Site icon Vistara News

Karnataka election 2023: ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ; ಕಾಂಗ್ರೆಸ್‌ನ ಐವರು ಮುಖಂಡರ ವಿರುದ್ಧ FIR

Karnataka election 2023 Use of children for election campaign A complaint has been filed against five Congress leaders

ಕುಷ್ಟಗಿ: ತಾಲೂಕಿನ ವಕ್ಕನದುರ್ಗ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮೂವರು ಮಕ್ಕಳೊಂದಿಗೆ ಕಾಂಗ್ರೆಸ್‌ನವರು ಚುನಾವಣಾ (Karnataka election 2023) ಪ್ರಚಾರದಲ್ಲಿ ನಿರತರಾಗಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಐವರು ಮುಖಂಡರ ವಿರುದ್ಧ ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ್, ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ತಳವಾರ, ಶಾರದಾ ಕಟ್ಟಿಮನಿ, ಬಸವರಾಜ ಗಣೇಕಲ್, ಬಸವರಾಜ ತಳವಾರ ಎಂಬುವವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: IPL 2023: ಚೆನ್ನೈಗೆ ಗೆಲುವು, ಆರ್​ಸಿಬಿಗೆ ಸೋಲು: ಐಪಿಎಲ್​ ಅಂಕಪಟ್ಟಿ ಹೇಗಿದೆ?

ಘಟನೆಯ ಹಿನ್ನೆಲೆ

ಮೇ 5 ರಂದು ಮಧ್ಯಾಹ್ನ 12.30ರ ವೇಳೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ವಕ್ಕನದುರ್ಗಾ ಗ್ರಾಮಕ್ಕೆ ಕಾಂಗ್ರೆಸ್‌ ಮುಖಂಡರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಲತಿ ನಾಯಕ್, ಕಲ್ಲಪ್ಪ ತಳವಾರ, ಬಸವರಾಜ ಗಣೇಕಲ್, ಶಾರದಾ ಕಟ್ಟಿಮನಿ, ಬಸವರಾಜ ತಳವಾರ ಅವರು ತಮ್ಮ ಬೆಂಬಲಿಗರೊಂದಿಗೆ ಸ್ಥಳೀಯರು ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಇವರ ಜತೆಗೆ ಮೂವರು ಮಕ್ಕಳೂ ಸಹ ಇದ್ದು, ಅವರನ್ನೂ ಸಹ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು ಎಂಬ ಆರೋಪ ಈಗ ಕೇಳಿಬಂದಿದೆ.

ಮಾದರಿ ನೀತಿ ಸಂಹಿತೆ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಭಾವಚಿತ್ರ ಹಿಡಿದು ತೆಗೆಸಿಕೊಂಡ ಪೋಟೊ ಈಗ ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡಿದ್ದೂ ಅಲ್ಲದೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಫೋಟೊ ವೈರಲ್ ಆಗಿತ್ತು.

ಇದನ್ನೂ ಓದಿ: Robbery Case: ಬಂದೂಕು ತೋರಿಸಿ ತರೀಕೆರೆ ಮಾಜಿ‌ ಶಾಸಕನ ಮನೆ ದರೋಡೆ; ಚಿನ್ನಾಭರಣ ಕದ್ದು ಪರಾರಿ

ವಿಷಯ ತಿಳಿದ ಫ್ಲೈಯಿಂಗ್ ಸ್ಕ್ವಾಡ್ ಬಸವರಾಜ ಹಂಡಿ, ದೇವಸ್ಥಾನದ ಪೂಜಾರಿ ಸತ್ಯಪ್ಪನನ್ನು ವಿಚಾರಿಸಿದಾಗ ನಿಜಸ್ಥಿತಿಯನ್ನು ವಿವರಿಸಿದ್ದರು. ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಫೋಟೊ ತೆಗೆಸಿಕೊಂಡಿದ್ದರಿಂದ ಚುನಾವಣೆ ನೀತಿ ಸಂಹಿತೆ ನಿಯಮ ಉಲ್ಲಂಘಿಸಿದ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಬಸವರಾಜ ಹಂಡಿ ಅವರ ದೂರಿನ ಮೇರೆಗೆ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version