Site icon Vistara News

ಶಿರಸಿಯ 11 ವರ್ಷದ ಬಾಲಕಿಯಿಂದ ವರ್ಲ್ಡ್ ರೆಕಾರ್ಡ್

ವರ್ಲ್ಡ್ ರೆಕಾರ್ಡ್

ಶಿರಸಿ: ಲಯನ್ಸ್ ಶಾಲೆ ವಿದ್ಯಾರ್ಥಿನಿ ಪೃಥ್ವಿ ರೇವಣಕರ್‌ರನ್ನು ವರ್ಲ್ಡ್ ರೆಕಾರ್ಡ್ ಸಮುದಾಯವು ಖೋದರ್ಬಾರ್ ಸಂಗ್ರಹದಲ್ಲಿ ವಿಶ್ವ ದಾಖಲೆಗಳ ಸಮುದಾಯಕ್ಕೆ ಸೇರಿಸಲಾಗಿದೆ. ʼಕಿರಿಯ ಎರೇಸರ್ ಸಂಗ್ರಾಹಕಿʼ ಎಂದು ಹೆಸರಿಸಿ ವಿಶ್ವ ದಾಖಲೆಗಳ ಸಮುದಾಯದಲ್ಲಿ ದಾಖಲಿಸಲಾಗಿದೆ.

ಪೃಥ್ವಿ ರೇವಣಕರ್‌ಗೆ ಎರೇಸರ್‌ ಸಂಗ್ರಹಿಸುವ ಹವ್ಯಾಸವಿದ್ದು ಅವರ ಸಂಗ್ರಹದಲ್ಲಿ ಈಗ ವಿವಿಧ ಬಣ್ಣದ, ಪ್ರಾಣಿಗಳ, ಹಣ್ಣುಗಳ ಹತ್ತು ಹಲವು ಬಗೆಯ 430 ಎರೇಸರ್‌ಗಳಿವೆ. ಈ ಹವ್ಯಾಸವನ್ನು ಗುರುತಿಸಿ ವರ್ಲ್ಡ್ ರೆಕಾರ್ಡ್ಸ್ ಸಮುದಾಯವು ಖೋದರ್ಬಾರ ಸಂಗ್ರಹದಲ್ಲಿ ವಿಶ್ವದಾಖಲೆಗಳ ಪಟ್ಟಿಗೆ ಸೇರಿಸಿದ್ದು ಮುಖ್ಯಸ್ಥರಾದ ಯಶವಂತ್ ರಾವತ್, ಮುಕುಲ್ ಸೋನಿ ಪ್ರಥ್ವಿ ರೇವಣಕರ್‌ಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ಮುಖ್ಯಾಧ್ಯಾಪಕರು ವಿದ್ಯಾರ್ಥಿನಿಗೆ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: Virtual Tour: ದೆಹಲಿಯ PM ಸಂಗ್ರಹಾಲಯದಲ್ಲಿದೆ ಕನ್ನಡದ ʼನಮಸ್ತೆʼ

Exit mobile version