Site icon Vistara News

Uttara Kannada News: ಯಲ್ಲಾಪುರ; ಐವರು ಅಂತಾರಾಜ್ಯ ಅರಣ್ಯಗಳ್ಳರ ಬಂಧನ

Five interstate forest thieves arrested in Yallapur

ಯಲ್ಲಾಪುರ: ಮಂಚಿಕೇರಿ ಅರಣ್ಯ ವಲಯದಲ್ಲಿ ಅರಣ್ಯ ಅಪರಾಧಕ್ಕೆ ಸಂಬಂಧಿಸಿದಂತೆ ಐವರು ಕುಖ್ಯಾತ ಅಂತಾರಾಜ್ಯ ಅರಣ್ಯಗಳ್ಳರು (Interstate Forest Thieves) ಹಾಗೂ ಕಾಡುಪ್ರಾಣಿ ಹಂತಕರನ್ನು ಯಲ್ಲಾಪುರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಯಲ್ಲಾಪುರ ವಿಭಾಗದ ಮಂಚಿಕೇರಿ ವಲಯದ ಜಕ್ಕೊಳ್ಳಿ ಬಿಟ್‌ ಪಾರೆಸ್ಟ್‌ ಸರ್ವೇ ನಂಬರ್ 3 ರಲ್ಲಿ ಅ. 10ರಂದು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರದಲ್ಲಿ ಓರ್ವ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗಿ, ವಿಚಾರಣೆ ಸಂದರ್ಭದಲ್ಲಿ ನೀಡಿದ ಮಾಹಿತಿ ಮೇರೆಗೆ ಧಾರವಾಡ ಜಿಲ್ಲೆಯ ಕಲಘಟಗಿ ನಗರದಲ್ಲಿ ಪ್ರಕರಣದಲ್ಲಿ ಶಾಮೀಲಾಗಿದ್ದ ಮತ್ತೆ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಕಲಘಟಗಿಯಲ್ಲಿರುವ ಟೆಂಟ್‌ಗಳಲ್ಲಿ ಪರಿಶೀಲನೆ ನಡೆಸಿದಾಗ ಅಂದಾಜು 20 ಲಕ್ಷ ಮೌಲ್ಯದ 30 ಕೆಜಿ ಶ್ರೀಗಂಧದ ತುಂಡುಗಳು, ಕಾಡುಪ್ರಾಣಿಗಳ ಅವಶೇಷಗಳು, ಕಾಡುಪ್ರಾಣಿಗಳನ್ನು ಹಿಡಿಯಲು ಬಳಸುವ ಬಲೆಗಳು ಹಾಗೂ ಇತರ ವಸ್ತುಗಳು ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. .

ಮೂಲತಃ ಮಧ್ಯಪ್ರದೇಶದ ಕಟನಿ ಜಿಲ್ಲೆಯ ಜಲ್‌ಜಲಾ ಕೋಷ್‌ (33), ಅಮಿತ್‌ ಆದಿವಾಸಿ ಪಾರ್ಧಿ (50), ಮಾಖನ್‌ಸಿಂಗ್‌ ಪಾರ್ಧಿ (55), ಸರಿಯಾನಾ (47), ಸಂಜೋನಿಬಾಯಿ ಆದಿವಾಸಿ ಪಾರ್ಧಿ (31) ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: Road Accident: ಟ್ಯಾಂಕರ್ ಹರಿದು ಯುವಕ ದಾರುಣ ಸಾವು

ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ. ಹೆಗಡೆ ನೇತೃತ್ವದಲ್ಲಿ ಎಸಿಎಫ್‌ಗಳಾದ ಹಿಮಾವತಿ ಭಟ್ ಹಾಗೂ ಆನಂದ ಮತ್ತು ಮುಂಡಗೋಡ ಉಪ ವಿಭಾಗದ ಎಸಿಎಫ್‌ ರವಿ ಎಂ ಹುಳಕೋಟಿ ಹಾಗೂ ಮಂಚಿಕೇರಿ ವಲಯದ ವಲಯ ಅರಣ್ಯ ಅಧಿಕಾರಿ ಅಮಿತಕುಮಾರ ಚವಾಣ್ ಹಾಗೂ ಮುಂಡಗೋಡ, ಕಾತುರ, ಯಲ್ಲಾಪುರ, ಇಡಗುಂದಿ, ಕಿರವತ್ತಿ ವಲಯದ ಅರಣ್ಯಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Exit mobile version