ಅಂಕೋಲಾ: ರೈತನೊಬ್ಬ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ಗಾಯಗೊಂಡು ಸಾವನ್ನಪ್ಪಿದ ಘಟನೆ (Farmer Death) ತಾಲೂಕಿನ ಮೊರಳ್ಳಿ ಮಾಣಿಗುಡ್ಡ ಬಳಿ ನಡೆದಿದೆ. ಮೊಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಳ್ಳಿ ಮಾಣಿಗುಡ್ಡ ನಿವಾಸಿ ನಾಗರಾಜ ತಿಮ್ಮಪ್ಪ ಗೌಡ (37) ಮೃತ ದುರ್ದೈವಿಯಾಗಿದ್ದಾನೆ.
ಇದನ್ನೂ ಓದಿ: Accident: ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ; ಮಹಿಳೆ ಬಲಿ; ಭೀಕರ ದೃಶ್ಯ ವೈರಲ್
ರೈತ ನಾಗರಾಜ ಶುಕ್ರವಾರ ಬೆಳಗ್ಗೆ ಮೊರಳ್ಳಿಯಲ್ಲಿರುವ ಸುರೇಶ ನಾಯಕ ಎಂಬುವವರ ಗದ್ದೆಯಲ್ಲಿ ಉಳುಮೆ ಮಾಡಲು ತೆರಳಿದ್ದ. ಈ ವೇಳೆ ವಿಪರೀತ ಮಳೆ ಬರುತ್ತಿದ್ದ ಹಿನ್ನಲೆ ವಾಪಸ್ಸಾಗಿದ್ದು, ಮದ್ಯಾಹ್ನದ ನಂತರ ಮಳೆ ಕಡಿಮೆಯಾದ ಬಳಿಕ ಮತ್ತೆ ಗದ್ದೆಗೆ ತೆರಳಿದ್ದ. ಪವರ್ ಟಿಲ್ಲರ್ ಮೂಲಕ ಉಳುಮೆ ಮಾಡುತ್ತಿದ್ದ ವೇಳೆ ಚಕ್ರಕ್ಕೆ ಕಾಲು ಸಿಲುಕಿದ್ದು, ಗಂಭೀರ ಸ್ವರೂಪದ ಗಾಯಗಳಾಗಿವೆ. ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿದ್ದು, ಗದ್ದೆಯಲ್ಲೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Karnataka Weather : ಹೊನ್ನಾವರದ ಹಲವೆಡೆ ನೆರೆ ಪರಿಸ್ಥಿತಿ; ಭಾನುವಾರವೂ ಮಳೆ ಎಚ್ಚರಿಕೆ
ಸ್ಥಳಕ್ಕೆ ಅಂಕೋಲಾ ಠಾಣೆಯ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.