Site icon Vistara News

Gokarna Beach‌ : ಗೋಕರ್ಣ ಸಮುದ್ರದಲ್ಲಿ ಮುಳುಗುತ್ತಿದ್ದ ಬೆಂಗಳೂರಿನ ಐವರು ಪ್ರವಾಸಿಗರ ರಕ್ಷಣೆ

Gokarna Beach Five tourists rescued

ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada District) ಪ್ರಸಿದ್ಧ ಪ್ರವಾಸಿ (Tourist place) ಮತ್ತು ಪುಣ್ಯ ಕ್ಷೇತ್ರವಾದ (Religious Place) ಗೋಕರ್ಣದ ಸಮುದ್ರದಲ್ಲಿ (Gokarna Beach‌) ಈಜಲು ಹೋಗಿ ಮುಳುಗುತ್ತಿದ್ದ ಐವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಗೋಕರ್ಣದ ಮುಖ್ಯ ಕಡಲತೀರದಲ್ಲಿ ಈ ಘಟನೆ ನಡೆದಿದೆ.

ಋತುರಾಜ್ (26), ಶ್ರೀಖಾಂಚು ಗುಪ್ತಾ (28), ಪ್ರಶಾಂತ ಚಂದ್ರಶೇಖರ್ (28), ಆರುಷಿ ಬನ್ಸಾಲ್ (27), ರೀತು ಪರ್ಹಾದಾಸ್ ರಕ್ಷಣೆಗೊಳಗಾದ ಪ್ರವಾಸಿಗರು ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ‌ ಉದ್ಯೋಗಿಗಳಾಗಿದ್ದು, ಗಣೇಶ ಚತುರ್ಥಿಗೆ (Ganesh Chaturthi) ರಜೆ ಇರುವ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದರು.

ಇದನ್ನೂ ಓದಿ: Cauvery water dispute : ತಮಿಳುನಾಡಿಗೆ ಕೂಡಲೇ ನೀರು ನಿಲ್ಲಿಸಿ: ಬಸವರಾಜ ಬೊಮ್ಮಾಯಿ ಗುಡುಗು

ಇವರು ಮೊದಲು ಸಮುದ್ರದಲ್ಲಿ ಆಟವಾಡಲು ಇಳಿದಿದ್ದಾರೆ. ಕೊನೆಗೆ ಈಜಲು ಶುರು ಮಾಡಿದ್ದಾರೆ. ಆದರೆ, ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬರಲಾಗದೆ ಎಲ್ಲರೂ ಮುಳುಗುವ ಸ್ಥಿತಿಯಲ್ಲಿದ್ದರು. ಈ ವೇಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅಲ್ಲೇ ಸಮೀಪ ಇದ್ದ ಲೈಫ್‌ಗಾರ್ಡ್ ಸಿಬ್ಬಂದಿಯು ಕೂಡಲೇ ಸಮುದ್ರಕ್ಕೆ ಜಿಗಿದು ಎಲ್ಲ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.

ಇವರಲ್ಲಿ ಇಬ್ಬರು ಪ್ರವಾಸಿಗರು ತೀವ್ರ ಅಸ್ವಸ್ಥಗೊಂಡಿದ್ದರು. ಅಸ್ವಸ್ಥಗೊಂಡಿದ್ದ ಪ್ರವಾಸಿಗರನ್ನು ಕೂಡಲೇ ಗೋಕರ್ಣ ಪ್ರಾಥಮಿಕ ಸಮುದಾಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಗೋಕರ್ಣ ಪೊಲೀಸರು (Gokarna police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮುರ್ಡೇಶ್ವರದಲ್ಲಿ ಕಳೆದ ತಿಂಗಳು ನೀರುಪಾಲಾಗಿದ್ದ ಪ್ರವಾಸಿಗ

ಮುರ್ಡೇಶ್ವರ ಕಡಲ ತೀರದಲ್ಲಿ (Murdeshwara beach) ಆಗಸ್ಟ್‌ 14ರಂದು ನೀರಿಗೆ ಇಳಿದಿದ್ದ ಪ್ರವಾಸಿಗರಲ್ಲಿ ಒಬ್ಬರು ನೀರುಪಾಲಾಗಿ (Tourist drowned), ಇನ್ನೊಬ್ಬರನ್ನು ರಕ್ಷಿಸಲಾಗಿತ್ತು. ಕೋಲಾರ ಮೂಲದ ಮಣಿತೇಜಾ (21) ನೀರುಪಾಲಾಗಿದ್ದರೆ (Youth drowned), ಕೋಲಾರದ ಯಶ್ (22) ಎಂಬುವವರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: Cauvery water dispute : ಕಾವೇರಿ ಸಂಬಂಧ ಯಾವುದೇ ಕಾರಣಕ್ಕೂ ಮೋದಿಯನ್ನು ಭೇಟಿಯಾಗಲ್ಲವೆಂದ ಎಚ್.ಡಿ. ದೇವೇಗೌಡ

ಕೋಲಾರ ಮೂಲದ 22 ಮಂದಿ ಪ್ರವಾಸಿಗರು ಮುರ್ಡೇಶ್ವರಕ್ಕೆ ಬಂದಿದ್ದರು. ಎಲ್ಲರೂ ಸಮುದ್ರ ತೀರದಲ್ಲೇ ನೀರಾಟವಾಡುತ್ತಿದ್ದರೆ, ಇಬ್ಬರು ಸ್ವಲ್ಪ ದೂರ ನೀರಿನಲ್ಲಿ ಮುಂದೆ ಹೋಗಿದ್ದಾರೆ. ಸಮುದ್ರಕ್ಕಿಳಿಯದಂತೆ ನಿರ್ಬಂಧ ಇದ್ದರೂ ಪ್ರವಾಸಿಗರು ನೀರಿಗೆ ಇಳಿದಿದ್ದರು. ಈ ನಡುವೆ, ಅವರಲ್ಲಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕೂಡಲೇ ಅಲ್ಲಿದ್ದ ರಕ್ಷಕರು ಅವರಿಬ್ಬರನ್ನು ರಕ್ಷಿಸಲು ಮುಂದಾದರೂ ಯಶ್‌ ಮಾತ್ರ ಅವರ ಕೈಗೆ ಸಿಕ್ಕಿದ್ದರು.

Exit mobile version