಲ, ಮೋಟಮ್ಮ ಹೆಸರಿಲ್ಲ, ನಿಮ್ಮ ಹೆಸರೂ ಇಲ್ಲ. ನೀವು ಯಾಕೆ ಕರೆಯದಿದ್ದರೂ ಕಾರ್ಯಕ್ರಮಕ್ಕೆ ಬಂದಿದ್ದೀರಾ ಸ್ವಾಮಿ. ಇದು ಮೂಡಿಗೆರೆ ವಿಧಾನಸಭಾ ಕ್ಷೇತ್ರ, ನಿಮ್ಮ ಹೆಸರೇ ಇಲ್ಲ. ಆದರೆ, ಚಿಕ್ಕಮಗಳೂರು ಕ್ಷೇತ್ರದ ಸಿ.ಟಿ.ರವಿ ಹೆಸರು ಹೇಗೆ ಬಂತು. ನಿಮ್ಮ ಹೆಸರು ಯಾಕಿಲ್ಲ. ಹೆಸರಿಲ್ಲದಿದ್ದರೂ ನೀವು ಯಾಕೆ ಕಾರ್ಯಕ್ರಮಕ್ಕೆ ಬಂದಿದ್ದೀರಿ ಎಂದು ಸ್ಥಳೀಯ ದಲಿತ ಮುಖಂಡರ ಪ್ರಶ್ನೆಗೆ ಮಾಜಿ ಶಾಸಕ ಬಿ.ಬಿ. ಲಿಂಗಯ್ಯ ತಬ್ಬಿಬ್ಬಾದರು.
ಇದನ್ನೂ ಓದಿ | Elephant attack : ಕೊಡಗಿನಲ್ಲಿ ಮುಂದುವರಿದ ಆನೆ ದಾಳಿ; ಕ್ಷಿಪ್ರ ಕಾರ್ಯಾಚರಣೆ ಸಿಬ್ಬಂದಿಯೇ ಬಲಿ
ಲೋಕಾಯುಕ್ತ ಪೊಲೀಸರ ಅತಿಥಿಯಾದ ಆರ್.ಟಿ.ಒ ಅಟೆಂಡರ್
ಚಿಕ್ಕಮಗಳೂರು: 3000 ರೂ. ಲಂಚ ಪಡೆಯುವಾಗ ಆರ್.ಟಿ.ಒ ಅಟೆಂಡರ್ ಅನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ಆರ್.ಟಿ.ಒ ಕಚೇರಿಯಲ್ಲಿ ನಡೆದಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಪರವಾಗಿ ಲಂಚ ಸ್ವೀಕರಿಸುತ್ತಿದ್ದಾಗ ಅಟೆಂಡರ್ ಲತಾ ಎಂಬುವವರು ಸಿಕ್ಕಿಬಿದ್ದಿದ್ದಾರೆ.
ಬಾಡಿಗೆ ಬೈಕ್‌ಗೆ ಪರವಾನಗಿಗಾಗಿ ಅಂಗಡಿ ಮಾಲೀಕರೊಬ್ಬರು ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಜತೆಗೆ ರಾಜ್ಯಾದ್ಯಂತ ಸಂಚರಿಸಲು ಅನುಮತಿಗಾಗಿ 1 ಬೈಕ್‌ಗೆ 500 ರೂ.ನಂತೆ 8 ಬೈಕ್‌ಗೆ 4000 ರೂ. ಸರ್ಕಾರಿ ಫೀಸ್ ಕಟ್ಟಿದ್ದರು. ಆದರೆ, ಫೈಲ್ ಪೆಂಡಿಂಗ್ ಇಟ್ಟು ಬೈಕ್‌ಗೆ ತಲಾ 1000 ರೂ.ಗಳಂತೆ 8 ಸಾವಿರ ರೂ. ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ(ಆರ್‌ಟಿಒ) ಮಧುರಾ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ | Heart Attack : ಬಿಇಒ ಕಚೇರಿ SDAಗೆ ಹೃದಯಾಘಾತ; ಹಿರಿಯ ಅಧಿಕಾರಿ ಕಿರುಕುಳ ಕಾರಣ ಎಂದು ಶವ ಇಟ್ಟು ಪ್ರತಿಭಟನೆ
ಅಟೆಂಡರ್ ಲತಾ ಮೂಲಕ ಆರ್.ಟಿ.ಒ. ಮಧುರಾ ಡೀಲ್ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಮೊದಲೇ ನಡೆದ ಮಾತುಕತೆಯಂತೆ ಅಂಗಡಿ ಮಾಲೀಕನಿಂದ 3000 ರೂ. ಲಂಚ ಪಡೆಯುವಾಗ ಅಟೆಂಡರ್ ಲತಾ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಅಟೆಂಡರ್ ಲತಾ, ಆರ್.ಟಿ.ಒ. ಮಧುರಾ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.