Site icon Vistara News

Halli Hyda Pyateg Banda: ʻಹಳ್ಳಿ ಹೈದ ಪ್ಯಾಟೆಗ್‌ ಬಂದʼ ಮಾಜಿ ಸ್ಪರ್ಧಿ ಕಳ್ಳತನ‌ ಪ್ರಕರಣದಲ್ಲಿ ಸೆರೆ!

Halli Hyda Pyateg Banda former contestant bhaskar siddi arrested in theft case

ಶಿರಸಿ (ಯಲ್ಲಾಪುರ): ಖಾಸಗಿ ಚಾನೆಲ್‌ವೊಂದು ನಡೆಸುತ್ತಿದ್ದ ʻಹಳ್ಳಿ ಹೈದ ಪ್ಯಾಟೆಗ್‌ ಬಂದʼ (Halli Hyda Pyateg Banda) ಸೀಸನ್ 2ರಲ್ಲಿ ಭಾಗವಹಿಸಿದ್ದ ಭಾಸ್ಕರ್ ಸಿದ್ದಿ ಕಳ್ಳತನ‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (Ankola) ಬಾಳೆಗದ್ದೆ ಗ್ರಾಮದ ಯುವಕ ಭಾಸ್ಕರ್ ಸಿದ್ದಿ ಬಂಧನಕ್ಕೊಳಗಾದ ಆರೋಪಿ.

ಯಲ್ಲಾಪುರದ ಗುಳ್ಳಾಪುರದ ಜಿ.ಆರ್.ಭಟ್ಟ ಅವರ ವಿಶ್ವಾಸ್ ಜನರಲ್ ಸ್ಟೋರ್ಸ್‌ನಲ್ಲಿ ಹಣವನ್ನು ಕಳ್ಳತನ ಮಾಡಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಆರೋಪಿ ಹಣ ಕದಿಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇಷ್ಟು ಮಾತ್ರವಲ್ಲ ಇನ್ನೊಂದು ಪ್ರಕರಣದಲ್ಲಿ ಇದೇ ನವೆಂಬರ್‌ 8ರಂದು ಬಿಡುಗಡೆ ಹೊಂದಿದ್ದ. ಅಂದೇ ರಾತ್ರಿ ಗುಳ್ಳಾಪುರದ ಜನರಲ್ ಸ್ಟೋರ್ಸ್ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಈತನ ವಿಡಿಯೊ ಪತ್ತೆ ಹಚ್ಚಿದ ಯಲ್ಲಾಪುರ ಪೊಲೀಸರು ಆರೋಪಿ ಭಾಸ್ಕರ್ ಸಿದ್ದಿಯನ್ನು ಬಂಧಿಸಿದ್ದಾರೆ.

ಅಂಗಡಿಯಲ್ಲಿದ್ದ 38000 ರೂ. ನಗದು ಕಳ್ಳತನ ಮಾಡಿದ್ದ ಭಾಸ್ಕರ್‌ ಸಿದ್ದಿ, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ 14,300 ರೂ ವಶಪಡಿಸಿಕೊಂಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Exam Scam: ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್ ಕೊನೆಗೂ ಬಂಧನ

2010ರಲ್ಲಿ ಪ್ರಾರ೦ಭವಾದ ʻಹಳ್ಳಿ ಹೈದ ಪ್ಯಾಟೆಗ್‌ ಬಂದʼ ಮೊದಲ ಸೀಸನ್‌ನಲ್ಲಿ ಭಾಗವಹಿಸುವವರ ಸಂಸ್ಕೃತಿ ಮತ್ತು ನಡವಳಿಕೆಯ ಮೇಲೆ ಭಾರಿ ವಿವಾದಗಳು ಆಗಿತ್ತು. ಹಳ್ಳಿ ಹುಡುಗರು ಎಂಟು ನಗರ ಹುಡುಗಿಯರೊಂದಿಗೆ ಸಿಟಿಗೆ ಬರುತ್ತಾರೆ. ಹೇಗೆ ಹುಡುಗಿಯರಿಂದ ತರಬೇತಿ ಪಡೆಯುತ್ತಾರೆ? ಸ್ಫರ್ಧಾತ್ಮಕ ನಗರದಲ್ಲಿ ಅವರು ಹೇಗೆ ಬದುಕುತ್ತಾರೆ? ಎಂಬುದೇ ಈ ಕಾರ್ಯಕ್ರಮದ ಆಟ. ಇಂತಹ ಒಂದು ಕಾರ್ಯಕ್ರಮದಲ್ಲಿ ಈ ಭಾಸ್ಕರ ಸಿದ್ದಿ ಸಹ ಪಾಲ್ಗೊಂಡಿದ್ದ. ಈಗ ಕಳ್ಳತನದ ಆರೋಪದ ಮೇರೆಗೆ ಸೆರೆಯಾಗಿದ್ದಾನೆ.

Exit mobile version