ಕಾರವಾರ: ಅಪಘಾತದಲ್ಲಿ (Road Accident) ಗಾಯಗೊಂಡು ರಸ್ತೆ ಬದಿ ನರಳುತ್ತ ಬಿದ್ದಿದ್ದ ಯುವಕನನ್ನು ತಮ್ಮದೇ ಕಾರಿನಲ್ಲಿ ಉತ್ತರ ಕನ್ನಡ ಲೋಕಸಭೆ ಚುನಾವಣಾ ಅಭ್ಯರ್ಥಿ (Uttara Kannada lok sabha election candidate) ಅಂಜಲಿ ನಿಂಬಾಳ್ಕರ್ (Anjali Nimbalkar) ಆಸ್ಪತ್ರೆಗೆ ಸಾಗಿಸಿ ಮಾನವೀಯತೆ (Humanity) ಮೆರೆದಿದ್ದಾರೆ.
ಉತ್ತರ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಯಲ್ಲಾಪುರ- ಶಿರಸಿ ನಡುವೆ ಪ್ರಯಣಿಸುತ್ತಿದ್ದಾಗ, ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಯುವಕನನ್ನು ಗಮನಿಸಿದ್ದರು. ವಿನಾಯಕ್ ಶೆಟ್ಟರ್ ಎಂಬ ಯುವಕ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರು.
ಹಳಿಯಾಳದಿಂದ ಶಿರಸಿಗೆ ಹೋಗುವಾಗ ಯುವಕನನ್ನು ಗಮನಿಸಿದ ಅಂಜಲಿ ನಿಂಬಾಳ್ಕರ್, ಕಾರು ನಿಲ್ಲಿಸಿ ಗಾಯಗೊಂಡವನನ್ನು ಪರಿಶೀಲಿಸಿದರು. ಸ್ವತಃ ವೈದ್ಯೆಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಸೂಕ್ತ ಪ್ರಥಮ ಉಪಚಾರ ನೀಡಿ ತಕ್ಷಣ ಯುವಕನನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆಯಲ್ಲೂ ಚಿಕಿತ್ಸೆ ವೇಳೆ ಸಿಬ್ಬಂದಿಯೊಂದಿಗಿದ್ದು ನೆರವು ನೀಡಿದರು. ಶಿರಸಿಯ ಪಂಡಿತ್ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಬಿಜೆಪಿಯ ಭದ್ರಕೋಟೆಯನ್ನು ಒಡೆಯುವೆ: ಅಂಜಲಿ
ಅಂಕೋಲಾ: ಜಾತಿ- ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಬಿಜೆಪಿಗರು ಉತ್ತರ ಕನ್ನಡದ ಹೆಸರು ಕೆಡಿಸಿರುವುದನ್ನು ಸರಿಪಡಿಸಲು ನಮಗೆ ಈ ಬಾರಿ ಉತ್ತಮ ಅವಕಾಶವಿದೆ. ನಾನು ಈ ಜಿಲ್ಲೆಯವಳಲ್ಲ ಎನ್ನುವ ಬಿಜೆಪಿಗರು ಕೂಡ ನನ್ನ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲೇಬೇಕು. ಬಹುಶಃ ಅವರಿಗೆ ಖಾನಾಪುರ ಬ್ಲಾಕ್ ಎಲ್ಲಿದೆ ಎನ್ನುವುದೂ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಅಲ್ಲಿಗೆ ಅವರು ಬರುವುದೇ ಅಪರೂಪ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ (Uttara Kannada News) ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ವ್ಯಂಗ್ಯವಾಡಿದರು.
ಅಂಕೋಲಾದ ನಾಡವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ 30 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ ಎಂದು ಹೇಳುತ್ತಾರೆ. ಆದರೆ ಈಗ ಪ್ರತಿ ಕಾರ್ಯಕರ್ತರೂ “ನಾನೇ ಅಂಜಲಿ ನಿಂಬಾಳ್ಕರ್ʼ ಎಂಬಂತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಈ ಭದ್ರಕೋಟೆಯನ್ನು ಒಡೆಯಲು ಹೆಚ್ಚೇನೂ ಶ್ರಮ ಬೇಕಿಲ್ಲವೆಂದೆನಿಸುತ್ತಿದೆ. ರಾಜಕೀಯ ನನಗೆ ಹೊಸದಲ್ಲ. ಖಾನಾಪುರದಲ್ಲಿ ಕೇವಲ ಮಹಿಳೆಯರಿಗಾಗಿ ಎಂಸಿಎಚ್ ಆಸ್ಪತ್ರೆ ಕಟ್ಟಿದ್ದೇನೆ. ಕಾಡುಪ್ರದೇಶದಲ್ಲಿ ಅಂಥದ್ದೊಂದು ಆಸ್ಪತ್ರೆ ಕಟ್ಟಿಸಬೇಕೆಂಬುದು ನನ್ನ ಕನಸಾಗಿತ್ತು. ಬಿಜೆಪಿ ಸರ್ಕಾರವಿದ್ದರೂ ಅಂಥ ದೊಡ್ಡ ಆಸ್ಪತ್ರೆ ಕಟ್ಟಿ ತೋರಿಸಿದ್ದೀನಿ. ಜಿಲ್ಲೆಯಲ್ಲೂ ಸುಸಜ್ಜಿತ ಆಸ್ಪತ್ರೆ ಆಗಬೇಕೆಂಬ ಆಸೆ ಇಲ್ಲಿಯ ಜನರದ್ದಿದೆ. ಅದನ್ನು ಮಾಡಲು ಪ್ರಯತ್ನಿಸೋಣʼʼ ಎಂದರು.
ಇದನ್ನೂ ಓದಿ: Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ