Site icon Vistara News

Akasha Veekshane | ದೇಶದ ಇತಿಹಾಸ, ಪುರಾಣಗಳು ಬ್ರಹ್ಮಾಂಡದೊಡನೆ ಬೆರೆತಿವೆ: ಮುಖ್ಯ ಶಿಕ್ಷಕ ವಸಂತ ಹೆಗಡೆ

Akasha Veekshane

ಯಲ್ಲಾಪುರ: ಭಾರತದ ಇತಿಹಾಸ, ಪುರಾಣಗಳು ಬ್ರಹ್ಮಾಂಡದೊಡನೆ ಬೆರೆತುಕೊಂಡಿವೆ. ಆಗಸದಲ್ಲಿ ಕಾಣುವ ಪ್ರತಿಯೊಂದು ರಚನೆಯೂ ಪುರಾಣಗಳ ಕುರಿತಾದ ಸಾಕ್ಷ್ಯವನ್ನು ನೀಡುತ್ತವೆ ಎಂದು ಬೈರುಂಭೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಸಂತ ಹೆಗಡೆ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಯಲ್ಲಾಪುರ ಮೋಟರ್‌ ಸ್ಪೋರ್ಟ್ಸ್‌ ಆ್ಯಂಡ್ ಅಡ್ವೆಂಚರ್‌ ಕ್ಲಬ್‌ ಹಾಗೂ ಹನ್ಸ್‌ ನ್ಯಾಚುರಲ್ಸ್‌ ಸಹಯೋಗದಲ್ಲಿ ಆಯೋಜಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ | Mangalore Blast | ಮಂಗಳೂರು ಆಟೋ ಸ್ಫೋಟ ಉಗ್ರಕೃತ್ಯ, ಇದರ ಹಿಂದೆ ದೊಡ್ಡ ಜಾಲವೇ ಇದೆ: ಸಿಎಂ ಬಸವರಾಜ ಬೊಮ್ಮಾಯಿ

ಇಡೀ ಆಕಾಶ ಮಂಡಲವೇ ಮಾನವನ ಜೀವನದ ಮೇಲೆ ಅಗಾಧವಾದ ಪ್ರಭಾವ ಬೀರುತ್ತದೆ. ಕೇವಲ ಧ್ರುವ ನಕ್ಷತ್ರದ ಸಂಶೋಧನೆಯೊಂದೇ ಭೂಮಿಯ ಉತ್ತರ ಗೋಳಾರ್ಧದಲ್ಲಿ ನಾಗರಿಕತೆಗಳ ಜನನಕ್ಕೆ ಕಾರಣವಾಯಿತು. ವಿಜ್ಞಾನ ಹಾಗೂ ಭಾರತದ ಪುರಾಣಗಳು ಒಂದಕ್ಕೊಂದು ಹೊಂದಿಕೊಂಡಿವೆ. ಪ್ರತಿಯೊಂದು ನಕ್ಷತ್ರಪುಂಜವೂ ತನ್ನದೇ ಆದ ಕತೆಯನ್ನು ಸಾರುತ್ತವೆ. ಆಗಸದ ಕುರಿತು ಅರಿತಷ್ಟು ಕಡಿಮೆ. ಈವರೆಗೂ ತಿಳಿದಿರುವುದು ಒಂದು ಸಾಸಿವೆ ಕಾಳಿಗೆ ಸಮ ಎಂದರು.

Akasha Veekshane@yellapura

ವಿದ್ಯಾರ್ಥಿಗಳೆಲ್ಲ ಉತ್ಸುಕತೆಯಿಂದ ರಾತ್ರಿ ಚಳಿಯನ್ನು ಲೆಕ್ಕಿಸದೆ ಆಕಾಶಕಾಯಗಳ ಕುರಿತು ತಿಳಿದುಕೊಂಡು, ತಮ್ಮಲ್ಲಿದ್ದ ಸಂಶಯಗಳನ್ನು ನಿವಾರಿಸಿಕೊಂಡರು. ನಂತರ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಬೃಹತ್‌ ಟೆಲಿಸ್ಕೋಪ್‌ ಸಹಾಯದಿಂದ ಶನಿ, ಗುರು ಗ್ರಹ ಹಾಗೂ ಇತರ ಆಕಾಶಕಾಯಗಳನ್ನು ವೀಕ್ಷಿಸಿದರು.

ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ವ್ಯವಸ್ಥಾಪಕ ಗುರುರಾಜ ಕುಂದಾಪುರ, ಮೋಟರ್‌ ಸ್ಪೋರ್ಟ್ಸ್‌ & ಅಡ್ವೆಂಚರ್‌ ಕ್ಲಬ್‌ನ ಅಧ್ಯಕ್ಷ ಜಯಂತ ಮಾವಳ್ಳಿ, ಕೇಂದ್ರಿಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್, ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.

ಇದನ್ನೂ ಓದಿ | Vistara Campaign | ವಿಸ್ತಾರ ನ್ಯೂಸ್‌ನ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನದ ಉದ್ದೇಶವೇನು? ಹೇಗೆ ನಡೆಯುತ್ತದೆ?

Exit mobile version