ಯಲ್ಲಾಪುರ: ಶಾಸಕರ ಗಮನಕ್ಕೆ ತರದೇ ಪಕ್ಷದ್ರೋಹಿಗಳನ್ನು ಮತ್ತೆ ಪಕ್ಷದ (Party) ಪದವಿಗಳಿಗೆ ಮರು ನೇಮಕ ಮಾಡಿರುವುದು ಶಾಸಕರಿಗೆ ಮಾಡಿದ ಅಪಮಾನವಾಗಿದೆ ಎಂದು ಶಿವರಾಮ ಹೆಬ್ಬಾರ್ ಅಭಿಮಾನಿ ಬಳಗದ ಸದಸ್ಯರು ಆರೋಪಿಸಿದರು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ. ಪಂ ಸದಸ್ಯ ಹಾಗೂ ಹೆಬ್ಬಾರ್ ಅಭಿಮಾನಿ ಬಳಗದ ಸದಸ್ಯ ಸತೀಶ ನಾಯ್ಕ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಲವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವರಾಮ್ ಹೆಬ್ಬಾರ್ ಅವರು ಅತ್ಯಲ್ಪ ಮತಗಳಿಂದ ಗೆಲುವು ಸಾಧಿಸಿದ್ದರು. ಅಂಥವರ ವಿರುದ್ಧ ಶಾಸಕ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಪ್ರಮುಖರಿಗೆ ಲಿಖಿತ ಪತ್ರದ ಮೂಲಕ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದರಂತೆ ಕೇವಲ ನಾಮಕಾವಸ್ತೆ ಕ್ರಮ ಜರುಗಿಸಿದಂತೆ ಮಾಡಿ, ಪಕ್ಷದಿಂದ ಅವರ ಹುದ್ದೆಗಳಿಂದ ವಿಮುಕ್ತಿಗೊಳಿಸಿ ಜಿಲ್ಲಾ ಬಿಜೆಪಿ ಆದೇಶ ಹೊರಡಿಸಿತ್ತು. ಆದರೆ ಇದೀಗ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸ ಹೊರಟ ಪಕ್ಷದ್ರೋಹಿಗಳಿಗೆ ಮತ್ತೆ ಅದೇ ಸ್ಥಾನ ನೀಡಿರುವುದು ಶಾಸಕರಿಗೆ ಹಾಗೂ ಅವರ ಸಹಸ್ರಾರು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ ಎಂದು ಆಪಾದಿಸಿದರು.
ಶಿರಸಿಯಲ್ಲಿ ಕಾಗೇರಿಯವರು ಆರೋಪಿಸಿದರನ್ನು ಬಿಟ್ಟು, ಯಲ್ಲಾಪುರದ ಸದಸ್ಯರನ್ನು ಮಾತ್ರ ಮರು ನೇಮಕ ಮಾಡಿರುವುದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: Virat Kohli: ಹಿಮಾಚಲ ಪ್ರದೇಶ ಸಿಎಂ ಭೇಟಿಯಾದ ವಿರಾಟ್ ಕೊಹ್ಲಿ
ಪ.ಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ, ಪಕ್ಷದ ವಿರುದ್ಧದ ಕೆಲಸ ಮಾಡಿದವರನ್ನು ಮತ್ತೆ ಪಕ್ಷಕ್ಕೆ ಮರುನೇಮಕ ಮಾಡಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ನಮ್ಮ ಶಾಸಕರಿಗೆ ನೋವನ್ನುಂಟು ಮಾಡಿದೆ. ಪಕ್ಷದ ಸಭೆಯಲ್ಲಿಯೂ ಸಹ ಶಾಸಕರನ್ನು ಕಡೆಗಣಿಸಲಾಗುತ್ತಿದೆ. ಶಾಸಕರು ಈ ಕುರಿತು ಮೌನ ವಹಿಸಿದ್ದಾರೆ. ಆದರೆ ನಾವೆಲ್ಲ ಇದನ್ನು ಖಂಡಿಸುತ್ತೇವೆ. ನಾವು 14 ಜನ ಪ.ಪಂ ಸದಸ್ಯರೂ ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದೇವೆ. ನಮ್ಮನ್ನೂ ಕೆಲವರು ಕಡೆಗಣಿಸಿದ್ದಾರೆ ಎಂದು ದೂರಿದರು.
ಶಾಸಕರ ಗಮನಕ್ಕೆ ಬಾರದಂತೆ ಪಕ್ಷ ವಿರೋಧಿಗಳನ್ನು ಮರಳಿ ಹುದ್ದೆಗೆ ನೇಮಕ ಮಾಡಿರುವ ಜಿಲ್ಲಾ ವರಿಷ್ಠರ ನಿರ್ಣಯವನ್ನು ನಾವೆಲ್ಲ ವಿರೋಧಿಸುತ್ತೇವೆ. ಇವರು ಮುಂಬರುವ ಚುನಾವಣೆಯಲ್ಲಿ ಮತ್ತೆ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಪ್ರಚಾರ ಮಾಡಲು ಪ್ರೇರಣೆಯಾಗಿದೆ. ತಕ್ಷಣ ಪಕ್ಷದ ನಾಯಕರು ಶಾಸಕರೊಂದಿಗೆ ಮಾತನಾಡಿ, ಪಕ್ಷದ್ರೋಹಿಗಳ ಮರುನೇಮಕದ ಹಿಂದಿನ ಕಾರಣವನ್ನು ತಿಳಿಸಿ, ಈ ಕ್ರಮದ ಕುರಿತು ನಿರ್ಧರಿಸಬೇಕಿದೆ ಎಂಬುದು ಶಿವರಾಮ ಹೆಬ್ಬಾರ್ ಅಭಿಮಾನಿ ಬಳಗದ ಸದಸ್ಯರು ಆಗ್ರಹಿಸಿದರು.
ಇದನ್ನೂ ಓದಿ: Fire Accident : ಮುಂಬೈ ಅಗ್ನಿ ಅವಘಡದಲ್ಲಿ ಐಪಿಎಲ್ ಮಾಜಿ ಆಟಗಾರನ ಸಹೋದರಿ, ಸೋದರಳಿಯನ ಸಾವು
ಈ ಸಂದರ್ಭದಲ್ಲಿ ಹೆಬ್ಬಾರ್ ಅಭಿಮಾನಿ ಬಳಗದ ಸದಸ್ಯರಾದ ಗೀತಾ ಭಂಡಾರಿ, ಹಲಿಮಾ ಕಕ್ಕೆರಿ, ಪ್ರಶಾಂತ್ ತಳವಾರ್, ಅಮಿತ್ ಅಂಗಡಿ, ಮಹ್ಮದ್ ಅಲಿ, ಲಕ್ಷ್ಮೀನಾರಾಯಣ ಭಟ್ಟ ತೋಟ್ಮನೆ ಇದ್ದರು.