ನವದೆಹಲಿ: ಸನಾತನ ಧರ್ಮ (Sanatan Dharma remark row) ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Tamil Nadu Minister Udhayanidhi Stalin) ಮತ್ತು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ (Karnataka Minister Priyank Kharge0 ವಿರುದ್ಧ ಉತ್ತರ ಪ್ರದೇಶದ ಪೊಲೀಸರು (UP Police) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಈ ಹೇಳಿಕೆಯನ್ನು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಬಲಿಸಿದ್ದರು.
ಉದಯನಿಧಿ ಮತ್ತು ಪ್ರಿಯಾಂಕ್ ಅವರ ಹೇಳಿಕೆಗಳ ಕುರಿತು ಪತ್ರಿಕೆಯೊಂದರ ಮೂಲಕ ತಿಳಿದುಕೊಂಡೆ. ಅವರ ಮಾತುಗಳಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರುದಾರ ಲೋಧಿ ಹೇಳಿದ್ದಾರೆ. ಠಾಣಾಧಿಕಾರಿ (ಸಿವಿಲ್ ಲೈನ್ಸ್ ಪೊಲೀಸ್ ಠಾಣೆ) ಪಂಕಜ್ ಪಂತ್ ಅವರು, ಆರೋಪಿತರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದೊಂದಿಗೆ ಹೋಲಿಸಿದ್ದಾರೆ ಮತ್ತು ಈ ರೋಗಗಳಂತೆಯೇ ಅದರ ನಿರ್ಮೂಲನೆಗೆ ಕರೆ ನೀಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂ ಕೋರ್ಟ್ ಲಾಯರ್ ಒಬ್ಬರ ಉದಯನಿಧಿ ಸ್ಟಾಲಿನ್ ವಿರುದ್ಧ ದೆಹಲಿ ಪೊಲೀಸ್ ಅವರಿಗೆ ದೂರು ನೀಡಿದ್ದಾರೆ.
ಉದಯನಿಧಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಜೆಐಗೆ ಪತ್ರ ಬರೆದ ನಿವೃತ್ತ ನ್ಯಾಯಮೂರ್ತಿಗಳು
ಸನಾತನ ಧರ್ಮದ (Sanatana Dharma Row) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (Tamil Nadu CM M K Stalin) ಅವರ ಪುತ್ರರೂ ಆಗಿರುವ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿಗಳು(Former High Court Judges), ನಿವೃತ್ತ ಅಧಿಕಾರಿಗಳ 262 ಸದಸ್ಯರ ಗುಂಪು ಸುಪ್ರೀಂ ಕೋರ್ಟ್ನ (Supreme Court) ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬೆರದಿದೆ.
ಈ ಸುದ್ದಿಯನ್ನೂ ಓದಿ: Udhayanidhi Stalin: ಉದಯನಿಧಿಯ ತಲೆ ಕಡಿದು ತಂದರೆ 10 ಕೋಟಿ ಬಹುಮಾನ! ಸ್ಟಾಲಿನ್ ಪ್ರತಿಕ್ರಿಯೆ ಏನು?
ಸನಾತನ ಧರ್ಮವನ್ನು ಅವಹೇಳನ ಮಾಡಿರುವ ಸ್ಟಾಲಿನ್ ಹೇಳಿಕೆಯು ಹೇಟ್ ಸ್ಪೀಚ್ ಆಗಿದ್ದು, ಜನರ ಮಧ್ಯೆ ಪಂಥ ಸಂಘರ್ಷ ಹಾಗೂ ಕೋಮು ಸಾಮರಸ್ಯವನ್ನು ಹಾಳು ಮಾಡುತ್ತದೆ. ಸನಾತನ ಧರ್ಮದಲ್ಲಿ ನಂಬಿಕೆ ಹೊಂದಿವರ ಹೃದಯದಲ್ಲಿ ಮತ್ತು ಮನಸ್ಸಿನಲ್ಲಿ ಉದಯನಿಧಿ ಹೇಳಿಕೆಯು ಆಕ್ರೋಶವನ್ನು ಉಂಟು ಮಾಡುತ್ತದೆ ಎಂದು ಗುಂಪು ಹೇಳಿದೆ.
ಸುಪ್ರೀಂ ಕೋರ್ಟ್ಗೆ ಬರೆದಿರುವ ಪತ್ರದ ಸಮನ್ವಯತೆಯನ್ನು ದಿಲ್ಲಿ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಎಸ್ ಎನ್ ಧಿಂಗ್ರಾ, ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಗೋಪಾಲ್ ಕೃಷ್ಣ ಐಎಎಸ್ ಸೇರಿ 14 ನಿವೃತ್ತ ನ್ಯಾಯಮೂರ್ತಿಗಳು ಮತ್ತು 130 ಅಧಿಕಾರಿಗಳು , 118 ಸೇನಾ ನಿವೃತ್ತ ಅಧಿಕಾರಿಗಳು ಈ ಪತ್ರ ಬರೆದಿದ್ದಾರೆ. ಈ ಪೈಕಿ 20 ರಾಯಭಾರಿಗಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ ಮಾಡಿ.