ಬೆಂಗಳೂರು: ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಸಂಘಟನೆ (ದಾಕಹವಿಸ) ವತಿಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಜುಲೈ 15ರಿಂದ ಐದು ದಿನಗಳ ಕಾಲದ ಚಿತ್ರಕಲಾ ಪ್ರದರ್ಶನ ಆರಂಭವಾಗಲಿದೆ.
ಕಳೆದ ನಾಲ್ಕು ವರ್ಷಗಳಿಂದ ದಾಕಹವಿಸ ಸಂಘಟನೆಯು ʻARTSPRING’ ಎಂಬ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನ ನಡೆಸಿಕೊಂಡು ಬರುತ್ತಿದೆ. ಶುಕ್ರವಾರ ಆರಂಭವಾಗಲಿರುವ ಪ್ರದರ್ಶನದಲ್ಲಿ 30 ಕಲಾವಿದರು ಭಾಗವಹಿಸಲಿದ್ದಾರೆ. 1980ರಲ್ಲಿ ಆರಂಭವಾದ ಈ ಸಂಘಟನೆ 42 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಕಲೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಸಿಕರ ಮನಸೂರೆಗೊಂಡಿದೆ.
ಈ ವರ್ಷದ ಪ್ರದರ್ಶನವನ್ನು ಸಂಜೆ 5.30ಕ್ಕೆ ಕಲಾವಿದ ಚಂದ್ರನಾಥ ಆಚಾರ್ಯ ಉದ್ಘಾಟಿಸಲಿದ್ದಾರೆ. ಪಿಡಿಲಿಟಿಸ್ ಸಂಸ್ಥೆಯ ಮುಖ್ಯಸ್ಥ ಅಚ್ಯುತ್ ಗೌಡ ಮುಖ್ಯ ಅತಿಥಿಯಾಗಿ, ಪರಿಷತ್ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಭಾಗವಹಿಸಲಿದ್ದಾರೆ ಎಂದು ದಾಕಹವಿಸ ಉಪಾಧ್ಯಕ್ಷ ಗಣಪತಿ ಎಸ್. ಹೆಗಡೆ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿವಿಗೆ ಡಾ ಜಯಕರ ಶೆಟ್ಟಿ, ದಾವಣಗೆರೆ ವಿವಿಗೆ ಡಾ. ಕುಂಬಾರ್ ಕುಲಪತಿಗಳಾಗಿ ನೇಮಕ