Site icon Vistara News

ಕರಾವಳಿಯಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆಯನ್ನು ಇಂದಿನಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಇದು ಈ ವರ್ಷದ ಮೊದಲ ಕಾರ್ಯಾಚರಣೆ. ಸಮಾಜಘಾತುಕ ವ್ಯಕ್ತಿಗಳಿಂದ ಅಥವಾ ಭಯೋತ್ಪಾದಕರಿಂದ ದಾಳಿ ನಡೆದ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸುವ ಉದ್ದೇಶದಿಂದ ಈ ಕಾರ್ಯಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್‌ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ ಹಾಗೂ ನೌಕಾಪಡೆ ಸಂಯುಕ್ತವಾಗಿ ಈ ಕಾರ್ಯಾಚರಣೆ ಹಮ್ಮಿಕೊಂಡಿವೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಾಚರಣೆಯಲ್ಲಿ ಇಲಾಖೆಗಳ ಸಿದ್ಧತೆಯ ಬಗ್ಗೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲಾಗುತ್ತಿದೆ.

ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಸ್ಪಂದಿಸುವ ಸಾಮರ್ಥ್ಯ ಹೆಚ್ಚಿಸುವುದು, ನಾಗರಿಕರು ಹಾಗೂ ವಿವಿಧ ರಕ್ಷಣಾ ಇಲಾಖೆಗಳ ನಡುವೆ ಉತ್ತಮ ಸಂಬಂಧ ಮೂಡಿಸುವುದು, ಅಗತ್ಯ ಇರುವಲ್ಲಿ ಶಕ್ತಿಯನ್ನು ಮತ್ತಷ್ಟು ವೃದ್ಧಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.

ಈ ಕಾರ್ಯಾಚರಣೆಯ ಕುರಿತು ಕಾರವಾರದ ಎಸ್‌ಪಿ ಸುಮನ್‌ ಪನ್ನೇಕರ್‌ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ ಇಂದು(ಸೋಮವಾರ) ಪೊಲೀಸರು ಕಾಳಿ ನದಿ ಸೇತುವೆಯ ಬಳಿ, ಬೈತಖೋಲ್ ಬಂದರಿಗೆ ಹೋಗುವ ದಾರಿಯಲ್ಲಿ ಇರುವ ರೈಲು ನಿಲ್ದಾಣ, ಕಡಲತೀರಗಳು, ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ಪರಿಶೀಲಿಸಲಾಗಿದೆ.

https://vistaranews.com/wp-content/uploads/2022/04/ezgif.com-gif-maker.mp4

ಅಲ್ಲದೆ, ಬೈತಖೋಲ್ ಬಂದರಿನ ಸುತ್ತಮುತ್ತ ಕೋಸ್ಟ್ ಗಾರ್ಡ್ ಸಿಬ್ಬಂದಿ ಮೀನುಗಾರಿಕೆ ದೋಣಿಗಳನ್ನು ಪರಿಶೀಲಿಸಲಾಗಿದೆ. ಅದರ ಪರವಾನಗಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ತಪಾಸಣೆ ಮಾಡಲಾಗಿದೆ. ಈ ಕಾರ್ಯಚರಣೆ ಆರಂಭಿಸುತ್ತಿದಂತೆಯೆ ಸುಅಮರು 18 ಜನ ಅಕ್ರಮವಾಗಿ ಕರಾವಳಿ ಪ್ರದೇಶಕ್ಕೆ ನುಗ್ಗಲು ಯತ್ನಿಸಿದ್ದು ಅವರನು ಸೆರೆ ಹಿಎಇಯಲಾಗಿದೆ ಹಾಗೂ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಾಗೂ ಈ ಕಾರ್ಯಾಚರಣೆ ನಾಳೆಯೂ(ಮಂಗಳವಾರ) ಮುಂದುವರೆಯಲಿದೆ ಎಂದು ಸುಮನ್‌ ಪನ್ನೇಕರ್‌ ತಿಳಿಸಿದರು.

https://vistaranews.com/wp-content/uploads/2022/04/WhatsApp-Video-2022-04-25-at-3.05.55-PM-2.mp4

ಇದನ್ನೂ ಓದಿ: ಶಿರಸಿಯಲ್ಲಿ KGF 2 ಓಪನಿಂಗ್‌ ಸೀನ್!‌ 15ನೇ ಶತಮಾನದ ವೀರಗಲ್ಲು ಪತ್ತೆ

Exit mobile version