ಶಿರಸಿ: ಯಲ್ಲಾಪುರ ತಾಲೂಕಿನಲ್ಲಿ ನಾರಾಯಣ ಮಹಾಬಲೇಶ್ವರ ಭಟ್ಟ ಎಂಬುವವರಿಗೆ ಸೇರಿದ ಜೇನುಪೆಟ್ಟಿಗೆಗಳನ್ನು ಹಾಳು ಮಾಡಿದ ದುಷ್ಕರ್ಮಿಗಳು ಜೇನನ್ನು ಕದ್ದಿರುವ (Crime News) ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಉಮ್ಮಚಗಿ ಪಂಚಾಯಿತಿ ವ್ಯಾಪ್ತಿಯ ಹೊರಮನೆ ಗ್ರಾಮದಲ್ಲಿ ನಾರಾಯಣ ಮಹಾಬಲೇಶ್ವರ ಭಟ್ಟ ಎಂಬುವವರು ತಮ್ಮ ಮನೆಯ ಅಕ್ಕಪಕ್ಕ ಮತ್ತು ತಮ್ಮದೇ ಅಡಕೆ ತೋಟದಲ್ಲಿ ಒಟ್ಟು ೧೮ ಜೇನುಗೂಡುಗಳನ್ನು ಇರಿಸಿದ್ದರು. ಎಂಟು ಜೇನು ಪೆಟ್ಟಿಗೆಗಳಿಗೆ ಹಾನಿ ಉಂಟು ಮಾಡಿರುವ ದುಷ್ಕರ್ಮಿಗಳು ಜೇನುತುಪ್ಪವನ್ನು ಕದ್ದೊಯ್ದಿದ್ದಾರೆ. ಜೇನು ಪೆಟ್ಟಿಗೆಗಳ ಮುಚ್ಚಳವನ್ನು ಕಿತ್ತೆಸೆದು, ಜೇನು ಪೆಟ್ಟಿಗೆಯನ್ನು ನಾಶ ಮಾಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ನಾರಾಯಣ ಭಟ್ಟರು ಮಂಚಿಕೇರಿ ಉಪ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲಿಸರು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕುಪ್ಪಯ್ಯ ಪೂಜಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ನಾರಾಯಣ ಭಟ್ಟ ಅವರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Rain News | ರಾಜ್ಯದಲ್ಲಿ ಮುಂದುವರಿದ ಧಾರಾಕಾರ ಮಳೆ; ಹಲವೆಡೆ ಪ್ರವಾಹ