ಶಿರಸಿ: ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ತನ್ನ ಮಾವನೆಂದು ನಂಬಿಸಿ, ಮಹಿಳೆಯೊಬ್ಬಳು ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಶಿರಸಿ ಮೂಲದ ರೇಖಾ ಹೆಗಡೆ ಅಲಿಯಾಸ್ ಮೈತ್ರಿ ಎಂಬುವವಳು ಸಂಸದ ಹೆಸರು ಬಳಸಿ ಮಹಿಳೆಗೆ ವಂಚನೆ ಮಾಡಿದ್ದಾಳೆ.
ಅನಂತಕುಮಾರ ಹೆಗಡೆ ತನ್ನ ಸೋದರ ಸಂಬಂಧಿ ಎಂದು ಪರಿಚಯಿಸಿಕೊಂಡು ಮೈಸೂರಿನಲ್ಲಿ ಕುವೆಂಪು ನಗರ ನಿವಾಸಿ ಶ್ರೀಮತಿ ಮಂಜುಳಾ ಎಂಬುವವರ ಮನೆ ಬಾಡಿಗೆ ಪಡೆದು ವಾಸವಾಗಿದ್ದಳು.
ಇದನ್ನೂ ಓದಿ | ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್
ನಂತರ ಸ್ವಂತ ಮನೆ ಕಟ್ಟುವ ಕಾರಣ ಹೇಳಿ ₹7ಲಕ್ಷ ಮಂಜುಳಾ ಬಳಿ ಪಡೆದಿದ್ದಳು. ಹಣವನ್ನು ಮರಳಿ ಕೊಡಲು ಕೇಳಿದಾಗ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ರೇಖಾ ಹೆಗಡೆ ಪರಾರಿಯಾಗಿದ್ದಳು. ದೂರವಾಣಿ ಮೂಲಕ ಹಣಕ್ಕಾಗಿ ಒತ್ತಾಯಿಸಿದ ನಂತರ ₹2.5ಲಕ್ಷ ಹಿಂದಿರುಗಿಸಿದ್ದಳು. ಉಳಿದ ಹಣ ಕೇಳಿದರೆ ಮತ್ತೊಮ್ಮೆ ಸಂಸದರ ಹೆಸರು ಹೇಳಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಸಂಸದರ ಬಳಿ ಕೇಳಿದಾಗ, ಆ ಹೆಸರಿನ ಯಾವ ಮಹಿಳೆಯೂ ಪರಿಚಯವಿಲ್ಲ. ತನ್ನ ಸಂಬಂಧಿಯಲ್ಲ ಎಂಬ ಉತ್ತರ ಬಂದಿದೆ. ತಾವು ಮೋಸ ಹೋಗಿರುವುದು ಮೈಸೂರಿನ ಮಹಿಳೆಗೆ ಮನವರಿಕೆಯಾಗಿದೆ.
ಈ ಕುರಿತು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ ಹೆಗಡೆ ದೂರು ನೀಡಿದ್ದಾರೆ. ಹಣ ವಂಚನೆ ಹಾಗೂ ಸಂಸದರ ಹೆಸರನ್ನು ದುರುಪಯೋಗ ಮಾಡಿಕೊಂಡು ಗೌರವ ಘನತೆಗೆ ಚ್ಯುತಿ ತರುವ ಕೆಲಸ ಮಾಡಲಾಗಿದೆ. ಪ್ರಕರಣ ದಾಖಲೆಯ ಮೇರೆಗೆ ರೇಖಾ ಹೆಗಡೆ ಅಲಿಯಾಸ್ ಮೈತ್ರಿ ಎಂಬುವವಳ ಹುಡುಕಾಟಕ್ಕಾಗಿ ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಸಲಾಗಿದೆ.
ಇದನ್ನೂ ಓದಿ| ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್