ಶಿರಸಿ : ತಾಲೂಕಿನ ಬನವಾಸಿಯ ನರೂರು ಗ್ರಾಮದ ವೀರಭದ್ರೇಶ್ವರ ಮತ್ತು ಚೌಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ನಡೆದ ಪ್ರತಿಷ್ಠಾಪನೆಯ ವೇಳೆ ಗ್ರಾಮದ ಭಕ್ತರ ಜೊತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕೆಂಡ ತುಳಿದರು.
ಇದನ್ನೂ ಓದಿ : ಶಿರಸಿಯಲ್ಲಿ KGF 2 ಓಪನಿಂಗ್ ಸೀನ್! 15ನೇ ಶತಮಾನದ ವೀರಗಲ್ಲು ಪತ್ತೆ
ಪ್ರತೀ ವರ್ಷ ನಡೆಯುವ ಈ ಉತ್ಸವದಲ್ಲಿ ಕೆಂಡ ತುಳಿಯುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಭಕ್ತರ ಇಷ್ಟಾರ್ಥಕ್ಕಾಗಿ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಸ್ಥಳದಲ್ಲಿ ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ನೆರೆದಿದ್ದರು.