Site icon Vistara News

ದತ್ತಪೀಠ: ವಿವಾದಿತ ದತ್ತಪೀಠದಲ್ಲಿ ಇಂದಿನಿಂದ ಉರೂಸ್ ಆಚರಣೆ, ಮುಸ್ಲಿಮರ ವಿರೋಧ

dattha peetha

ಚಿಕ್ಕಮಗಳೂರು: ಇಲ್ಲಿನ ವಿವಾದಿತ ದತ್ತಪೀಠದಲ್ಲಿ ಇಂದಿನಿಂದ ಮೂರು ದಿನ ಉರೂಸ್ ಆಚರಣೆ ನಡೆಯಲಿದೆ. ಇದು ಜಿಲ್ಲಾಡಳಿತದ ವತಿಯಿಂದ ನಡೆಯಲಿದ್ದು, ಮುಸ್ಲಿಂ ಸಮುದಾಯದಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.

ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಮಾರ್ಚ್ 8, 9, 10ರಂದು ಉರೂಸ್ ಆಯೋಜಿಸಲಾಗಿದೆ. ಪ್ರತಿವರ್ಷ ರಾಜ್ಯ ಹೊರ ರಾಜ್ಯಗಳಿಂದ ಇಲ್ಲಿನ ಉರೂಸ್‌ಗೆ ಮುಸ್ಲಿಂ ಸಮುದಾಯದವರು ಆಗಮಿಸುತ್ತಾರೆ.

ಆದರೆ ರಾಜ್ಯ ಸರ್ಕಾರ ರಚನೆ ಮಾಡಿದ್ದ ದತ್ತಪೀಠ ವ್ಯವಸ್ಥಾಪನ ಮಂಡಳಿಗೆ ಮುಸಿಮರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಜಿಲ್ಲಾಡಳಿತದ ನೇತೃತ್ವದಲ್ಲಿ ವ್ಯವಸ್ಥಾಪನ ಮಂಡಳಿ ನಡೆಸುತ್ತಿರುವ ಉರೂಸ್ ಆಚರಣೆಗೂ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಆಚರಣೆಯಿಂದ ಮುಸ್ಲಿಂ ಸಮುದಾಯ ದೂರ ಉಳಿಯುವ ಸಾಧ್ಯತೆ ಇದೆ.

ಮುಸ್ಲಿಂ ಸಮುದಾಯದ ಮುಖಂಡರು ದತ್ತಪೀಠಕ್ಕೆ ಸಂಬಂಧಿಸಿ ನಾಲ್ಕು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಅರ್ಚಕರ ನೇಮಕಾತಿ ರದ್ದು, ವ್ಯವಸ್ಥಾಪನ ಮಂಡಳಿ ರದ್ದು, ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆ, ನಮಾಜ್ ಮಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಜಿಲ್ಲಾಡಳಿತದ ಉರೂಸ್ ಅನ್ನು ತಿರಸ್ಕರಿಸಿದ್ದು, ನಾಳೆ ವಿವಾದಿತ ಸ್ಥಳದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ದತ್ತ ಪೀಠ ವಿವಾದ |‌ ದತ್ತಪೀಠದ ಇತಿಹಾಸದಲ್ಲೇ ಮೊದಲ ಬಾರಿಗೆ ದತ್ತಾತ್ರೇಯನಿಗೆ ಸಂದ ಪೂಜೆ

Exit mobile version